Jeep: ಕೇವಲ 85 ಅದೃಷ್ಟವಂತರಿಗೆ ಮಾತ್ರ ಈ ಜೀಪ್! ಕಾಂಪಾಸ್‌ 85ನೇ ಅನಿವರ್ಸರಿ ಎಡಿಷನ್ ಬಿಡುಗಡೆ, ವಿಶೇಷತೆಗಳೇನು?

ಬೆಂಗಳೂರು: ವಿಶ್ವದ SUV ತಯಾರಕ ಕಂಪನಿ 'ಜೀಪ್' ತನ್ನ 85ನೇ ವಾರ್ಷಿಕೋತ್ಸವದ ಸಂಭ್ರಮಕ್ಕೆ ಹೊಸ ಮಾಡೆಲ್ ಅನ್ನು ಪರಿಚಿಯಿಸಿದೆ. ವಾರ್ಷಿಕೋತ್ಸವದ ಸಡಗರ ಹೆಚ್ಚಿಸಲು 'ಜೀಪ್' ಕಂಪನಿಯು ಭಾರತದಲ್ಲಿ ತನ್ನ ಅತ್ಯಂತ ಜನಪ್ರಿಯ 'ಜೀಪ್ ಕಾಂಪಾಸ್‌ನ' ವಿಶೇಷ ಮಾದರಿಯಾದ '85ನೇ ಅನಿವರ್ಸರಿ ಎಡಿಷನ್' ಅನ್ನು ಸೋಮವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಅದೃಷ್ಟವಂತರಿಗೆ ಮಾತ್ರವೇ ಈ ಕಾರು ಸಿಗಲಿದೆ.

ಭಾರತದಲ್ಲಿ ಈ ಕಾರು ಕೇವಲ 85 ಜನ ಅದೃಷ್ಟವಂತ ಗ್ರಾಹಕರಿಗೆ ಮಾತ್ರ ಸಿಗಲಿದೆ. ಕಂಪನಿಯು ಕೇವಲ 85 ಕಾರುಗಳನ್ನು ಮಾತ್ರವೇ ಉತ್ಪಾದಿಸಲು ನಿರ್ಧರಿಸಿದ್ದು, ಇದು ಯಾರಿಗೆಲ್ಲ ಕಾರು ಕ್ರೇಜ್, ಅಥವಾ ತಮ್ಮ ಬಳಿ ಮಾತ್ರವೇ ಇರಬೇಕು ಎಂದುಕೊಳ್ಳುವ ಗ್ರಾಹಕರಿಗೆ 'ಸ್ಪೆಷಲ್ ಲಿಮಿಟೆಡ್ ಎಡಿಷನ್' ಅನುಭವ ನೀಡಲಿದೆ.

Jeep Compass

ಕಂಪನಿ ನೀಡಿರುವ ಮಾಹಿತಿ ಪ್ರಕಾರ, ಈ ಹೊಸ ಕಾರಿನ ಎಕ್ಸ್ ಶೋರೂಮ್ ದರ 26.70 ಲಕ್ಷ ರೂ. (ಎಕ್ಸ್-ಶೋರೂಂ) ಆಗಿದೆ. ಆರ್ ಟಿಓ, ಇನ್ಶೂರೆನ್ಸ್ ಸೇರಿದಂತೆ ಇನ್ನಷ್ಟು ಹೆಚ್ಚಾಗಲಿದೆ. ಈ ಆಕರ್ಷಕ ಲಿಮಿಟೆಡ್ ಎಡಿಷನ್‌ ಕಾರಿನ ವಿಶೇಷತೆಗಳು ಏನೇನು?

ಈ ಸ್ಪೆಷಲ್ ಎಡಿಷನ್ ಕಾರಿನ ವಿಶೇಷತೆಗಳೇನು?

ಜೀಪ್ ಕಾರುಗಳ ಎಂದಿನ ಗಟ್ಟಿತನದ ಜೊತೆಗೆ, ಈ ವಾರ್ಷಿಕೋತ್ಸವ ಆವೃತ್ತಿಯಲ್ಲಿ ಹಲವಾರು ಹೊಸ ಸುರಕ್ಷತಾ ತಂತ್ರಜ್ಞಾನಗಳು ಹಾಗೂ ವಿಶಿಷ್ಟ ವಿನ್ಯಾಸದಲ್ಲಿ ಲಭ್ಯವಿದೆ. ಕಾರಿನ ಹೊರಭಾಗದಲ್ಲಿ 18-ಇಂಚಿನ ಗ್ಲಾಸ್ ಬ್ಲಾಕ್ ಅಲಾಯ್ ವೀಲ್‌ಗಳು ಮತ್ತು ವಾರ್ಷಿಕೋತ್ಸವದ ವಿಶೇಷ ಲೋಗೋಗಳನ್ನು ನೀಡಲಾಗಿದೆ. ಇದು ಕಾರಿಗೆ ಅತ್ಯಂತ ಪ್ರೀಮಿಯಂ ಮತ್ತು ರಾಯಲ್ ಲುಕ್ ತಂದುಕೊಡುತ್ತದೆ.

ಇನ್ನು ಕಾರಿನ ಒಳಭಾಗವು ಸಂಪೂರ್ಣ ಕಪ್ಪು ಬಣ್ಣದಿಂದ ಕೂಡಿದ್ದು, ಅದಕ್ಕೆ ಮಾಯನ್ ಗೋಲ್ಡ್ ಬಣ್ಣದ ಸ್ಪರ್ಶ ನೀಡಲಾಗಿದೆ. ಇದು ಐಷಾರಾಮಿ ಅನುಭವವನ್ನು ನೀಡುತ್ತದೆ. ಇನ್ನೂ ಡಿಜಿಟಲ್ ಐಆರ್‌ವಿಎಂ, ಕಾರಿನ ಮುಂಭಾಗ ಮತ್ತು ಹಿಂಭಾಗಕ್ಕೆ ಡ್ಯಾಶ್‌ಕ್ಯಾಮ್ ವ್ಯವಸ್ಥೆಯನ್ನು ಒದಗಿಸಲಾಗಿದೆ. ಇದು ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

ಕಾರಿನ ಸನ್‌ರೂಫ್‌ಗೆ ವಿಶೇಷವಾದ ಆಂಬಿಯೆಂಟ್ ಲೈಟಿಂಗ್ ವ್ಯವಸ್ಥೆ ನೀಡಲಾಗಿದ್ದು, ರಾತ್ರಿ ವೇಳೆಯ ಪ್ರಯಾಣವನ್ನು ಇದು ಹೆಚ್ಚು ಆಹ್ಲಾದಕರವಾಗಿಸಲಿದೆ. "ಭಾರತದಲ್ಲಿ ಜೀಪ್‌ನ ಯಶಸ್ಸಿಗೆ ಕಾಂಪಾಸ್ ಕಾರುಗಳು ಬೆನ್ನೆಲುಬಾಗಿವೆ. ಜೀಪ್ ಜಾಗತಿಕವಾಗಿ 85 ವರ್ಷಗಳನ್ನು ಪೂರೈಸುತ್ತಿದೆ. ಈ ಶುಭ ಸಂದರ್ಭದಲ್ಲಿ, ಈ ಲಿಮಿಟೆಡ್ ಎಡಿಷನ್ ಮೂಲಕ ಗ್ರಾಹಕರಿಗೆ ಮತ್ತಷ್ಟು ವೈಯಕ್ತಿಕ, ಅತ್ಯಾಧುನಿಕ ಮತ್ತು ಐಷಾರಾಮಿ ಎಸ್‌ಯುವಿಯನ್ನು ನೀಡುತ್ತಿದ್ದೇವೆ. ಸುರಕ್ಷತೆ ಹಾಗೂ ರಾಯಲ್ ಲುಕ್ ಬಯಸುವ ಗ್ರಾಹಕರಿಗೆ ಇದು ಹೇಳಿಮಾಡಿಸಿದಂತಿದೆ ಎಂದು ಸ್ಟೆಲಾಂಟಿಸ್ ಇಂಡಿಯಾದ ಬ್ಯುಸಿನೆಸ್ ಹೆಡ್ ಕುಮಾರ್ ಪ್ರಿಯೇಶ್ ಅವರು ವಿಶ್ವಾಶ ವ್ಯಕ್ತಪಡಿಸಿದರು.

ಸಿಟಿ ಟ್ರಾಫಿಕ್ ಇರಲಿ, ಹೈವೇ ಪ್ರಯಾಣವಿರಲಿ ಅಥವಾ ಆಫ್ ರೋಡ್ ಡ್ರೈವಿಂಗ್ ಇರಲಿ. ಜೀಪ್ ಕಾಂಪಸ್‌ನ ಈ ಹೊಸ 85ನೇ ಆನಿವರ್ಸರಿ ಎಡಿಷನ್‌ ಕಾರು ತನ್ನ ದಕ್ಷತೆಯನ್ನು ಮತ್ತೊಮ್ಮೆ ಸಾಬೀತುಪಡಿಸಲು ಸಿದ್ಧವಾಗಿದೆ.

ಕಾರು ಖರೀದಿ ಹೇಗೆ?

ನೀವು ಈ ವಿಶಿಷ್ಟ ಕಾರನ್ನು ಖರೀದಿಸಲು ಬಯಸಿದರೆ, ದೇಶದಾದ್ಯಂತ ಇರುವ ಜೀಪ್ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಅಥವಾ ಜೀಪ್ ಇಂಡಿಯಾದ ಅಧಿಕೃತ ವೆಬ್‌ಸೈಟ್ ಮೂಲಕ ಬುಕ್ ಮಾಡಬಹುದಾಗಿದೆ. ಕೇವಲ 85 ಕಾರುಗಳು ಮಾತ್ರ ಇರುವುದರಿಂದ ಮೊದಲು ಬಂದವರಿಗೆ ಆದ್ಯತೆ ಇರಲಿದೆ ಎಂದು ಕಂಪನಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+