ಒಂದೇ ಕಾರಣವನ್ನೂ ನೀಡದೆ ಸಾವಿರ ಪುಟಗಳ ತೀರ್ಪು ಉಲ್ಟಾ!

Subscribe to Oneindia Kannada

ನವದೆಹಲಿ, ಮಾರ್ಚ್, 11:"ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಒಂದೇ ಒಂದು ಕಾರಣವನ್ನು ಸ್ಪಷ್ಟವಾಗಿ ನೀಡದೇ ಸಾವಿರ ಪುಟಗಳ ತೀರ್ಪನ್ನು ಕರ್ನಾಟಕ ಹೈ ಕೋರ್ಟ್ ಉಲ್ಟಾ ಮಾಡಿದೆ" ಹೀಗೆಂದು ವಾಸ್ತವ ಅಂಶವನ್ನು ಸುಪ್ರೀಂ ಕೋರ್ಟ್ ಮುಂದೆ ತೆರೆದಿರಿಸಿದ್ದು ಕರ್ನಾಟಕ ಸರ್ಕಾರದ ಪರ ವಕೀಲ ದುಶ್ಯಂತ ದಾವೆ.

ಜಯಾ ಪ್ರಕರಣದ ಬಗ್ಗೆ ತಮ್ಮ ವಾದವನ್ನು ಸುಪ್ರೀಂ ಕೋರ್ಟ್ ನಲ್ಲಿ ಗುರುವಾರ ಮುಂದಿಟ್ಟ ದಾವೆ, ಯಾವ ಆಧಾರದಲ್ಲಿ ಕರ್ನಾಟಕ ಹೈ ಕೋರ್ಟ್ ಜಯಲಲಿತಾ ಅವರನ್ನು ನಿರ್ದೋಷಿ ಎಂದು ಹೇಳಿತು ಎಂಬುದೇ ಅರ್ಥವಾಗುತ್ತಿಲ್ಲ ಎಂದು ಹೇಳಿದರು.[ಜಯಾ ಕೇಸ್: ಹೈಕೋರ್ಟ್ ವಿಶ್ಲೇಷಣೆ ಗೇಲಿ ಮಾಡಿದ ಸರ್ಕಾರ!]

Jaya DA case: A 1,000 page brilliant order reversed without stating reasons

ಯಾವ ಕಾರಣವನ್ನು ಕೊಟ್ಟಿಲ್ಲ
ಕೆಳ ನ್ಯಾಯಾಲಯ ವಿಚಾರಣೆ ಮಾಡಿದ್ದರಲ್ಲಿ ಯಾವ ದೋಷವಿತ್ತು? ಅದು ನೀಡಿದ ಸಾವಿರ ಪುಟಗಳ ತೀರ್ಪಿನಲ್ಲಿ ಲೋಪ ಎಲ್ಲಿತ್ತು? ಎಂಬುದನ್ನು ಹೇಳದೇ ಹೈ ಕೋರ್ಟ್ ಏಕಾಏಕಿ ಪ್ರಕರಣವನ್ನು ಮುಗಿಸಿದ್ದು ಯಾಕೆ? ಎಂದು ಪ್ರಶ್ನೆ ಮಾಡಿದರು.[ಜಯಾ ಪ್ರಕರಣದ ಟೈಮ್ ಲೈನ್]

Jaya DA case: A 1,000 page brilliant order reversed without stating reasons

ಎಲ್ಲದಕ್ಕಿಂತ ಮುಖ್ಯವಾಗಿ ಹೇಳುವುದಾದರೆ ಜಯಲಲಿತಾ ಯಾವ ಕಾರಣಕ್ಕೆ ಆದಾಯ ತೆರಿಗೆ ಪಾವತಿ ಮಾಡಿದ್ದರೂ ಎಂಬ ಅಂಶಕ್ಕೆ ಎಲ್ಲಿಯೂ ಉತ್ತರವಿಲ್ಲ. ಇದಕ್ಕೆ ಉತ್ತರ ಹುಡುಕುವ ಯತ್ನವನ್ನು ನ್ಯಾಯಾಲಯ ಮಾಡಿಲ್ಲ ಎಂದು ದುಶ್ಯಂತ ದಾವೆ ತಮ್ಮ ವಾದದ ಉದ್ದಕ್ಕೂ ಹೇಳುತ್ತಲೇ ಬಂದರು.

ಗುರುವಾರ ದುಶ್ಯಂತ ದಾವೆ ತಮ್ಮ ವಾದದ ಅಷ್ಟು ಅಂಶಗಳನ್ನು ಹೇಳಿ ಮುಗಿಸಿದ್ದಾರೆ. ಮಾರ್ಚ್ 15 ಕ್ಕೆ ಮತ್ತೆ ವಿಚಾರಣೆ ನಡೆಯಲಿದ್ದು ಕರ್ನಾಟಕದ ಪರವಾಗಿ ಬಿ ವಿ ಆಚಾರ್ಯ ವಾದ ಮಂಡನೆ ಮಾಡಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A verdict that ran into 1,000 pages which was passed after considering all material and evidence on hand was over turned in no time without a single reason being given. This was what senior advocate Dushyanth Dave arguing for Karnataka submitted to the Supreme Court which is hearing an appeal challenging the acquittal of Tamil Nadu Chief Minister J Jayalalithaa.
Please Wait while comments are loading...