• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಉಪ ರಾಷ್ಟ್ರಪತಿ ಚುನಾವಣೆ, ನಾಮಪತ್ರ ಸಲ್ಲಿಸಿದ ಜಗದೀಪ್

|
Google Oneindia Kannada News

ನವದೆಹಲಿ,ಜುಲೈ.18: ಉಪ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಜಗದೀಪ್ ಧನಕರ್ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಚಿವ ನಿತಿನ್ ಗಡ್ಕರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಮತ್ತು ಇತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಜಗದೀಪ್‌ ಧನಕರ್‌ ಎನ್‌ಡಿಎ ಮೈತ್ರಿಕೂಟ ಅಭ್ಯರ್ಥಿಯಾಗಿ ಜುಲೈ 16ರಂದು ಘೋಷಿತರಾಗಿದ್ದರು. ಆಗಸ್ಟ್‌ 6ರಂದು ನಡೆಯುವ ಉಪರಾಷ್ಟ್ರಪತಿ ಚುನಾವಣೆಗೆ ಈಗ ಜಗದೀಪ್‌ ಧನಕರ್‌ ನಾಮಪತ್ರ ಸಲ್ಲಿಸಿದ್ದಾರೆ.

ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಜಗದೀಪ್‌ (71) ವಿರುದ್ಧ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಮಾರ್ಗರೆಟ್ ಆಳ್ವಾ (77). ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಮಂಗಳವಾರ ಕೊನೆಯ ದಿನಾಂಕವಾಗಿದೆ. ಪ್ರಸ್ತುತ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಅವಧಿ ಆಗಸ್ಟ್ 10 ರಂದು ಕೊನೆಗೊಳ್ಳುತ್ತದೆ.

ಜಗದೀಪ್ ಧನ್‌ಕರ್ ಹೆಸರನ್ನು ಘೋಷಿಸುವಾಗ ಅವರ ಕೃಷಿ ಹಿನ್ನೆಲೆಯನ್ನು ಪ್ರಧಾನಿ ಮೋದಿ ಉಲ್ಲೇಖಿಸಿದ್ದರು. 1951ರಲ್ಲಿ ರಾಜಸ್ಥಾನದ ಕಿತಾನಾ ಗ್ರಾಮದಲ್ಲಿ ಜಾಟ್ ಕುಟುಂಬದಲ್ಲಿ ಜನಿಸಿದ ಜಗದೀಪ್‌ ಧನಕರ್‌ ಅವರು 1990 ರಲ್ಲಿ ರಾಜಕೀಯ ಪ್ರವೇಶಿಸುವ ಮೊದಲು ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿದ್ದರು.

ಕಾಂಗ್ರೆಸ್ ಬೆಂಬಲಿತ ಸರ್ಕಾರದಲ್ಲಿ ಧನಕರ್‌ ಅವರು ಮಂತ್ರಿಯಾಗಿದ್ದರು. ಪಿ. ವಿ. ನರಸಿಂಹರಾವ್ ಪ್ರಧಾನಿಯಾದಾಗ ಅವರು ಕಾಂಗ್ರೆಸ್ ಸೇರಿದರು. ಬಳಿಕ ಅಶೋಕ್ ಗೆಹ್ಲೋಟ್ ರಾಜಸ್ಥಾನದಲ್ಲಿ ಪಕ್ಷದ ಉನ್ನತ ಸ್ಥಾನಕ್ಕೆ ಏರುತ್ತಿದ್ದಂತೆ ಧನಕರ್‌ ಜೆಪಿಗೆ ಬದಲಾದರು.

ಮೂರು ವರ್ಷಗಳ ಹಿಂದೆ ಅವರು ಪಶ್ಚಿಮ ಬಂಗಾಳದ ಗವರ್ನರ್ ಆಗಿ ನೇಮಕಗೊಂಡರು. ಅಲ್ಲಿ ಅವರು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದೊಂದಿಗೆ ಆಗಾಗ್ಗೆ ಜಟಾಪಟಿಯಲ್ಲಿ ತೊಡಗಿದ್ದರು. ಉಪ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಜಗದೀಪ್‌ ಧನಕರ್‌ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

Recommended Video

   Virat Kohli ಮೂರನೇ ಪಂದ್ಯದಲ್ಲಿ ಎಡವಿದ್ದರ ಬಗ್ಗೆ ಜನ ಏನು ಹೇಳ್ತಾರೆ *Cricket | OneIndia Kannada
   English summary
   Jagdeep Dhankar has filed nomination papers as the NDA candidate for the Vice President election. Voting will be held on August 6th.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X