Get Updates
Get notified of breaking news, exclusive insights, and must-see stories!

Jharkhand Election 2024: ಕಾಂಗ್ರೆಸ್ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ

ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 40 ಹೆಸರುಗಳು ಇವೆ. ಈ 40 ಜನರು ಸ್ಟಾರ್ ಪ್ರಚಾರಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರದ ಜವಾಬ್ದಾರಿಯನ್ನು ಈ ನಾಯಕರು ವಹಿಸಿಕೊಳ್ಳಲಿದ್ದಾರೆ. ಹಾಗಾದರೆ ಈ ಪಟ್ಟಿಯಲ್ಲಿ ಇರುವ ಸ್ಟಾರ್ ಪ್ರಚಾರಕರು ಯಾರು?

ಸ್ಟಾರ್ ಪ್ರಚಾರಕರಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ಗುಲಾಮ್ ಅಹಮದ್ ಮಿರ್, ಕೇಶವ್ ಮಹತೋ ಕಮಲೇಶ್, ರಾಜೇಶ್ ಠಾಕೂರ್, ಡಾ. ರಾಮೇಶ್ವರ್ ಓರಾನ್, ಪ್ರದೀಪ್ ಯಾದವ್ ಮುಂತಾದ ಪ್ರಮುಖ ನಾಯಕರ ಹೆಸರುಗಳಿವೆ.

Jharkhand Assembly Elections 2024 Congress releases list of 40 star campaigners

ಕಾಂಗ್ರೆಸ್ ನ 40 ಸ್ಟಾರ್ ಪ್ರಚಾರಕರು:-

ಮಲ್ಲಿಕಾರ್ಜುನ ಖರ್ಗೆ

ಸೋನಿಯಾ ಗಾಂಧಿ

ರಾಹುಲ್ ಗಾಂಧಿ

ಪ್ರಿಯಾಂಕಾ ಗಾಂಧಿ ವಾದ್ರಾ

ಕೆ.ಸಿ. ವೇಣುಗೋಪಾಲ್

ಗುಲಾಮ್ ಅಹ್ಮದ್ ಮಿರ್

ಕೇಶವ್ ಮಹತೋ ಕಮಲೇಶ್

ರಾಮೇಶ್ವರ್ ಓರಾನ್

ಭೂಪೇಶ್ ಭಾಗೇಲ್

ಸಲ್ಮಾನ್ ಖುರ್ಷಿದ್

ತಾರಿಕ್ ಅನ್ವರ್

ಅಧೀರ್ ರಂಜನ್ ಚೌಧರಿ

ಮಲ್ಲು ಭಟ್ಟಿ ವಿಕ್ರಮಾರ್ಕ

ಬಿ.ಕೆ. ಹರಿಪ್ರಸಾದ್

ಗೌರವ್ ಗೊಗೊಯ್

ಕಿಶೋರಿ ಲಾಲ್ ಶರ್ಮಾ

ಪ್ರಣವ್ ಝಾ

ಸುಬೋಧ್ ಕಾಂತ್ ಸಹಾಯ್

ಇಮ್ರಾನ್ ಪ್ರತಾಪಗಢಿ

ಡಾ.ಪ್ರದೀಪ್ ಕುಮಾರ್ ಬಲ್ಮುಚು

ರಾಜೇಶ್ ಠಾಕೂರ್

ಸುಖದೇವ ಭಗತ್

ಕಾಳಿಚರಣ್ ಮುಂಡ

ಫುರ್ಕನ್ ಅನ್ಸಾರಿ

ಚಂದ್ರಶೇಖರ ದುಬೆ

ಬಂಧು ಟಿರ್ಕಿ

ಸಹಜದ ಅನ್ವರ್

ಪವನ್ ಖೇರಾ

ಸುಪ್ರಿಯಾ ಶ್ರೀನಾಟೆ

ಜಿಗ್ನೇಶ್ ಮೇವಾನಿ

ಅಲ್ಕಾ ಲಂಬಾ

ಉದಯ ಭಾನು ಚಿಬ್

ಯೋಗೇಂದ್ರ ಸಾ

ಪ್ರದೀಪ್ ಯಾದವ್

ಮಣಿಶಂಕರ್

ಭೀಮ್ ಕುಮಾರ್

ಅನ್ವರ್ ಅಹ್ಮದ್ ಅನ್ಸಾರಿ

ರಿಯಾಜುಲ್ ಅನ್ಸಾರಿ

ರಾಜೇಶ್ ಸಿನ್ಹಾ ಸನ್ನಿ

ದಯಾಮಣಿ ಬಾರ್ಲಾ

Jharkhand Assembly Elections 2024 Congress releases list of 40 star campaigners

ಮೊದಲ ಹಂತದ ಸೀಟುಗಳಲ್ಲಿ 62 ಅಭ್ಯರ್ಥಿಗಳ ನಾಮಪತ್ರಗಳು ರದ್ದು

ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಹಂತದ 43 ಸ್ಥಾನಗಳಲ್ಲಿ ನಾಮಪತ್ರ ಸಲ್ಲಿಸಿದ್ದ 805 ಅಭ್ಯರ್ಥಿಗಳ ಪೈಕಿ 61 ಅಭ್ಯರ್ಥಿಗಳ ನಾಮಪತ್ರಗಳು ರದ್ದಾಗಿವೆ. ಈಗ ಈ ಎಲ್ಲಾ ಸ್ಥಾನಗಳಿಗೆ ಒಟ್ಟು 743 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಈ ಸ್ಥಾನಗಳ ಅಭ್ಯರ್ಥಿಗಳು ಬುಧವಾರದವರೆಗೆ ತಮ್ಮ ನಾಮಪತ್ರಗಳನ್ನು ಹಿಂಪಡೆಯಬಹುದು. ಇದಾದ ನಂತರ ಯಾವ ಕ್ಷೇತ್ರದಲ್ಲಿ ಎಷ್ಟು ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ ಎಂಬುದು ತಿಳಿಯಲಿದೆ. ಈ ಸ್ಥಾನಗಳಿಗೆ ನವೆಂಬರ್ 13 ರಂದು ಮತದಾನ ನಡೆಯಲಿದೆ.

ಮೊದಲ ಹಂತದಲ್ಲಿ ಒಟ್ಟು 43 ವಿಧಾನಸಭಾ ಸ್ಥಾನಗಳ ಪೈಕಿ 16 ಸ್ಥಾನಗಳಲ್ಲಿ ನಾಮಪತ್ರ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳ ನಾಮಪತ್ರಗಳು ಸರಿಯಾಗಿವೆ ಎಂದು ತಿಳಿದುಬಂದಿದೆ. ಇವುಗಳಲ್ಲಿ ಬರ್ಕಗಾಂವ್, ಸಿಮಾರಿಯಾ, ಛತ್ರ, ಜುಗ್ಸಲೈ, ಸೆರೈಕೆಲಾ, ಮನೋಹರಪುರ್, ತೋರ್ಪಾ, ಖುಂಟಿ, ತಮರ್, ಮಂದರ್, ಸಿಸೈ, ಗುಮ್ಲಾ, ಸಿಮ್ಡೆಗಾ, ಕೋಲೆಬಿರಾ, ಲತೇಹರ್ ಮತ್ತು ಛತ್ತರ್‌ಪುರ ಸೇರಿವೆ. ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲ ಅಭ್ಯರ್ಥಿಗಳ ನಾಮಪತ್ರಗಳು ಕಾರಣಾಂತರಗಳಿಂದ ರದ್ದಾಗಿವೆ.

ಇಲ್ಲಿ ಎರಡನೇ ಹಂತದ ಸ್ಥಾನಗಳಿಗೆ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಇಲ್ಲಿ ಸಲ್ಲಿಕೆಯಾಗಿರುವ ನಾಮಪತ್ರಗಳ ಪರಿಶೀಲನೆ ಇಂದು ನಡೆದಿದೆ. ನವೆಂಬರ್ 1 ರವರೆಗೆ ನಾಮಪತ್ರಗಳನ್ನು ಹಿಂಪಡೆಯಬಹುದು.

ಎರಡನೇ ಹಂತದ ಸ್ಥಾನಗಳಿಗೆ ನವೆಂಬರ್ 20ರಂದು ಮತದಾನ ನಡೆಯಲಿದೆ. ಇದೀಗ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ಬಳಿಕ ಎರಡೂ ಹಂತಗಳ ಸ್ಥಾನಗಳ ಮೇಲೆ ಚುನಾವಣಾ ಪ್ರಚಾರ ಗರಿಗೆದರುವ ಸಾಧ್ಯತೆ ಇದೆ. ಆದರೆ ಹಬ್ಬ ಹರಿದಿನಗಳು ಚುನಾವಣಾ ಪ್ರಚಾರದ ಮೇಲೆ ಪ್ರಭಾವ ಬೀರುತ್ತವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+