Jharkhand Election 2024: ಜಾರ್ಖಂಡ್‌ನ 43 ಸ್ಥಾನಗಳಲ್ಲಿ ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಾರಂಭ
ಜಾರ್ಖಂಡ್‌ನ 43 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಶುಕ್ರವಾರದಿಂದ (ಅಕ್ಟೋಬರ್ 18) ನಾಮನಿರ್ದೇಶನ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಎಲ್ಲಾ 43 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 13 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಅಭ್ಯರ್ಥಿಗಳು ಅಕ್ಟೋಬರ್ 25ರವರೆಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಸಲ್ಲಿಸಬಹುದು. ಅಕ್ಟೋಬರ್ 28 ದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅಕ್ಟೋಬರ್ 30 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ಹೌದು.. ಚುನಾವಣಾ ಆಯೋಗ ನಿಗಧಿ ಪಡಿಸಿದ ದಿನಾಂಕದಂತೆ ನವೆಂಬರ್ 13ರಂದು ಚುನಾವಣೆ ನಡೆಯಲಿರುವ 43 ವಿಧಾನಸಭಾ ಕ್ಷೇತ್ರಗಳಿಗೆ ನಾಮನಿರ್ದೇಶನ ಪ್ರಕ್ರಿಯೆಯು ಇಂದಿನಿಂದ ಪ್ರಾರಂಭವಾಗಲಿದೆ. ಅಭ್ಯರ್ಥಿಗಳು ರಜಾದಿನಗಳನ್ನು ಹೊರತುಪಡಿಸಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದು. ಹಾಗಾದರೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು?

ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಕೆಲ ನಿಯಮಗಳನ್ನು ಪಾಲಿಸಬೇಕು. ಚುನಾವಣಾ ಆಯೋಗ ಕೆಲ ಮಾರ್ಗಸೂಚಿಗಳನ್ನು ಹಂಚಿಕೊಂಡಿದೆ. ಅವುಗಳಲ್ಲಿ ಪ್ರಮುಖವಾದವೆಂದರೆ ನೋಂದಣಿ ಸೈಟ್‌ನ 100 ಮೀಟರ್ ವ್ಯಾಪ್ತಿಯೊಳಗೆ ಕೇವಲ ಮೂರು ವಾಹನಗಳು ಮಾತ್ರ ಪ್ರವೇಶಿಸಲು ಅನುಮತಿಸಲಾಗಿದೆ. ಜೊತೆಗೆ ನಾಮಪತ್ರ ಸಲ್ಲಿಕೆಗೆ ಬರುವ ಅಭ್ಯರ್ಥಿಗಳ ಜೊತೆಯಲ್ಲಿ ಒಳಗಡೆ ನಾಲ್ಕು ಜನ ಮಾತ್ರ ಬರಲು ಅವಕಾಶವಿದೆ. ಅಭ್ಯರ್ಥಿಯ ನಾಮಪತ್ರಕ್ಕೆ 10 ಜನರ ಪ್ರಸ್ತಾವನೆ ಕಡ್ಡಾಯವಾಗಿರುತ್ತದೆ.
ಪ್ರತಿ ಸಾಮಾನ್ಯ ಅಭ್ಯರ್ಥಿಯು ಭದ್ರತಾ ಠೇವಣಿಯಾಗಿ 10,000 ರೂ.ಗಳನ್ನು ಠೇವಣಿ ಇಡಬೇಕಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸೇರಿದ ಅಭ್ಯರ್ಥಿಗಳಿಗೆ ಭದ್ರತಾ ಠೇವಣಿ ಐದು ಸಾವಿರ ರೂಪಾಯಿ ಇರುತ್ತದೆ. ಅಭ್ಯರ್ಥಿಯು ಫಾರ್ಮ್ 26 ಅನ್ನು ಅಫಿಡವಿಟ್ ರೂಪದಲ್ಲಿ ಭರ್ತಿ ಮಾಡಬೇಕು. ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮೂರು ಪತ್ರಿಕೆಗಳಲ್ಲಿ ಪ್ರಕಟಿಸಬೇಕಾಗುತ್ತದೆ. ಇದರೊಂದಿಗೆ ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಬಿಡುಗಡೆ ಮಾಡಬೇಕಿದೆ. ವೆಚ್ಚಗಳ ವಿವರಗಳನ್ನು ಇರಿಸಿಕೊಳ್ಳಲು, ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯಬೇಕಾಗುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿ ಕೆ.ರವಿಕುಮಾರ್ ತಿಳಿಸಿದ್ದಾರೆ.
ಜಾರ್ಖಂಡ್ ಮೊದಲ ಹಂತದ ಮತದಾನದ ವಿವರಗಳು:-
ಜಾರ್ಖಂಡ್ ವಿಧಾನಸಭಾ ಚುನಾವಣೆಯು ನವೆಂಬರ್ 13 ಮತ್ತು 20 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಮತಗಳ ಎಣಿಕೆ ನವೆಂಬರ್ 23 ರಂದು ನಡೆಯಲಿದೆ. ಒಟ್ಟು 2.60 ಲಕ್ಷ ಮತದಾರರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದು, 11.84 ಲಕ್ಷ ಪ್ರಥಮ ಬಾರಿ ಮತದಾರರು ಸೇರಿದ್ದಾರೆ. ಪ್ರಮುಖ ಕ್ಷೇತ್ರಗಳಲ್ಲಿ ಕೊಡೆರ್ಮಾ, ಜಮ್ಶೆಡ್‌ಪುರ ಪೂರ್ವ, ರಾಂಚಿ ಮತ್ತು ಗರ್ಹ್ವಾ ಸೇರಿವೆ. ಈ ಹಂತವು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಮತ್ತು ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಮೀಸಲಾದ ಕ್ಷೇತ್ರಗಳನ್ನು ಸಹ ಒಳಗೊಂಡಿದೆ.

ನಾಮನಿರ್ದೇಶನಕ್ಕೆ ಕೊನೆಯ ದಿನಾಂಕ
ಹಂತ-1: 25.10.2024 ((ಶುಕ್ರವಾರ))
ಹಂತ-2: 29.10.2024 (ಮಂಗಳವಾರ)
ನಾಮನಿರ್ದೇಶನ ಪರಿಶೀಲನೆ ದಿನಾಂಕ
ಹಂತ-1: 28.10.2024 (ಸೋಮವಾರ)
ಹಂತ-2: 30.10.2024 (ಬುಧವಾರ)
ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕ
ಹಂತ-1: 30.10.2024 (ಬುಧವಾರ)
ಹಂತ-2: 01.11.2024 (ಶುಕ್ರವಾರ)
ಮತದಾನದ ದಿನಾಂಕ
ಹಂತ-1: 13.11. 2024 (ಬುಧವಾರ) - (43 ಸ್ಥಾನಗಳಲ್ಲಿ ಮತದಾನ)
ಹಂತ-2: 20.11.2024 (ಬುಧವಾರ) - (38 ಸ್ಥಾನಗಳಲ್ಲಿ ಮತದಾನ)
ಫಲಿತಾಂಶದ ದಿನಾಂಕ
23.11.2024 (ಶನಿವಾರ)
ಪ್ರಸ್ತುತ ವಿಧಾನಸಭೆಯ ಅವಧಿ 5 ಜನವರಿ 2025ರಂದು ಕೊನೆಗೊಳ್ಳಲಿದೆ. ಜಾರ್ಖಂಡ್‌ನ ಮೊದಲ ಹಂತದಲ್ಲಿ 43 ಸ್ಥಾನಗಳಿಗೆ ಮತದಾನ ನಡೆಯಲಿದೆ, ನವೆಂಬರ್ 13 ರಂದು 43 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ.












Click it and Unblock the Notifications