ಮೋದಿ ವಿರುದ್ದ ಜಿಗ್ನೇಶ್ ಮೆವಾನಿ ರ‍್ಯಾಲಿಯಲ್ಲಿ ಖಾಲಿ ಕುರ್ಚಿಗಳದ್ದೇ ಕಾರುಬಾರು
Recommended Video

ದೆಹಲಿಯ ಪಾರ್ಲಿಮೆಂಟ್ ರಸ್ತೆಯಲ್ಲಿ ಕೇಂದ್ರ ಸರಕಾರದ ವಿರುದ್ದ ಗುಜರಾತ್ ವಡ್ಗಾಂ ಕ್ಷೇತ್ರದ ನೂತನ ಶಾಸಕ ಮತ್ತು ದಲಿತ ಮುಖಂಡ ಜಿಗ್ನೇಶ್ ಮೆವಾನಿ ನೇತೃತ್ವದಲ್ಲಿ ನಡೆದ ' ಯುವ ಹೂಂಕಾರ್ ರ‍್ಯಾಲಿ' ವಿಫಲಗೊಂಡಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಬಹುದೆಂದು ದೆಹಲಿಯ ಪೊಲೀಸರು ಭಾರೀ ಭದ್ರತೆ ಒದಗಿಸಿದ್ದರು. ರ‍್ಯಾಲಿಯಲ್ಲಿ ಬೆರಳಣಿಕೆಯ ಸುಮಾರು ಮುನ್ನೂರು ಜನ ಮಾತ್ರ ಭಾಗವಹಿಸಿದ್ದರು. ಆ ಮೂಲಕ, ರಾಜಧಾನಿಯಲ್ಲಿ ಮೊದಲ ರ‍್ಯಾಲಿಯ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಭರ್ಜರಿ ಎಂಟ್ರಿ ಕೊಡಬಹುದು ಎನ್ನುವ ಮೆವಾನಿ ಲೆಕ್ಕಾಚಾರ ಉಲ್ಟಾ ಹೊಡೆದಿದೆ.
ಮಂಗಳವಾರ (ಜ 9) ದೆಹಲಿ ಪೊಲೀಸರ ಅನುಮತಿ ನಿರಾಕರಣೆಯ ಹೊರತಾಗಿಯೂ ರ‍್ಯಾಲಿ ನಡೆಸಿ ಮಾತನಾಡಿದ ಜಿಗ್ನೇಶ್, ಒಬ್ಬ ಚುನಾಯಿತ ಪ್ರತಿನಿಧಿಗೆ ಮಾತನಾಡಲು ಅವಕಾಶ ನೀಡದ ಮೋದಿ ಸರಕಾರ, ಗುಜರಾತ್ ಮಾದರಿ ಅಲ್ಲದೇ ಮತ್ತಿನ್ನೇನು ಎಂದು ಹೂಂಕರಿಸಿದ್ದಾರೆ.
ನನ್ನ ಮೇಲೆ ಎಷ್ಟೇ ದಾಳಿ ನಡೆದರೂ, ನಾನು ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಳ್ಳುವುದಿಲ್ಲ ಎಂದ ಜಿಗ್ನೇಶ್, ಭ್ರಷ್ಟಾಚಾರ, ನಿರುದ್ಯೋಗ, ಬಡತನದಂತಹ ಪ್ರಮುಖ ವಿಷಯಗಳಿಗೆ ಬೆಲೆಯಿಲ್ಲದೇ, ಲವ್ ಜಿಹಾದ್, ಘರ್ ವಾಪ್ಸಿ, ಗೋಹತ್ಯೆ ಮುಂತಾದ ವಿಚಾರಗಳು ಮುನ್ನಲೆಗೆ ಬಂದಿರುವುದು ವಿಷಾದನೀಯ ಎಂದು ಜಿಗ್ನೇಶ್ ಮೆವಾನಿ ಹೇಳಿದ್ದಾರೆ.
ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಜಾದ್ ಅವರನ್ನು ಬಿಡುಗಡೆಗೊಳಿಸಬೇಕು, ಉದ್ಯೋಗ, ಶಿಕ್ಷಣ ಮುಂತಾದ ವಿಚಾರಗಳನ್ನು ಇಟ್ಟುಕೊಂಡು ಯುವ ಹೂಂಕಾರ್ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ರ‍್ಯಾಲಿಯಲ್ಲಿ ಭಾಗವಹಿಸಬಹುದು ಎಂದು ಪೊಲೀಸರು ನಿರೀಕ್ಷಿಸಿದ್ದರು. ಮುಂದೆ ಓದಿ..

ಭಾರತದ ಸಂವಿಧಾನ ಮತ್ತು ಪ್ರಾಚೀನ ಹಿಂದೂ ಕಾನೂನು ಪಠ್ಯ
ಭಾಷಣದುದ್ದಕ್ಕೂ ಪ್ರಧಾನಿ ಮೋದಿ ವಿರುದ್ದ ಅಕ್ಷರಸ: ಹರಿಹಾಯ್ದ ಜಿಗ್ನೇಶ್ ಮೆವಾನಿ, ಭಾರತದ ಸಂವಿಧಾನ ಮತ್ತು ಪ್ರಾಚೀನ ಹಿಂದೂ ಕಾನೂನು ಪಠ್ಯವನ್ನು ನೀಡಿದರೆ ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎಂದು ಮೋದಿಯವರನ್ನು ಪ್ರಶ್ನಿಸಿದ್ದಾರೆ. ಜೆಎನ್‍ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್, ಶೆಹಲಾ ರಾಶಿದ್, ಉಮರ್ ಖಾಲಿದ್ ಮೊದಲಾದವರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

ಜನರಿಗಿಂತ ರ‍್ಯಾಲಿಯಲ್ಲಿ ಪೊಲೀಸರೇ ಜಾಸ್ತಿ
ಸುಮಾರು 1,500ಕ್ಕೂ ಹೆಚ್ಚು ಪೊಲೀಸರನ್ನು ರ‍್ಯಾಲಿಯ ಬಂದೋಬಸ್ತಿಗೆ ನಿಯೋಜಿಸಲಾಗಿತ್ತು. ಆದರೆ, ರ‍್ಯಾಲಿಯಲ್ಲಿ ಖಾಲಿ ಕುರ್ಚಿಗಳೇ ಜಾಸ್ತಿ ಇದ್ದುದ್ದರಿಂದ, 1,200ಕ್ಕೂ ಹೆಚ್ಚು ಪೊಲೀಸರನ್ನು ವಾಪಸ್ ಕರೆಸಿಕೊಳ್ಳಲಾಯಿತು. ಯುವ ಹೂಂಕಾರ್ ರ‍್ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು.

ಟ್ವಿಟ್ಟರ್ ನಲ್ಲಿ ಭಾರೀ ಅಣಕ
ಜಿಗ್ನೇಶ್ ಮೆವಾನಿ ರ‍್ಯಾಲಿ ವಿಫಲಗೊಂಡಿದ್ದಕ್ಕೆ ಟ್ವಿಟ್ಟರ್ ನಲ್ಲಿ ಅಣಕವಾಡಲಾಗುತ್ತಿದೆ. ಮೆವಾನಿ ರ‍್ಯಾಲಿಯಲ್ಲಿ ಇನ್ನೂರು ಜನ ಇದ್ದರು, ಅದರಲ್ಲಿ 187 ಪೊಲೀಸರು ಮಿಕ್ಕವರು ಕೆಲಸ ಇಲ್ಲದವರು. ಇದು ರಾಹುಲ್ ಗಾಂಧಿಗೆ ಜನ ನೀಡಿದ ಸಂದೇಶ ಎನ್ನುವ ಟ್ವೀಟ್.

ಪ್ರತಿಯೊಬ್ಬರಿಗೂ ನೀಲಿ ಬಾವುಟ ಮತ್ತು ಐನೂರು ರೂಪಾಯಿ
ರ‍್ಯಾಲಿ ಮಧ್ಯಾಹ್ನ ಹನ್ನೆರಡು ಗಂಟೆಗೆ ಶುರುವಾಗಬೇಕಿತ್ತು, ಆದರೆ ಜನನೇ ಇಲ್ಲ. ರ‍್ಯಾಲಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ನೀಲಿ ಬಾವುಟ ಮತ್ತು ಐನೂರು ರೂಪಾಯಿ ನೀಡುವುದಾಗಿ ಆಮಿಷವೊಡ್ಡಲಾಗಿತ್ತು. ಎಲ್ಲಾ ವಿದೇಶಿ ಎನ್ಜಿಓಗಳ ದುಡ್ಡು ಎನ್ನುವ ಟ್ವೀಟ್.

ನಾವು ಹೇಳುತ್ತೆ ಭಾರತ್ ಮಾತಾಕೀ ಜೈ
ಅವರು ಹೇಳುತ್ತಾರೆ ಭಾರತ್ ತೇರಿ ತರ್ಕೇ ಹೋಂಗೆ ಇನ್ಸಾ ಅಲ್ಲಾ...ನಾವು ಹೇಳುತ್ತೆ ಭಾರತ್ ಮಾತಾಕೀ ಜೈ. ಮೆವಾನಿಕಿ ಶಾದಿ ಮೆ ಅಬ್ದುಲ್ಲಾ ದೀವಾನಾ.. ಎನ್ನುವ ಕಾಲೆಳೆಯುವ ಟ್ವೀಟ್.
-
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ












Click it and Unblock the Notifications