ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಶಿಕಲಾಗೆ ಹಣ ಕೊಟ್ಟು ಸಾಲ ರೂಪದಲ್ಲಿ ವಾಪಸ್ ಪಡೆದಿದ್ದ ಜಯಾ!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ 05 : 'ಜಯಲಲಿತಾ ಅವರು ತಮ್ಮ ಬಳಿ ಇದ್ದ ಹಣವನ್ನು ಆಪ್ತ ಗೆಳತಿ ಶಶಿಕಲಾ ಅವರಿಗೆ ನೀಡಿ, ಅದನ್ನು ಸಾಲ ರೂಪದಲ್ಲಿ ವಾಪಸ್ ಪಡೆದಿದ್ದಾರೆ' ಎಂದು ಕರ್ನಾಟಕ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡನೆ ಮಾಡಿದೆ.

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ಮತ್ತು ಇತರ ಆರೋಪಿಗಳನ್ನು ಖುಲಾಸೆಗೊಳಿಸಿರುವ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ವಿ.ಆಚಾರ್ಯ ವಾದ ಮಂಡನೆ ಮಾಡುತ್ತಿದ್ದಾರೆ. [ಪ್ರಭಾವ ಬಳಸಿ ಗಿರಗಿಟ್ಲೆಯಾಡಿಸುವ ಶಶಿಕಲಾ]

jayalalithaa

ನ್ಯಾಯಮೂರ್ತಿ ಪಿ.ಸಿ.ಘೋಷ್ ಮತ್ತು ಅಮಿತಾವ್ ರಾಯ್ ಅವರ ಪೀಠದ ಮುಂದೆ ವಾದ ಮಂಡನೆ ಮಾಡಿ ಆಚಾರ್ಯ ಅವರು, 'ಜಯಲಲಿತಾ ಹಣವನ್ನು ಸಾಲ ರೂಪದಲ್ಲಿ ವಾಪಸ್ ಪಡೆಯುವ ಮೂಲಕ ಅದನ್ನು ಕಾನೂನು ಬದ್ಧ ಎಂದು ಸಾಬೀತು ಮಾಡಿದ್ದಾರೆ' ಎಂದು ಹೇಳಿದ್ದಾರೆ. [ಅಕ್ರಮ ಆಸ್ತಿ ಪ್ರಕರಣ: ಜಯಲಲಿತಾ ನಿರ್ದೋಷಿ]

'ಜಯಲಲಿತಾ ಅವರು ಉಡುಗೊರೆಗಳ ರೂಪದಲ್ಲಿ ಶಶಿಕಲಾ ನಟರಾಜನ್ ಅವರಿಗೆ ಹಣವನ್ನು ನೀಡಿದ್ದಾರೆ. ನಂತರ ಸಾಲ ರೂಪದಲ್ಲಿ ಅದನ್ನು ವಾಪಸ್ ಪಡೆದು ಕಾನೂನಿನ ಪ್ರಕಾರ ಎಂದು ಸಾಧಿಸಿದ್ದಾರೆ' ಎಂದು ಆಚಾರ್ಯ ವಾದ ಮಂಡನೆ ಮಾಡಿದ್ದಾರೆ. [ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]

'ಶಶಿಕಲಾ ನಟರಾಜನ್ ಮತ್ತು ಇತರರ ಹೆಸರಿಗೆ ಕಂಪನಿಗಳನ್ನು ವರ್ಗಾವಣೆ ಮಾಡಿದ್ದು ಇದೇ ಕಾರಣಕ್ಕಾಗಿ. ಎಲ್ಲಾ ಆಸ್ತಿಗಳು ಕಾನೂನು ಬದ್ಧವಾಗಿವೆ ಎಂಬುದನ್ನು ತೋರಿಸಲು ಕಂಪನಿಗಳನ್ನು ಅವರ ಹೆಸರಿಗೆ ಮಾಡಿಸಲಾಗಿದೆ' ಎಂದು ಆಚಾರ್ಯ ಕೋರ್ಟ್‌ಗೆ ತಿಳಿಸಿದ್ದಾರೆ.

'ಜಯಲಲಿತಾ ಅವರು ಶಶಿಕಲಾ ಅವರಿಗೆ ಎಐಎಡಿಎಂಕೆ ಪಕ್ಷದ ಸಂಪೂರ್ಣ ಉಸ್ತುವಾರಿ ಕೊಟ್ಟಿದ್ದರು. ಪಕ್ಷವನ್ನು ಮಾತ್ರವಲ್ಲದೇ ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸವನ್ನು ಶಶಿಕಲಾ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು' ಎಂದು ವಾದ ಮಂಡನೆ ಮಾಡಿದ್ದಾರೆ.

ಜಯಲಲಿತಾ ಮತ್ತು ಶಶಿಕಲಾ ಅವರ ಪರವಾಗಿ ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡನೆ ಮಗಿದೆ. ಬಿ.ವಿ.ಆಚಾರ್ಯ ಅವರು ಇಂದು ತಮ್ಮ ವಾದವನ್ನು ಮುಂದುವರೆಸಲಿದ್ದಾರೆ.

English summary
Jayalalithaa transferring money in the form of gifts to Sasikala Natrajan. After this transfer was done, she got the same back as debts and showed it as lawful income Special Public Prosecutor for Karnataka made a passionate appeal in the Supreme Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X