ಕಾಶ್ಮೀರದಲ್ಲಿ ಓರ್ವ ಉಗ್ರನ ಹತ್ಯೆ, 4 ಮಾಹಿತಿದಾರರ ಬಂಧನ
ಜಮ್ಮು ಮತ್ತು ಕಾಶ್ಮೀರ, ಜುಲೈ 23: ಇಲ್ಲಿನ ಮಿಚಿಲ್ ಭಾಗದಲ್ಲಿ ಭಾರತದ ಗಡಿ ನುಸುಳಲು ಯತ್ನಿಸಿದ ಉಗ್ರನೊಬ್ಬನನ್ನು ಭಾರತೀಯ ಗಡಿ ಭದ್ರತಾ ಪಡೆ ಸೈನಿಕರು ಹತ್ಯೆ ಮಾಡಿದ್ದಾರೆ.
ಇಲ್ಲಿ ಇನ್ನೂ ಹೆಚ್ಚಿನ ಉಗ್ರರು ಇದ್ದಾರೆ ಎಂದು ಅಂದಾಜಿಸಲಾಗಿದ್ದು ಉಳಿದವರಿಗಾಗಿ ಸೈನಿಕರು ತಮ್ಮ ಹುಡುಕಾಟ ಮುಂದುವರಿಸಿದ್ದಾರೆ.

ಇನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಉಗ್ರರಿಗೆ ಸಹಾಯ ಮಾಡುತ್ತಿದ್ದ ಅನುಮಾನದ ಮೇಲೆ ಟೆಂಗ್ ಪೊರಾ ಭಾಗದಲ್ಲಿ 4 ಸ್ಥಳೀಯರನ್ನು ಬಂಧಿಸಿದ್ದಾರೆ. ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಸಿಆರ್'ಪಿಎಫ್ ಜವಾನ ಆತ್ಮಹತ್ಯೆ
ಪ್ರತ್ಯೇಕ ಘಟನೆಯೊಂದರಲ್ಲಿ ಛತ್ತೀಸ್ ಗಢದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ಸಿಆರ್'ಪಿಎಫ್ ಜವಾನರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.












Click it and Unblock the Notifications