ಜಮ್ಮುವಿನ ಬಾಲಾಜಿ ದೇವಸ್ಥಾನ ಜೂನ್ 8ಕ್ಕೆ ಯಾತ್ರಾರ್ಥಿಗಳಿ ಮುಕ್ತ: ಟಿಟಿಡಿ

ಶ್ರೀನಗರ, ಜೂನ್ 07: ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಾಣವಾಗುತ್ತಿರುವ ತಿರುಪತಿ ಬಾಲಾಜಿ ದೇವಸ್ಥಾನ ಕಾಮಗಾರಿ ಕೆಲಸ ಅಂತಿಮ ಹಂತ ತಲುಪಿದೆ. ಹೀಗಾಗಿ ಜೂನ್ 8 ರಂದು ಯಾತ್ರಾರ್ಥಿಗಳಿಗೆ ದೇಗುಲ ಮುಕ್ತಗೊಳಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಮ್ಮುವಿನ ಮಜೀನ್‌ನಲ್ಲಿರುವ ರಮಣೀಯವಾದ ಶಿವಾಲಿಕ್ ಕಾಡುಗಳ ಮಧ್ಯೆ ಒಟ್ಟು 62 ಎಕರೆ ಜಾಗದಲ್ಲಿ ಬರೊಬ್ಬರಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ದೇವಾಲಯವನ್ನು ನಿರ್ಮಾಣ ಮಾಡಲಾಗುತ್ತಿದೆ. ಭವಿಷ್ಯದಲ್ಲಿ ಈ ದೇವಾಲಯವು ಜಮ್ಮು ಪ್ರದೇಶದ ಅತಿದೊಡ್ಡ ದೇವಾಲಯಗಳಲ್ಲಿ ಒಂದಾಗಲಿದೆ.

Tirupati Balaji Temple Construction

ಜಮ್ಮುವಿನಲ್ಲಿ ಈ ದೇವಾಲಯವನ್ನು ಭಕ್ತರಿಗೆ ದರ್ಶನಕ್ಕೆ ಮುಕ್ತಗೊಳಿಸುವ ಮೂಲಕ ಕೇಂದ್ರಾಡಳಿತ ಪ್ರದೇಶದಲ್ಲಿ ಧಾರ್ಮಿಕ ಮತ್ತು ತೀರ್ಥಯಾತ್ರೆಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ.

ಬಾಲಾಜಿ ದೇವಾಲಯವು ಆಂಧ್ರಪ್ರದೇಶದಲ್ಲಿ ಹೆಸರುವಾಸಿ ದೇವಾಲಯ. ನಿರಂತರವಾಗಿ ಆಂಧ್ರದ ತಿರುಪತಿಗೆ ಲಕ್ಷಾಂತರ ತೆರಳುತ್ತಲೇ ಇರುತ್ತಾರೆ. ಇಂತಹ ಬಾಲಾಜಿ ದೇವಾಲಯವು ಆಂಧ್ರಪ್ರದೇಶ ಹೊರಗೆ ನಿರ್ಮಾಣವಾಗುತ್ತಿರುವ 6 ನೇ ದೇವಾಲಯ ಇದಾಗಿದೆ.

ಆಂಧ್ರದ ಹೊರಗು ಬಾಲಾಜಿ ದೇವಾಲಯ

ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಆಂಧ್ರ ಪ್ರದೇಶದ ಹೊರಗೆ ಈಗಾಗಲೇ ಹೈದರಾಬಾದ್, ಚೆನ್ನೈ, ಕನ್ಯಾಕುಮಾರಿ, ದೆಹಲಿ ಮತ್ತು ಭುವನೇಶ್ವರದಲ್ಲಿ ದೇವಾಲಯಗಳಲ್ಲಿ ನಿರ್ಮಿಸಿದೆ.

Tirupati Balaji Temple Construction

ಜಮ್ಮು ದೇವಾಲಯ ಮುಕ್ತ ಕುರಿತು ಪ್ರತಿಕ್ರಿಯಿಸಿದ ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ಅವರು, ಜಮ್ಮುವಿನಲ್ಲಿ ದೇವಾಲಯದ ನಿರ್ಮಾಣವನ್ನು ಬಹುತೇಕ ಪೂರ್ಣಗೊಳಿಸಿದ್ದೇವೆ. ಜೂನ್ 8 ರಿಂದ ಭಕ್ತರಿಗೆ ಮುಕ್ತಗೊಳಿಸಲಾಗುವುದು. ಜೂನ್ 3 ರಿಂದ ದೇವಾಲಯದಲ್ಲಿ ಧಾರ್ಮಿಕ ಕ್ರಿಯೆಗಳು ಪ್ರಾರಂಭವಾಗಿವೆ ಎಂದರು.

ಜಮ್ಮುವಿನ ದೇವಾಲಯವನ್ನು ಪರಿಶೀಲಿಸುವಾಗ, ತಿರುಮಲದಲ್ಲಿ ಅನುಸರಿಸಿದ ಪದ್ಧತಿ ಮತ್ತು ಪದ್ಧತಿಯನ್ನು ಇಲ್ಲಿಯೂ ಅನುಸರಿಸಲಾಗುವುದು. ಈ ದೇವಾಲಯವು ಜಮ್ಮು ಮತ್ತು ಕತ್ರಾ ನಡುವಿನ ಮಾರ್ಗದಲ್ಲಿ ಬರುತ್ತದೆ. ಇಲ್ಲಿ ವೈಷ್ಣೋ ದೇವಿ ದೇವಸ್ಥಾನ ಸಹ ಇದೆ. ದೇವಾಲಯದ ನಿರ್ಮಾಣವು ದೇಶಾದ್ಯಂತ ಅನೇಕ ಬಾಲಾಜಿ ದೇವಾಲಯಗಳನ್ನು ಸ್ಥಾಪಿಸಲು ಟಿಟಿಡಿ ವಿಶಾಲ ಉಪಕ್ರಮದ ಭಾಗವಾಗಿದೆ ಎಂದು ತಿಳಿಸಿದರು.

ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ದೇಶಾದ್ಯಂತ ಬಾಲಾಜಿ ದೇವಾಲಯಗಳನ್ನು ನಿರ್ಮಿಸುತ್ತಿದೆ. ಆದ್ದರಿಂದ ಆಂಧ್ರಪ್ರದೇಶದ ತಿರುಪತಿ ಬಾಲಾಜಿ ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗದವರು ಇತರ ನಗರಗಳಲ್ಲಿನ ಈ ದೇವಾಲಯಗಳಿಗೆ ಭೇಟಿ ನೀಡಬಹುದು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+