ಜಮ್ಮು ಕಾಶ್ಮೀರದಲ್ಲಿ ಮತ್ತೆ ಗುಂಡಿನ ಕಾಳಗ- ಓರ್ವ ಯೋಧ ಸಾವು!
ಶ್ರೀನಗರ ಏಪ್ರಿಲ್ 24: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಭಾರತೀಯ ಸೇನೆ ಮುಂದಾಗಿದೆ. ಇದೀಗ ಭಯೋತ್ಪಾದಕರನ್ನು ಸದೆಬಡೆಯಲು ಕಾಲ ಕೂಡಿ ಬಂದಂತೆ ಕಾಣಿಸುತ್ತಿದೆ. ಇಂದು ಉಧಂಪೂರ್ ಬಳಿ ಭದ್ರತಾ ಪಡೆಗಳು ಮತ್ತು ಉಗ್ರರ ಗುಂಪಿನ ನಡುವೆ ಘರ್ಷಣೆ ಪ್ರಾರಂಭವಾಗಿದೆ ಎಂದು ವರದಿಯಾಗಿದೆ.
ದಕ್ಷಿಣ ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗಳ ಮೇಲೆ ಉಗ್ರರ ದಾಳಿಯಾದ ಎರಡು ದಿನಗಳ ನಂತರ ಗುರುವಾರ ಬೆಳಿಗ್ಗೆ ಈ ಘರ್ಷಣೆ ಶುರುವಾಗಿದೆ. ಭಾರತೀಯ ಸೇನೆಯು ಖಚಿತಪಡಿಸಿದಂತೆ ಈ ಗುಂಡುಕಾಳಗದಲ್ಲಿ ಒಬ್ಬ ಸೈನಿಕ ಮೀರ ಮರಣ ಹೊಂದಿದ್ದಾರೆ. ಭದ್ರತಾ ಪಡೆಗಳು ಹಲವಾರು ದಿನಗಳಿಂದ ನಡೆಸುತ್ತಿದ್ದ ಶೋಧಾ ಕಾರ್ಯಾಚರಣೆಯ ಸಂದರ್ಭದಲ್ಲಿ ಉಗ್ರರೊಂದಿಗೆ ಸಂಪರ್ಕ ಸಾಧಿಸಿದ ನಂತರ ಉಧಂಪೂರ್ ಬಳಿ ಈ ಘರ್ಷಣೆ ಪ್ರಾರಂಭವಾಗಿದೆ.

ಈ ಪ್ರದೇಶದಲ್ಲಿ ಉಗ್ರರ ಉಪಸ್ಥಿತಿಯ ಬಗ್ಗೆ ಮಾಹಿತಿ ಬಂದ ನಂತರ ಶೋಧಾ ಕಾರ್ಯಾಚರಣೆ ಪ್ರಾರಂಭವಾಯಿತು ಎಂದು ಮೂಲಗಳು ತಿಳಿಸಿವೆ. ಶೋಧಾ ತಂಡಗಳು ಬೆರೋಲೆ ಪ್ರದೇಶವನ್ನು ತಲುಪಿದಾಗ ಉಗ್ರರು ಗುಂಡು ಹಾರಿಸಲು ಪ್ರಾರಂಭಿಸಿದರು. ಭಾರತೀಯ ಸೇನೆ ಪ್ರತಿದಾಳಿಯನ್ನು ಆರಂಭಿಸಿದೆ.
ಈ ಪ್ರದೇಶ ಬಸಂತಗಢದಿಂದ ಸುಮಾರು ಮೂರು ಗಂಟೆಗಳ ನಡಿಗೆಯ ದೂರದಲ್ಲಿದೆ ಮತ್ತು ಬೇಸಿಗೆಯ ತಿಂಗಳಲ್ಲಿ ಸ್ಥಳೀಯರು ತಮ್ಮ ಪಶುಗಳನ್ನು ಮೇಯಿಸಲು ಇಲ್ಲಿಗೆ ಆಗಮಿಸುತ್ತಾರೆ.












Click it and Unblock the Notifications