ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಥಯಾತ್ರೆ ನಿಮಿತ್ತ ಪುರಿ ಜಗನ್ನಾಥನ ಪುರಾಣ

By * ರಾಘವೇಂದ್ರ ಅಡಿಗ, ಬೆಂಗಳೂರು
|
Google Oneindia Kannada News

ಜಗನ್ನಾಥ ದೇವರ ರಥಗಳನ್ನು ಸಾಂಕೇತಿಕವಾಗಿ ಸ್ವಚ್ಛಗೊಳಿಸುವ ಮೂಲಕ ಈ ಬಾರಿ ದೇಶದ ಹಲವೆಡೆ ರಥ ಯಾತ್ರೆಗೆ ಚಾಲನೆ ನೀಡಲಾಗಿದೆ. ಜಗನ್ನಾಥ, ಬಲರಾಮ ಹಾಗೂ ತಂಗಿ ಸುಭದ್ರಾ ದೇವರ ಉತ್ಸವ ಮೂರ್ತಿಗಳ ಜೊತೆಗೆ ಮೆರವಣಿಗೆ ಸಾಗುವುದನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ.

ರೂಢಿಯಂತೆ ಸಂಪ್ರದಾಯ ಗಜಪಡೆ ಮೊದಲಿಗೆ ಜಗನ್ನಾಥ ದೇವರ ದರ್ಶನ ಪಡೆಯಲಿದೆ. ಮೆರವಣಿಗೆಯ ಮುಂದಿನ ಸಾಲಿನಲ್ಲಿ ಗಜಪಡೆ ಸಾಗಲಿದೆ, ನಂತರ ವಿವಿಧ ಧಾರ್ಮಿಕ, ಸಾಂಸ್ಕೃತಿಕ ತಂಡಗಳು ಸೇರ್ಪಡೆಗೊಂಡು ಮೆರವಣಿಗೆಗೆ ಇನ್ನಷ್ಟು ಮೆರಗು ತಂದಿವೆ. ಈ ನಡುವೆ ಪುರಿ ನಗರಿ, ಜಗನ್ನಾಥ ಯಾತ್ರೆಯ ಐತಿಹಾಸಿಕ ಹಿನ್ನೆಲೆ ಹಾಗೂ ಪೌರಾಣಿಕ ಮಹತ್ವದ ಕಥೆ ಮುಂದಿದೆ...

ಬಹುಕಾಲದ ಹಿಂದೆ ಮರಕತದಿಂದ ಮೈದುಂಬಿದ ನೀಲಮಾಧವನನ್ನು ನೀಲಗಿರಿಯ ಬುಡಕಟ್ಟಿನ ಅರಸನಾದ ವಿಶ್ವವಸುವು ಅರ್ಚಿಸುತ್ತಿದ್ದನು. ಅದೇ ವೇಳೆಯಲ್ಲಿ ಆವಂತಿ ರಾಜ್ಯದ ರಾಜನಾಗಿದ್ದ ಇಂದ್ರದ್ಯುಮ್ನನು ತಾನು ಸಹ ಮಹಾನ್ ವಿಷ್ಣುಭಕ್ತನಾಗಿದ್ದು ಅವನಿಗೆ ಸಹ ವಿಶ್ವವಸುವು ಪೂಜಿಸುತ್ತಿದ್ದ ನೀಲಮಾಧವ ವಿಗ್ರಹವನ್ನು ಹೇಗಾದರೂ ಪಡೆಯಬೇಕೆನ್ನುವ ಬಯಕೆಯುಂಟಾಯಿತು. ಮುಂದೆ ಓದಿ... ಇಲ್ಲಿನ ಸರಣಿ ಚಿತ್ರಗಳು ಆಂಧ್ರಪ್ರದೇಶದ ವೈಜಾಗ್ ನಿಂದ ಬಂದ ಚಿತ್ರಗಳಾಗಿವೆ

 ವಿಗ್ರಹವೇ ಕಣ್ಮರೆಯಾಯಿತು

ವಿಗ್ರಹವೇ ಕಣ್ಮರೆಯಾಯಿತು

ಕೆಲದಿನಗಳ ಬಳಿಕ ಚಿಗುರಿದ ಸಾಸಿವೆ ಗಿಡದ ಜಾಡನ್ನು ಹಿಡಿದು ಇಂದ್ರದ್ಯುಮ್ನನ ಸೈನ್ಯ ಸಮೇತನಾಗಿ ವಿಗ್ರಹವಿರುವ ಸ್ಥಳಕ್ಕೆ ಬರಲು ವಿಗ್ರಹವೇ ಕಣ್ಮರೆಯಾಯಿತು.

ಸಾಯಲು ಹೊರಟ ರಾಜನಿಗೆ ತಡೆ

ಸಾಯಲು ಹೊರಟ ರಾಜನಿಗೆ ತಡೆ

ವಿಗ್ರಹವು ನಾಪತ್ತೆಯಾಗಿದ್ದರಿಂದಾಗಿ ಬೇಸರಗೊಂಡು ಸಾಯಲು ಹೊರಟ ಇಂದ್ರದ್ಯುಮ್ನನಿಗೆ ಅಶರೀರವಾಣಿಯೊಂದು ಕೇಳಿಸಿ ಅದರ ಅನುಜ್ಞೆಯಂತೆಯೇ ತಾನು ವಿಷ್ಣು ದೇವಾಲಯವನ್ನು ನಿರ್ಮಾಣ ಮಾಡಿದನು. ನಾರದರು ಅದರಲ್ಲಿ ನರಸಿಂಹ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದರು.

ಕನಸಿನಲ್ಲಿ ಬಂದ ಶ್ರೀ ಜಗನ್ನಾಥ ಸ್ವಾಮಿ

ಕನಸಿನಲ್ಲಿ ಬಂದ ಶ್ರೀ ಜಗನ್ನಾಥ ಸ್ವಾಮಿ

ಇಷ್ಟಾದ ಬಳಿಕ ಇಂದ್ರದ್ಯುಮ್ನನ ಕನಸಿನಲ್ಲಿ ಬಂದ ಶ್ರೀ ಜಗನ್ನಾಥ ಸ್ವಾಮಿಯು ಸಮುದ್ರದಲ್ಲಿ ತೇಲಿಬರುವ ಮರದ ದಿಮ್ಮಿಯೊಂದರಿಂದ ವಿಷ್ಣು, ಬಲರಾಮ, ಸುಭದ್ರೆಯರ ಮೂರ್ತಿಗಳನ್ನು ನಿರ್ಮಿಸುವಂತೆ ನಿರ್ದೇಶಿಸಿದನು. ಅದಾಗ ಬಡಗಿಯ ವೇಷದಲ್ಲಿ ಬಂದ ದೇವಶಿಲ್ಪಿ ವಿಶ್ವಕರ್ಮನು ತಾನೇ ಆ ವಿಗ್ರಹಗಳನ್ನು ನಿರ್ಮಾಣ ಮಾಡಲು ತೊಡಗಿಕೊಂಡನು.

ವಿಶ್ವಕರ್ಮನು ತಾನು ಅದೃಶ್ಯನಾಗಿದ್ದನು

ವಿಶ್ವಕರ್ಮನು ತಾನು ಅದೃಶ್ಯನಾಗಿದ್ದನು

ಆ ಸಮಯದಲ್ಲಿ ವಿಶ್ವಕರ್ಮನು 'ತನ್ನ ಕೆಲಸ ಪೂರ್ಣ ಗೊಂಡ ಬಳಿಕ ನಾನೇ ಹೇಳುತ್ತೇನೆ. ನಾನು ಹೇಳುವವರೆವಿಗೂ ಯಾರೂ ಆ ಕೊಠಡಿಯ ಬಾಗಿಲನ್ನು ತೆರೆಯಬಾರದು' ಎನ್ನುವುದಾಗಿ ಅಪ್ಪಣೆ ಮಾಡಿದನು.

ಪ್ರತಿಮೆಗಳು ಅಪೂರ್ಣಗೊಂಡಿದ್ದವು.

ಪ್ರತಿಮೆಗಳು ಅಪೂರ್ಣಗೊಂಡಿದ್ದವು.

ಇದಾಗಿ ಹಲವಾರು ದಿನಗಳುರುಳಿದರೂ ಸಹ ವಿಗ್ರಹ ನಿರ್ಮಾಣದ ಕೆಲಸದ ಸದ್ದೇ ಕೇಳಿಸದ ಕಾರಣದಿಂದ ದಿಗಿಲುಗೊಂಡ ಇಂದ್ರದ್ಯುಮ್ನ ಮಹಾರಾಜನು ಬಾಗಿಲನ್ನು ತೆರೆಯಿಸಲು ವಿಶ್ವಕರ್ಮನು ತಾನು ಅದೃಶ್ಯನಾಗಿದ್ದನು. ಪ್ರತಿಮೆಗಳು ಅಪೂರ್ಣಗೊಂಡಿದ್ದವು.

ಅಪೂರ್ಣ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ ರಾಜ

ಅಪೂರ್ಣ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ ರಾಜ

ಅದೇ ಸಮಯದಲ್ಲಿ ಆ ಅಪೂರ್ಣ ವಿಗ್ರಹಗಳನ್ನೇ ಪ್ರತಿಷ್ಠೆ ಮಾಡುವಂತೆ ರಾಜನಿಗೆ ದೈವದ ಅಪ್ಪಣೆಯಾಗಲು ಅದೇ ಅಪೂರ್ಣ ವಿಗ್ರಹಗಳನ್ನು ನೇಮದಿಂದ ಪ್ರತಿಷ್ಠಾಪನೆ ಮಾಡಿಸಿದನು.

ಜಗನ್ನಾಥನಿಗೆ ‘ದಾರುಬ್ರಹ್ಮ’ ಎಂಬ ಹೆಸರು

ಜಗನ್ನಾಥನಿಗೆ ‘ದಾರುಬ್ರಹ್ಮ’ ಎಂಬ ಹೆಸರು

ಇದೇ ಕಾರಣದಿಂದ ಜಗನ್ನಾಥನಿಗೆ 'ದಾರುಬ್ರಹ್ಮ' ಎಂಬ ಹೆಸರು ಪ್ರಾಪ್ತಿಯಾಯಿತು. ಅಂದಿನಿಂದ ಇಂದಿನವರೆಗೂ ಅದೇ ಸ್ವರೂಪದಲ್ಲಿ ತನ್ನ ಭಕ್ತಜನರಿಂದ ಪೂಜೆಗೊಳ್ಳುತ್ತಿರುವ ಜಗನ್ನಾಥ, ಬಲಭದ್ರ, ಸುಭದ್ರೆಯರು ವಿಷ್ಣು, ಶಿವ ಹಾಗೂ ಶಕ್ತಿಯ ಸ್ವರೂಪರಾಗಿದ್ದಾರೆ.

English summary
In one sense, Puri is synonymous, with Jagannatha and vice versa. For more than a century past, historians, foreign and Indian, have been trying to' unveil the mystery of the three deities namely, Jagannatha, Balabhadra and Subhadra worshipped in the Puri temple. Here is mythological story about the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X