ಪಾಕ್ ನಿಂದ ಕದನ ವಿರಾಮ ಉಲ್ಲಂಘನೆ: ಸೈನಿಕರಿಗಿಲ್ಲ ದೀಪಾವಳಿ ಸಂಭ್ರಮ!
ಪೂಂಛ್(ಜಮ್ಮು-ಕಾಶ್ಮೀರ), ಅಕ್ಟೋಬರ್ 18: ಭಾರತೀಯರೆಲ್ಲ ದೀಪಾವಳಿಯ ಗುಂಗಿನಲ್ಲಿ ಮೈಮರೆತಿದ್ದರೆ ಗಡಿಯಲ್ಲಿರುವ ಸೈನಿಕರಿಗೆ ಮಾತ್ರ ಒಂದುಕ್ಷಣ ನಿದ್ದೆ ಬಾರದಂತೆ ಪಾಕಿಸ್ತಾನ ಕದನವಿರಾಮ ಉಲ್ಲಂಘನೆ ಮಾಡುತ್ತಲೇ ಇದೆ.
ಇಂದು(ಅ.18) ಬೆಳಿಗ್ಗೆ ಇಲ್ಲಿನ ಪೂಂಛ್ ಮತ್ತು ರಾಜೌರಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕ್ ಸೈನಿಕರು ಗುಂಡು ಹಾರಿಸಿದ ಪರಿಣಾಮ ಓರ್ವ ಭಾರತೀಯ ನಾಗರಿಕನಿಗೆ ಗಾಯವಾಗಿದ್ದು ಆತಂಕದ ಸ್ಥಿತಿ ಏರ್ಪಾಡಾಗಿದೆ.

ಪಾಕ್ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಇತ್ತೀಚೆಗಷ್ಟೇ ಕದನ ವಿರಾಮ ಉಲ್ಲಂಘಿಸಿದ್ದ ಪಾಕಿಸ್ತಾನ ಗುಂದಿನ ದಾಳಿ ನಡೆಸಿದ ಪರಿಣಾಮ ಓಬ್ಬ ಮಗು ಸೇರಿದಂತೆ ನಾಲ್ವರು ಭಾರತೀಯ ನಾಗರಿಕರು ಗಂಭೀರ ಗಾಯಗೊಂಡಿದ್ದರು.












Click it and Unblock the Notifications