ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಇಇ ಮೇನ್ಸ್‌ 2021ರ ಪರೀಕ್ಷೆ ಬರೆಯಲು ನಾಲ್ಕು ಬಾರಿ ಅವಕಾಶ: ಫೆಬ್ರವರಿಯಲ್ಲಿ ಮೊದಲ ಸೆಷನ್ ಪರೀಕ್ಷೆ

|
Google Oneindia Kannada News

ನವದೆಹಲಿ, ಡಿಸೆಂಬರ್ 16: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸುವ ಜೆಇಇ ಮೇನ್ಸ್‌ 2021ರ ಪರೀಕ್ಷೆ ಬರೆಯಲು ನಾಲ್ಕು ಬಾರಿ ಅವಕಾಶ ನೀಡಲಾಗಿದ್ದು, ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಡಾ. ರಮೇಶ್ ಪೋಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ.

ಈಗಾಗಲೇ ಡಿಸೆಂಬರ್ 15ರಿಂದ ರಿಜಿಸ್ಟ್ರೇಷನ್ ಆರಂಭಗೊಂಡಿದ್ದು, ಅರ್ಜಿ ಭರ್ತಿ ಮಾಡಲು ಕೊನೆಯ ದಿನಾಂಕ ಜನವರಿ 15,2021 ಆಗಿದೆ.

ಜೆಇಇ ಮೇನ್ಸ್‌ 2021ರ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ: ಇಂದಿನಿಂದಲೇ ರಿಜಿಸ್ಟ್ರೇಷನ್ ಆರಂಭಜೆಇಇ ಮೇನ್ಸ್‌ 2021ರ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ: ಇಂದಿನಿಂದಲೇ ರಿಜಿಸ್ಟ್ರೇಷನ್ ಆರಂಭ

ಹಿಂದಿ, ಇಂಗ್ಲಿಷ್, ಬಂಗಾಳಿ, ಅಸ್ಸಾಮೀಸ್, ಮರಾಠಿ, ತಮಿಳು, ಒಡಿಯಾ, ತೆಲುಗು, ಕನ್ನಡ, ಉರ್ದು, ಮಲಯಾಳಂ, ಪಂಜಾಬಿ ಮತ್ತು ಗುಜರಾತಿ ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದ್ದು, 90 ಪ್ರಶ್ನೆಗಳಲ್ಲಿ 75 ಪ್ರಶ್ನೆಗಳಿಗೆ ಉತ್ತರಿಸಬೇಕಿದೆ ಎಂದು ಕೇಂದ್ರ ಶಿಕ್ಷಣ ಸಚಿವ ನಿಶಾಂಕ್ ಹೇಳಿದರು.

JEE Main 2021: Exams Will Be Held In 4 Times A Year In February, March, April And May

ಜೆಇಇ ಮೇನ್‌ನ ಮೊದಲ ಸೆಷನ್ ಪರೀಕ್ಷೆಯು ಫೆಬ್ರವರಿ 23 ರಿಂದ 26 ರವರೆಗೆ ನಡೆಯಲಿದ್ದು , ಇತರೆ ಮೂರು ಸೆಷನ್‌ಗಳ ದಿನಾಂಕಗಳನ್ನು ಎನ್‌ಟಿಎ ನಂತರ ಪ್ರಕಟಿಸುತ್ತದೆ.

"ಜೆಇಇ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಈಗ ಅನೇಕ ಅವಕಾಶಗಳನ್ನು ಪಡೆಯುತ್ತಾರೆ. ಆದ್ದರಿಂದ ಒಬ್ಬ ವಿದ್ಯಾರ್ಥಿಯು ಒಂದು ಪ್ರಯತ್ನದಲ್ಲಿ ಉತ್ತಮ ಸಾಧನೆ ಮಾಡದಿದ್ದರೆ, ಅವನು / ಅವಳು ಒಂದು ವರ್ಷದಲ್ಲಿ ಇನ್ನೂ ಮೂರು ಬಾರಿ ಪ್ರಯತ್ನಿಸಬಹುದು" ಎಂದು ಶಿಕ್ಷಣ ಸಚಿವರು ಹೇಳಿದರು.

ಜೆಇಇ ಮೇನ್ಸ್‌ ಬಹು ನಿರೀಕ್ಷಿತ ಪರೀಕ್ಷೆಯಾಗಿದ್ದು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸೇರಿದಂತೆ ಭಾರತದ ಪದವಿಪೂರ್ವ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್‌ಗಳ ಪ್ರವೇಶಾತಿ ನಡೆಸುವ ಪರೀಕ್ಷೆಯಾಗಿದೆ.

ಹೊಸ ಪರೀಕ್ಷೆಯ ಮಾದರಿಯಲ್ಲಿ, ಬಹು ಆಯ್ಕೆಯ ಪ್ರಶ್ನೆಗಳಿಗೆ ಯಾವುದೇ ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ. ಈ ಹಿಂದೆ ಶಿಕ್ಷಣ ಸಚಿವರು ಡಿಸೆಂಬರ್ 10 ರಂದು ವಿದ್ಯಾರ್ಥಿಗಳಿಗೆ ನೀಡಿದ ನೇರ ಭಾಷಣದಲ್ಲಿ ಜೆಇಇ ಪರೀಕ್ಷೆಗಳನ್ನು ವರ್ಷಕ್ಕೆ ಹಲವು ಬಾರಿ ನಡೆಸುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಹೇಳಿದ್ದರು. ಅಭ್ಯರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ದಿನಾಂಕಗಳನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳು ವರ್ಷಕ್ಕೆ ಮೂರರಿಂದ ನಾಲ್ಕು ಬಾರಿ ಪರೀಕ್ಷೆಯನ್ನು ನಡೆಸಲು ಸೂಚಿಸಿದ್ದರು. ಅದರಂತೆ ಈ ಬಾರಿ ನಾಲ್ಕು ಬಾರಿ ಅವಕಾಶ ನೀಡಲಾಗಿದೆ.

ಕೋಟ್ಯಾಧಿಪತಿಯಾಗಲು ನಿಮಗೆ ಇಲ್ಲಿದೆ ಅವಕಾಶ!

English summary
JEE Main 2021 will be held in four sessions. The registration for the same begins December 15 and the last day to register for JEE main is January 15, 2021. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X