ಜಾರ್ಖಂಡ್: ಮದುವೆಗೆ ಹೊರಟ ಐವರು ಯಮನ ಪಾದ ಸೇರಿದರು!
ಲತೆಹಾರ್(ಜಾರ್ಖಂಡ್), ಫೆಬ್ರವರಿ 2: ಜಾರ್ಖಂಡ್ ರಾಜ್ಯದ ಲತೆಹಾರ್ ಎಂಬಲ್ಲಿ ಇಂದು(ಫೆ.2) ಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ ಐದು ಜನ ಮೃತರಾಗಿದ್ದು 7 ಜನ ಗಂಭೀರ ಗಾಯಗೊಂಡಿದ್ದಾರೆ.
ವೇಗವಾಗಿ ಹೋಗುತ್ತಿದ್ದ ಕಾರೊಂದು, ವಿರುದ್ಧ ದಿಕ್ಕಿನಿಂದ ಅಷ್ಟೇ ವೇಗವಾಗಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ದಲ್ತಂಗಂಜ್ ಎಂಬಲ್ಲಿಂದ ಅಸನಪಾಣಿ ಎಂಬಲ್ಲಿಗೆ ಮದೆಗೆಂದು ಹೊರಟಿದ್ದ ಒಂದೇ ಕುಟುಂಬದ ಐವರು ಮೃತರಾದವರು. ಗಾಯಗೊಂಡವರಿಗೆ ರಾಂಚಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇಲ್ಲಿನ ಕುಡು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.












Click it and Unblock the Notifications