ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದ ಸ್ಕೂಲ್ ಬಸ್ ಮೇಲೆ ಕಲ್ಲು ತೂರಾಟ: ಭಯಭೀತರಾದ ಮಕ್ಕಳು

|
Google Oneindia Kannada News

ಶೋಪಿಯಾನ್, ಮೇ 02: ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಸ್ಕೂಲ್ ಬಸ್ ವೊಂದರ ಮೇಲೆ ದುಷ್ಕರ್ಮಿಗಳು ಕಲ್ಲುತೂರಾಟ ಮಾಡಿದ ಘಟನೆ ಜಮ್ಮು ಕಾಶ್ಮಿರದ ಶೋಪಿಯಾನ್ ನಲ್ಲಿ ನಡೆದಿದೆ.

ಘಟನೆ ಕುರಿತು ಆತಂಕ ವ್ಯಕ್ತಪಡಿಸಿರುವ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, "ಈ ಸುದ್ದಿ ಕೇಳಿ ಆತಂಕ ಮತ್ತು ಸಿಟ್ಟು ಒಟ್ಟೊಟ್ಟಿಗೇ ಬಂತು. ಈ ಕೃತ್ಯ ಎಸಗಿದವರು ನಿಜಕ್ಕೂ ಹೇಡಿಗಳು ಮತ್ತು ನಿರ್ದಯಿಗಳು. ಘಟನೆ ಕುರಿತು ತನಿಖೆ ನಡೆಸಲಾಗುವುದು" ಎಂದಿದ್ದಾರೆ.

ಘಟನೆಯಲ್ಲಿ ಓರ್ವ ಬಾಲಕಿಗೆ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ತಂದೆ ಮಾತನಾಡಿ, 'ಇದು ಮಾನವೀಯತೆಗೆ ಕೊಟ್ಟ ಹೊಡೆತ. ನನ್ನ ಮಗ ಎಂದಲ್ಲ, ಯಾವುದೇ ಮಕ್ಕಳ ಮೇಲೆಯೂ ಇಂಥ ದಾಳಿ ನಡೆಯಕೂಡದು. ಆ ಮಕ್ಕಳು ಮುಗ್ಧರು' ಎಂದಿದ್ದಾರೆ.

ಬಿಳಿ ಯೂನಿಫಾರ್ಮ್ ತುಂಬ ರಕ್ತ, ರಕ್ತ: ಆ ಮಕ್ಕಳ ಸಾವಿಗೆ ಹೊಣೆ ಯಾರು?ಬಿಳಿ ಯೂನಿಫಾರ್ಮ್ ತುಂಬ ರಕ್ತ, ರಕ್ತ: ಆ ಮಕ್ಕಳ ಸಾವಿಗೆ ಹೊಣೆ ಯಾರು?

ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟದ ಘಟನೆ ಆಗಾಗ ನಡೆಯುತ್ತಲೇ ಇರುತ್ತದೆ. ಇದೇ ಕಾರಣಕ್ಕೆ ಕಣಿವೆ ರಾಜ್ಯದಲ್ಲಿ ಸಾಕಷ್ಟು ಗಲಭೆಗಳೂ ಉಂಟಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಪುಲ್ವಾಲಾ ಜಿಲ್ಲೆಯಲ್ಲಿ ನಾಗರಿಕನೊಬ್ಬ ಮೃತನಾದ ಕಾರಣಕ್ಕೆ ಕಾಶ್ಮೀರದಾದ್ಯಂತ ಪ್ರತಿಭಟನೆ ನಡೆಸುವಂತೆ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದರು. ಎಲ್ಲಾ ಅಂಗಡಿಗಳನ್ನು ಮುಚ್ಚಿ, ವ್ಯಾಪಾರ ಸ್ಥಗಿತಗೊಳಿಸುವಂತೆ ಆದೇಶಿಸಿದ್ದರು. ಇದಾದ ಮರುದಿನವೇ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

English summary
A student was injured when stone-pelters targeted a school bus in Jammu and Kashmir's Kanipora Village of Shopian district.The minor was rushed to a local hospital following the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X