ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ : ಮೋದಿ

Written By:
Subscribe to Oneindia Kannada

ನವದೆಹಲಿ, ಆಗಸ್ಟ್, 12: ಪಾಕ್ ಆಕ್ರಮಿತ ಕಾಶ್ಮೀರ, ಜಮ್ಮು ಮತ್ತು ಕಾಶ್ಮೀರ ದೇಶದ ಅವಿಭಾಜ್ಯ ಅಂಗ. ಅದನ್ನು ಯಾರೂ ಏನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವ ಮೂಲಕ ಪಾಕಿಸ್ತಾನಕ್ಕೆ ಸ್ಪಷ್ಟ ಎಚ್ಚರಿಕೆ ರವಾನಿಸಿದ್ದಾರೆ.

ಉಗ್ರ ದಾಳಿ ಮತ್ತು ಕಾಶ್ಮೀರ ಹಿಂಸಾಚಾರದ ಸಂಬಂಧ ನವದೆಹಲಿಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಮೋದಿ ದೇಶದ ಐಕ್ಯತೆ ಮತ್ತು ಶಾಂತಿ ಸ್ಥಾಪನೆಯ ವಿಚಾರವನ್ನು ಎತ್ತಿದರು. ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ರಾಜಕೀಯ ಪಕ್ಷಗಳು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ಸಂಬಂಧ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಿದವು.[ಕೇಜ್ರಿವಾಲ್ ಇದಕ್ಕೂ ಪ್ರಧಾನಿ ಮೋದಿಯನ್ನು ದೂಷಿಸಬಹುದಾ?]

narendra modi

ಮೋದಿ ಭಾಷಣದ ಹೈಲೈಟ್ಸ್
* ಜಮ್ಮು ಮತ್ತು ಕಾಶ್ಮೀರದ ಜನರಲ್ಲಿ ನಾವೆಲ್ಲರೂ ಸೇರಿ ವಿಶ್ವಾಸ ತುಂಬಬೇಕಾಗಿದೆ.
* ನಾನೂ ಕೂಡಾ ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕು ಎಂದೇ ಬಯಸುತ್ತೇನೆ.
* ಜನರ ರಕ್ಷಣೆ ವಿಚಾರದಲ್ಲಿ ಯಾರೊಂದಿಗೂ ಹೊಂದಾಣಿಕೆ ಅಥವಾ ರಾಜಿ ಸಾಧ್ಯವೇ ಇಲ್ಲ.
* ದೇಶದ ಜನರು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಟಿದ್ದಾರೆ. ಅದಕ್ಕೆ ಕಾಶ್ಮೀರದ ಜನರು ಹೊರತಾಗಿಲ್ಲ.
* ಶಾಂತಿ ಕಾಪಾಡಲು ಎಲ್ಲರ ಸಹಕಾರ ಕೋರುತ್ತೇನೆ.
* ಸಮಸ್ಯೆಗಳು ಹುಟ್ಟಿಕೊಂಡಿದ್ದರೆ ಅದಕ್ಕೆ ಪ್ರಾಮಾಣಿಕ ಪರಿಹಾರ ಹುಡುಕಲು ಸರ್ಕಾರ ಬದ್ಧವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
At the all-party meeting held to discuss the ongoing unrest in Jammu and Kashmir, Prime Minister Narendra Modi on Friday, Aug 12, said that Jammu and Kashmir, Pakistan occupied Kashmir (PoK) and Ladakh are integral parts of India. The Prime Minister, while speaking at the all-party meet reiterated India's stand on Kashmir and also said that "there will not be any compromise on national security".
Please Wait while comments are loading...