ಗುಂಡಿನ ಕಾಳಗದಲ್ಲಿ ಮೂವರು ಭಯೋತ್ಪಾದಕರು ಬಲಿ
ಶ್ರೀನಗರ, ಜುಲೈ 22: ಜಮ್ಮು-ಕಾಶ್ಮೀರದ ಕುಲ್ಗಾಮ್ ನಲ್ಲಿ ಇಂದು ಬೆಳ್ಳಂಬೆಳಗ್ಗೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ ಎಂದು ಡಿಜಿಪಿ ವೈದ್ ಅವರು ಹೇಳಿದ್ದಾರೆ.
ಕುಲ್ಗಾಮ್ ಜಿಲ್ಲೆಯಲ್ಲಿ ಪೊಲೀಸ್ ಪೇದೆಯೊಬ್ಬರನ್ನು ಅಪಹರಿಸಿ ಹತ್ಯೆಗೈದ ಭಯೋತ್ಪಾದಕರು ಇವರೆ ಎಂದು ಗುರುತಿಸಲಾಗಿದೆ. ಈ ಘಟನೆ ಬೆನ್ನಲ್ಲೇ ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿಯಲಾಯಿತು. ತರಬೇತಿ ನಿರತ ಪೇದೆ ಸಲೀಂ ಅಹ್ಮದ್ ಶಾ ಎಂಬುವರನ್ನು ಭಯೋತ್ಪಾದಕರು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದರು.

ಇಂದು ಬೆಳಗ್ಗೆ ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಕೊಂದು ಹಾಕಲಾಗಿದೆ. ಮೂವರು ಭಯೋತ್ಪಾದಕರ ಮೃತ ದೇಹಗಳು ಹಾಗೂ 2 ಎಕೆ 47 ರೈಫಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.
3 terrorists were killed in Kulgam early morning today. They were involved in abduction&killing of one police constable (Mohammad Saleem) yesterday. Bodies of the terrorists & 2 AK-47 rifles recovered. One terrorist was associated with LeT, other two were locals: SP Vaid, DGP J&K pic.twitter.com/jiAGycL9Tt
— ANI (@ANI) July 22, 2018
ಮೂವರು ಕೂಡಾ ಲಷ್ಕರ್ ಇ ತೋಯ್ಬಾ ಸಂಘಟನೆ ಜತೆ ಸಂಪರ್ಕ ಹೊಂದಿದ್ದರು ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಎಸ್ಪಿ ವೈದ್ ಹೇಳಿದರು.












Click it and Unblock the Notifications