ಪ್ರಧಾನಿಯ 1 ಗಂಟೆ ಕಾರ್ಯಕ್ರಮಕ್ಕೆ ಕಪ್ಪು ಬಣ್ಣದ ಎಲ್ಲ ವಸ್ತುಗಳಿಗೂ ನಿಷೇಧ

ರಾಯ್ ಪುರ (ಜಾರ್ಖಂಡ್), ಜನವರಿ 2 : ಜನವರಿ ಐದನೇ ತಾರೀಕು ಜಾರ್ಖಂಡ್ ನ ಪಲಮೌಗೆ ಭೇಟಿ ನೀಡಲಿದ್ದು, ಅಂದು ಕಪ್ಪು ಬಣ್ಣದ ಎಲ್ಲ ವಸ್ತುಗಳಿಗೂ ನಿಷೇಧ ಹೇರಲಾಗಿದೆ. ಎಂಬತ್ತು ಸಾವಿರ ಪಾರಾ ಶಿಕ್ಷಕರ ನಾಯಕರು ಸೇವೆ ಕಾಯಂಗೆ ಆಗ್ರಹಿಸಿ ಕಳೆದ ನವೆಂಬರ್ ಹದಿನೈದರಿಂದ ಒತ್ತಾಯಿಸುತ್ತಿದ್ದು, ಅಂದು ನರೇಂದ್ರ ಮೋದಿ ಅವರಿಗೆ ಕಪ್ಪು ಬಾವುಟ ತೋರಿಸುವ ಸಾಧ್ಯತೆ ಇದೆ.

ಸರಕಾರಿ ಸಿಬ್ಬಂದಿ ಅಥವಾ ಸಾಮಾನ್ಯ ಜನರು ಕಪ್ಪು ಕಾಲುಚೀಲ ಕೂಡ ಧರಿಸುವಂತಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ನಿಷೇಧವು ಬಟ್ಟೆ, ಬ್ಯಾಗ್, ಶೂ, ಪರ್ಸ್, ಕ್ಯಾಪ್ ಎಲ್ಲಕ್ಕೂ ಅನ್ವಯಿಸುತ್ತದೆ. ನರೇಂದ್ರ ಮೋದಿಯವರು ಜನವರಿ ಐದರಂದು ಬೆಳಗ್ಗೆ ಹತ್ತು ಮೂವತ್ತಕ್ಕೆ ಬಂದು, ಒಂದು ಗಂಟೆ ಕಾಲ ಜಿಲ್ಲೆಯಲ್ಲಿ ಕಳೆಯಲಿದ್ದಾರೆ.

Jharkhand administration bans black clothes, caps, socks for PMs 1 hour visit

ಮಂಡಲ್ ಅಣೆಕಟ್ಟು ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮೋದಿ. ನಲವತ್ತಾರು ವರ್ಷಗಳಿಂದ ಈ ಯೋಜನೆ ನನೆಗುದಿಗೆ ಬಿದ್ದಿದೆ. ಈ ಅಣೆಕಟ್ಟನ್ನು ಎರಡೂವರೆ ಸಾವಿರ ಕೋಟಿ ರುಪಾಯಿಯಲ್ಲಿ ನಿರ್ಮಾಣ ಮಾಡಲಾಗುವುದು. ಪಲಮೌ ಮತ್ತು ಗರ್ಹ್ವಾ ಜಿಲ್ಲೆಗಳಲ್ಲಿ ಕುಡಿಯುವ ನೀರು ಯೋಜನೆ ಸಲುವಾಗಿ 1138 ಕೋಟಿ ವೆಚ್ಚದಲ್ಲಿ ಪೈಪ್ ಲೈನ್ ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+