ಹಿಮಾಚಲದ ಸಿಎಂ ಆಗಿ ಜೈರಾಮ್ ಠಾಕೂರ್ ಪ್ರಮಾಣ ವಚನ ಸ್ವೀಕಾರ

Posted By:
Subscribe to Oneindia Kannada

ಶಿಮ್ಲಾ, ಡಿಸೆಂಬರ್ 27: ಹಿಮಾಚಲ ಪ್ರದೇಶ ಮುಖ್ಯಮಂತ್ರಿಯಾಗಿ ಜೈರಾಮ್ ಠಾಕೂರ್ ಅವರು ಬುಧವಾರದಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಈ ಶುಭ ಸಂದರ್ಭದಲ್ಲಿ ಹಾಜರಿದ್ದರು.

ಎಬಿವಿಪಿಯಿಂದ ಸಿಎಂ ಗಾದಿಗೆ, ಹಿಮಾಚಲದ ನೂತನ ಸಾರಥಿ ಜೈರಾಮ್

ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಜೈ ರಾಮ್ ಠಾಕೂರ್ ಹಾಗೂ ಅವರ ಸಂಪುಟದ 10 ಮಂದಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

Jai Ram Thakur takes oath as Himachal CM along with 10 Cabinet Ministers

ಪ್ರಧಾನಿ ಮೋದಿ, ಅಮಿತ್ ಶಾ ಅಲ್ಲದೆ, ಕೇಂದ್ರ ಸಚಿವರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಹಿಮಾಚಲದ ಸಿಎಂ ಅಭ್ಯರ್ಥಿ ಪ್ರೇಮ್ ಸೋಲಲು ಏನು ಕಾರಣ?

ಜೈರಾಮ್ ಠಾಕೂರ್ ಅವರ ಜತೆಗೆ ಮಹೇಂದ್ರ ಸಿಂಗ್, ಸುರೇಶ್ ಭಾರದ್ವಾಜ್, ಅನಿಲ್ ಶರ್ಮ, ಸರ್ವೀನ್ ಚೌಧುರಿ, ರಾಮ್ ಲಾಲ್ ಮರ್ಖಂಡ್, ವಿಪಿನ್ ಸಿಂಗ್ ಪರ್ಮಾರ್, ವೀರೇಂದ್ರ ಕನ್ವರ್, ವಿಕ್ರಮ್ ಸಿಂಗ್, ಗೋವಿಂದ್ ಸಿಂಗ್ ಹಾಗೂ ರಾಜೀವ್ ಸಹ್ಜಲ್ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಹಿಮಾಚಲ ಪ್ರದೇಶ ವಿಧಾನಸಭೆಯ 68 ಸ್ಥಾನಗಳ ಪೈಕಿ ಬಿಜೆಪಿ 44 ಹಾಗೂ ಕಾಂಗ್ರೆಸ್ 21 ಸ್ಥಾನಗಳನ್ನು ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಠಾಕೂರ್: ಕರ್ನಾಟಕದ ಶಿವಮೊಗ್ಗದ ಡಾ. ಸಂಧ್ಯಾ ಅವರನ್ನು ವರಿಸಿರುವ ಜೈರಾಮ್ ಠಾಕೂರ್ ಅವರು ಮಂಡಿ ಜಿಲ್ಲೆಯ ಸೆರಾಜ್ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಆರೆಸ್ಸೆಸ್ ಬೆಂಬಲಿತ, ಜೆಪಿ ನಡ್ಡಾ ಆಪ್ತರಾದ 52 ವರ್ಷ ವಯಸ್ಸಿನ ಠಾಕೂರ್ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP leader Jai Ram Thakur took oath as Chief Minister of Himachal Pradesh in a swearing-in ceremony held at the historic Ridge Maidan in Shimla on Wednesday. The oath of office and secrecy was delivered by Governor Acharya Dev Vrat.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ