ಜಯಲಲಿತಾ ಕೊನೆ ಯಾತ್ರೆಯಲ್ಲಿ ಜನ ಜನ, ಜನ ನಾಯಕರು

Posted By:
Subscribe to Oneindia Kannada

ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಜನಸಾಗರ ನಿಜದ ಅರ್ಥದಲ್ಲೂ ಸಾಗರವೇ. ಮಂಗಳವಾರ ರಾಜಾಜಿ ಹಾಲ್ ನಲ್ಲಿ ತಮ್ಮ ಆರಾಧ್ಯ ದೇವತೆ ಜಯಲಲಿತಾ ಅಂತಿಮ ದರ್ಶನಕ್ಕಾಗಿ ಬಂದ ಜನರ ಸಂಖ್ಯೆಯೇ ಆ ಜೀವ ಎಷ್ಟು ಕಿಮ್ಮತ್ತಿನದು, ಅದಕ್ಕಾಗಿ ಅದೆಷ್ಟು ಲಕ್ಷ ಹೃದಯಗಳು ಮಿಡಿಯುತ್ತವೆ ಎಂಬುದನ್ನು ಹೇಳುವಂತಿತ್ತು.[ಜಯಲಲಿತಾ ಅಪರೂಪದ ಚಿತ್ರಗಳು]

ಚುನಾವಣೆ ಪ್ರಚಾರಕ್ಕೋ ಸಭೆಗೆ ಲಾರಿ, ಬಸ್ಸುಗಳಲ್ಲಿ ಜನರನ್ನು ಕರೆತರಬಹುದು. ಆದರೆ ಸಾವಿನಲ್ಲಿ ಅಲ್ಲವಲ್ಲ! ಮಂಗಳವಾರ ನಡೆದ ಜಯಲಲಿತಾ ಅಂತಿಮ ಯಾತ್ರೆ ವೇಳೆಯ ಚಿತ್ರಗಳು ಇಲ್ಲಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಂತಿಮ ದರ್ಶನಕ್ಕಾಗಿ ಬಂದಿದ್ದು, ಜಯಲಲಿತಾ ವರ್ಚಸ್ಸು, ನಾಯಕತ್ವ ಗುಣದ ಫಲವೇ ಅಲ್ಲವೆ?

ಆಕೆಯ ಬದುಕು ವರ್ಣರಂಜಿತ, ನಿಲವುಗಳು ಕಠೋರ, ನಿರ್ಧಾರಗಳು ಅಚಲ, ವಿರೋಧಿಗಳ ಬಗೆಗಿನ ಕ್ರೌರ್ಯ, ಆಕೆಯ ಬಗ್ಗೆ ಜನರ ಪ್ರೀತಿ, ಯಾತನಾದಾಯಕ ಸಾವು...ಈ ಎಲ್ಲವೂ ಜಯಲಲಿತಾ ಬದುಕನ್ನು ಒಂದು ಸಿನಿಮಾಗೆ ಹೋಲಿಸುವಂತೆಯೇ ಮಾಡಿವೆ. ಇವೆಲ್ಲ ಏನೇ ಇರಲಿ ಜಯಲಲಿತಾ ಮಹಾಪ್ರಸ್ಥಾನ ಇತಿಹಾಸದ ಪುಟದಲ್ಲಿ ದಾಖಲೆ. ಆಕೆಯ ಬದುಕಿನಂತೆಯೇ ಸಾವು ಕೂಡ ಹಲವು ಪ್ರಶ್ನೆ, ನಿಗೂಢತೆ ಉಳಿಸಿದೆ.

ಸ್ಟಾಲಿನ್ ಗೌರವ

ಸ್ಟಾಲಿನ್ ಗೌರವ

ಚೆನ್ನೈನ ರಾಜಾಜಿ ಹಾಲ್ ನಲ್ಲಿ ಮಂಗಳವಾರ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಅಂತಿಮ ದರ್ಶನ ಪಡೆದ ವಿರೋಧ ಪಕ್ಷದ ನಾಯಕ ಎಂ.ಕೆ.ಸ್ಟಾಲಿನ್.

ಮುಖ್ಯಮಂತ್ರಿಗಳಿಂದ ಕೊನೆ ದರ್ಶನ

ಮುಖ್ಯಮಂತ್ರಿಗಳಿಂದ ಕೊನೆ ದರ್ಶನ

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಚಿವ ಡಿ.ಕೆ.ಶಿವಕುಮಾರ್ ಮತ್ತಿತರರು ರಾಜಾಜಿ ಹಾಲ್ ನಲ್ಲಿ ಜಯಾ ಅಂತಿಮ ದರ್ಶನ ಪಡೆದ ಕ್ಷಣ.

ಒಡಿಶಾ ಮುಖ್ಯಮಂತ್ರಿ

ಒಡಿಶಾ ಮುಖ್ಯಮಂತ್ರಿ

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಜಯಲಲಿತಾ ಅಂತಿಮ ದರ್ಶನ ಪಡೆದರು.

ದೇವೆಂದ್ರ ಫಡಣವೀಸ್

ದೇವೆಂದ್ರ ಫಡಣವೀಸ್

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಜಯಲಲಿತಾರ ಅಂತಿಮ ದರ್ಶನಕ್ಕಾಗಿ ಚೆನ್ನೈಗೆ ಬಂದಿದ್ದರು.

ಮಹಿಳೆಯರ ಶ್ರದ್ಧಾಂಜಲಿ

ಮಹಿಳೆಯರ ಶ್ರದ್ಧಾಂಜಲಿ

ಮುಂಬೈನ ಧಾರಾವಿಯಲ್ಲಿರುವ ಎಐಎಡಿಎಂಕೆ ಪಕ್ಷದ ಕಚೇರಿಯಲ್ಲಿ ಮಹಿಳೆಯರು ಜಯಲಲಿತಾಗೆ ಶ್ರದ್ಧಾಂಜಲಿ ಸಲ್ಲಿಸಿದ್ದು ಹೀಗೆ.

ಮೆರವಣಿಗೆ ಫೋಟೋ

ಮೆರವಣಿಗೆ ಫೋಟೋ

ಅಂತ್ಯಕ್ರಿಯೆಗೂ ಮುಂಚೆ ಮೆರವಣಿಗೆಯಲ್ಲಿ ತಂದ ಜಯಲಲಿತಾ ಪಾರ್ಥಿವ ಶರೀರದ ಫೋಟೋ ತೆಗೆಯಲು ಏಕಕಾಲಕ್ಕೆ ಹೊಬಂದ ಮೊಬೈಲ್ ಕ್ಯಾಮೆರಾಗಳು.

ಅಂತಿಮ ಯಾತ್ರೆ

ಅಂತಿಮ ಯಾತ್ರೆ

ಜಯಲಲಿತಾ ಅಂತಿಮ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು.

ಗೌರವ ಸಲ್ಲಿಕೆ

ಗೌರವ ಸಲ್ಲಿಕೆ

ಜಯಲಲಿತಾ ಅಂತ್ಯಕ್ರಿಯೆಗೂ ಮುನ್ನ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಗೌರವ ಸಲ್ಲಿಸಿದ್ದು ಹೀಗೆ.

ಉಕ್ಕಿನ ಮಹಿಳೆ ಅತ್ಮಕ್ಕೆ ಶಾಂತಿ ಸಿಗಲಿ

ಉಕ್ಕಿನ ಮಹಿಳೆ ಅತ್ಮಕ್ಕೆ ಶಾಂತಿ ಸಿಗಲಿ

ಕಲಾವಿದ ಸುದರ್ಶನ ಪಟ್ನಾಯಕ್ ಪುರಿಯ ಸಮುದ್ರ ತೀರದಲ್ಲಿ 'ಉಕ್ಕಿನ ಮಹಿಳೆ' ಜಯಲಲಿತಾ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಲ್ಲಿಸಿದ ರೀತಿ ಇದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jayalalithaa funeral ceremony in Chennai on Tuesday represent through PTI pictures.
Please Wait while comments are loading...