'ದಿ ವೈರ್' ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಜಯ್ ಶಾ
ಅಹಮದಾಬಾದ್, ಅಕ್ಟೋಬರ್ 9: ತನ್ನ ವಿರುದ್ಧ ವರದಿ ಪ್ರಕಟಿಸಿದ 'ದಿ ವೈರ್ ಡಾಟ್ ಇನ್' ಮೇಲೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಅಹಮದಾಬಾದ್ ಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ಜಯ್ ಶಾ ಮಾನ ನಷ್ಟ ಪ್ರಕರಣ ದಾಖಲಿಸಿದ್ದು, ಸುದ್ದಿ ಬರೆದ ರೋಹಿಣಿ ಸಿಂಗ್, ಸಂಸ್ಥಾಪಕ ಸಂಪಾದಕರಾದ ಸಿದ್ಧಾರ್ಥ್ ವರದರಾಜನ್, ಸಿದ್ಧಾರ್ಥ್ ಭಾಟಿಯಾ, ಎಂಕೆ ವೇಣು ಸೇರಿ 7 ಜನರನ್ನು ಪ್ರತಿವಾದಿಗಳನ್ನಾಗಿ ಹೆಸರಿಸಿದ್ದಾರೆ.

ಜಯ್ ಶಾ ದಾಖಲಿಸಿದ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಅಹಮದಾಬಾದ್ ನ್ಯಾಯಾಲಯ ಅಕ್ಟೋಬರ್ 11ಕ್ಕೆ ನಿಗದಿ ಪಡಿಸಿದೆ.
The Wire won't be intimidated by Modi govt's attack on media freedom. Pls donate generously to help us fight back: https://t.co/8HxM54DFSx pic.twitter.com/XbB0xXweOj
— Siddharth (@svaradarajan) October 9, 2017
ಈ ಕುರಿತು ಟ್ವೀಟ್ ಮಾಡಿರುವ ದಿ ವೈರ್ ಸಂಪಾದಕ ಸಿದ್ಧಾರ್ಥ್ ವರದರಾಜನ್, "ಮೋದಿ ಸರಕಾರದ ಮಾಧ್ಯಮಗಳ ಸ್ವಾತಂತ್ರ್ಯದ ಮೇಲಿನ ದಾಳಿಯಿಂದ ದಿ ವೈರ್ ಧೃತಿಗೆಡುವುದಿಲ್ಲ," ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಈ ಪ್ರಕರಣದಲ್ಲಿ ಕಾನೂನು ಹೋರಾಟ ಮಾಡಲು ನೆರವು ನೀಡುವಂತೆಯೂ ಅವರು ಮನವಿ ಸಲ್ಲಿಸಿದ್ದಾರೆ.
ಈ ಹಿಂದೆ 'ದಿ ವೈರ್' ವಿರುದ್ಧ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ 20 ಕೋಟಿಯ ರೂಪಾಯಿ ಮಾನನಷ್ಟ ಪ್ರಕರಣ ಹಾಗೂ ಅದಾನಿ 100 ಕೋಟಿ ರೂಪಾಯಿ ಮಾನನಷ್ಟ ಕೇಸ್ ಹಾಕಿದ್ದನ್ನೂ ಸಿದ್ಧಾರ್ಥ್ ವರದರಾಜನ್ ತಮ್ಮ ಟ್ವೀಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.












Click it and Unblock the Notifications