Jharkhand Election 2024 Exit Poll: ಸಿ-ವೋಟರ್ ಸಮೀಕ್ಷೆ ಪ್ರಕಾರ ಜಾರ್ಖಂಡ್‌ನಲ್ಲಿ ಈ ಪಕ್ಷಕ್ಕೆ ಭರ್ಜರಿ ಗೆಲುವು
Jharkhand Assembly Election 2024 Exit Poll: ಜಾರ್ಖಂಡ್ ವಿಧಾನಸಭೆ ಚುನಾವಣೆ 2024ರ ಎರಡು ಹಂತದ ಮತದಾನ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಇದೀಗ ಸಿ-ವೋಟರ್ ಚುಣಾವಣೋತ್ತರ ಸಮೀಕ್ಷೆ ಪ್ರಕಟಿಸಿದೆ. ಹಾಗಾದರೆ ಇದರ ಪ್ರಕಾರ ಯಾವ ಪಕ್ಷ ಗೆಲುವು ಸಾಧಿಸಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಿ-ವೋಟರ್ ನಡೆಸಿದ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಜಾರ್ಖಂಡ್‌ನಲ್ಲಿ 81 ವಿಧಾನಸಭೆ ಸ್ಥಾನಗಳ ಪೈಕಿ, ಎನ್‌ಡಿಎ 34, ಕಾಂಗ್ರೆಸ್ ಮೈತ್ರಿ ಜೆಎಂಎಂ 26, ಪಕ್ಷೇತರ 1 ಸ್ಥಾನಗಳನ್ನು ಪಡೆದಿದೆ. ಜಾರ್ಖಂಡ್‌ನಲ್ಲಿ 81 ವಿಧಾನಸಭಾ ಕ್ಷೇತ್ರಗಳಲ್ಲಿ ಎನ್‌ಡಿಎ 34 ಸ್ಥಾನಗಳನ್ನು ಪಡೆಯುವ ಗೆಲುವು ಸಾಧಿಸಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 41 ಆಗಿದೆ.

ಜಾರ್ಖಂಡ್‌ನಲ್ಲಿ ನವೆಂಬರ್ 13ರಂದು 43 ವಿಧಾನಸಭೆ ಕ್ಷೇತ್ರಗಳು, ಇಂದು (ನವೆಂಬರ್ 20) 38 ವಿಧಾನಸಭಾ ಸ್ಥಾನಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆದಿದ್ದು, ಶೇಕಡ 67.59ರಷ್ಟು ಮತದಾನ ಆಗಿದ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಇನ್ನು ಮಹರಾಷ್ಟ್ರದ 288 ವಿಧಾನಸಭೆ ಸ್ಥಾನಗಳಿಗೂ ಮತದಾನ ಮುಕ್ತಾಯವಾಗಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟ ಆಗಲಿದೆ.
ಜಾರ್ಖಂಡ್ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆಗಳು
ಸಮೀಕ್ಷೆಗಳು ಎನ್‌ಡಿಎ INDIA ಪಕ್ಷೇತರ
ಮಾರ್ಟಿಜ್ 42-47 25-30 1-4
ಪೀಪಲ್ಸ್ ಪಲ್ಸ್ 44-53 25-37 5-9
ಪಿ-ಮಾರ್ಕ್ 31-40 37-47 1-6
ಆಕ್ಸಿಸ್ ಮೈ ಇಂಡಿಯಾ 25 53 3
ಟೈಮ್ಸ್ ನೌ-ಜೆವಿಸಿ 40-44 30-40 1-1
ದೈನಿಕ್ ಭಾಸ್ಕರ್ 37-40 36-39 0-2
ಮಹಾರಾಷ್ಟ್ರ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆಗಳು
ಸಮೀಕ್ಷೆಗಳು ಎನ್‌ಡಿಎ ಎಂವಿಎ ಮಾರ್ಟಿಜ್
ಮಾರ್ಟಿಜ್ 150-170 110-130 8-10
ಪಿ-ಮಾರ್ಕ್ 137-157 126-146 2-8
ಪೀಪಲ್ಸ್ ಪಲ್ಸ್ 175-195 85-112 7-12
ಲೋಕಶಾನಿ ಮರಾಠಿ-ರುದ್ರ 128-142 125-140 18-23
ಚಾಣಕ್ಯ 152-160 130-138 6-8
ದೈನಿಕ್ ಭಾಸ್ಕರ್ 152-160 130-138 6-8












Click it and Unblock the Notifications