Maharashtra-Jharkhand Election: ಜಾರ್ಖಂಡ್‌ನಲ್ಲಿ ಹೆಚ್ಚು, ಮಹಾರಾಷ್ಟ್ರದಲ್ಲಿ ಕಡಿಮೆ ಮತದಾನ
ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನಲ್ಲಿ ಇಂದು ವಿಧಾನಸಭೆ ಚುನಾವಣೆಗಳ ಹಿನ್ನೆಲೆ ಮತದಾನ ನಡೆಯುತ್ತಿದೆ. ಭಾರತೀಯ ಚುನಾವಣಾ ಆಯೋಗದ ಪ್ರಕಾರ, ಮಹಾರಾಷ್ಟ್ರದಲ್ಲಿ ಒಂದೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಬೆಳಿಗ್ಗೆ 11 ಗಂಟೆಯವರೆಗೆ ಶೇ 18.14ರಷ್ಟು ಮತದಾನವಾಗಿದೆ. ಜಾರ್ಖಂಡ್‌ನಲ್ಲಿ ಅದೇ ಸಮಯದಲ್ಲಿ ಶೇ 31.37ರಷ್ಟು ಮತದಾನವಾಗಿದೆ ಎಂದು ಮಾಹಿತಿ ನೀಡಿದೆ.
ಭಾರತೀಯ ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಶೇ 30ರಷ್ಟು ಮತದಾನವಾಗಿದೆ. ನಾಂದೇಡ್ ಜಿಲ್ಲೆಯಲ್ಲಿ ಅತಿ ಕಡಿಮೆ ಅಂದರೆ ಶೇ 13.67ರಷ್ಟು ಮತದಾನ ವರದಿಯಾಗಿದೆ.

ಎಲ್ಲೆಲ್ಲಿ ಎಷ್ಟು ಮತದಾನ?: ಮುಂಬೈ ನಗರದಲ್ಲಿ ಶೇ 15.78, ಮುಂಬೈ ಉಪನಗರದಲ್ಲಿ ಶೇ 17.99, ನಾಗ್ಪುರದಲ್ಲಿ ಶೇ 18.90, ಥಾಣೆಯಲ್ಲಿ ಶೇ 16.63, ಔರಂಗಾಬಾದ್ ಶೇ.17, ಪುಣೆಯಲ್ಲಿ ಶೇ.15, ನಾಸಿಕ್ ಶೇ 18ರಷ್ಟು ಮತದಾನವಾಗಿದೆ. 18, ಕೊಲ್ಲಾಪುರ ಶೇ 20, ಧುಲೆ ಶೇ 20, ಪಾಲ್ಘರ್ ಶೇ.19, ರತ್ನಗಿರಿ ಶೇ.22 ಮತ್ತು ಲಾತೂರ್ ಶೇ.18ರಷ್ಟು ಮತದಾನ ವರದಿಯಾಗಿದೆ.
ಸಿಂಧುದುರ್ಗದಲ್ಲಿ ಶೇ 20, ವಾರ್ಧಾದಲ್ಲಿ ಶೇ 18, ಉಸ್ಮಾನಾಬಾದ್‌ನಲ್ಲಿ ಶೇ 17, ವಾಶಿಮ್‌ನಲ್ಲಿ ಶೇ 16, ಯವತ್ಮಾಲ್‌ನಲ್ಲಿ ಶೇ 19, ಸೋಲಾಪುರದಲ್ಲಿ ಶೇ 15, ಸಾಂಗ್ಲಿಯಲ್ಲಿ ಶೇ 15, ಸಾಂಗ್ಲಿಯಲ್ಲಿ ಶೇ 18ರಷ್ಟು ಮತದಾನವಾಗಿದೆ. ಅಮರಾವತಿ ಶೇ.17, ಬೀಡ್ ಶೇ.17, ಭಂಡಾರ ಶೇ.19, ಬುಲ್ಧಾನ ಶೇ.19, ಚಂದ್ರಾಪುರ ಶೇ.21, ಗೊಂಡಿಯಾ ಶೇ.23, ಹಿಂಗೋಲಿ ಶೇ.19ರಷ್ಟು ಮತದಾನ ನಡೆದಿದೆ.

ಜಾರ್ಖಂಡ್‌ನಲ್ಲಿ ಎಷ್ಟು ಮತದಾನ?
ಜಾರ್ಖಂಡ್‌ನಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ.31.37ರಷ್ಟು ಮತದಾನವಾಗಿದೆ. ಪಾಕುರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಶೇ.35ರಷ್ಟು ಮತದಾನವಾಗಿದೆ. ಬೊಕಾರೊದಲ್ಲಿ ಶೇ.27.72ರಷ್ಟು ಕನಿಷ್ಠ ಮತದಾನವಾಗಿದೆ.
ದಿಯೋಘರ್ ಶೇ.32, ಧನ್ಬಾದ್ ಶೇ.28, ದುಮ್ಕಾ ಶೇ.33, ಗಿರಿದಿಹ್ ಶೇ.31, ಹಜಾರಿಬಾಗ್ ಶೇ.31, ಜಮ್ತಾರಾ ಶೇ.33, ರಾಂಚಿ ಶೇ.30ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ 288 ಸ್ಥಾನಗಳಿಗೆ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಉಳಿದ 38 ಸ್ಥಾನಗಳಿಗೆ ಇಂದು ಬೆಳಿಗ್ಗೆ 7 ಗಂಟೆಯಿಂದ ಮತದಾನ ಶುರುವಾಯಿತು.

ಇಂದು ಮತದಾನ ಮಾಡಿ ಮಾತನಾಡಿದ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಇಂದು ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ಎಲ್ಲರೂ ಭಾಗವಹಿಸಿ ಮತದಾನ ಮಾಡಿ. ಇದು ಮಹಾರಾಷ್ಟ್ರ ಹಾಗೂ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಈ ಹಿಂದೆ 2019ರಲ್ಲಿ ಜನಾದೇಶ ಏನಾಯಿತು ಎಂಬುದನ್ನು ಜನರು ಮರೆತಿಲ್ಲ. ಜನರು ಮಹಾ ವಿಕಾಸ್ ಅಘಾಡಿ ಅವರ ಎರಡೂವರೆ ವರ್ಷಗಳ ಆಡಳಿತವನ್ನು ಜನರ ನೋಡಿದ್ದಾರೆ. ಈ ಬಾರಿ ಹೆಚ್ಚು ಬಹುಮತದೊಂದಿಗೆ ನಮ್ಮ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾತನಾಡಿ, ಪ್ರಜಾಪ್ರಭುತ್ವದ ಹಬ್ಬ ನಡೆಯುತ್ತಿದೆ ಮತ್ತು ಪ್ರಜಾಪ್ರಭುತ್ವದಲ್ಲಿ ಭಾಗವಹಿಸುವುದು ಬಹಳ ಮುಖ್ಯ. ತಮ್ಮ ಸರ್ಕಾರದಿಂದ ನಿರೀಕ್ಷೆಗಳನ್ನು ಹೊಂದಿರುವ ಜನರು ಮತದಾನಕ್ಕೆ ಬರುವುದು ಬಹಳ ಮುಖ್ಯವಾಗಿದೆ. ಎಲ್ಲರೂ ಮತದಾನ ಮಾಡಿ ಎಂದು ಹೇಳಿದ್ದಾರೆ.












Click it and Unblock the Notifications