ಗಡಿಯಲ್ಲಿ ಮತ್ತೆ ಪಾಕ್ ಪುಂಡಾಟ: ಭಾರತದ ಕಡೆ ಗುಂಡಿನ ದಾಳಿ

Posted By:
Subscribe to Oneindia Kannada

ಬಾಲಾಕೋಟ್ (ಕಾಶ್ಮೀರ), ಮೇ 17: ಪಾಕಿಸ್ತಾನದ ಸೇನೆ, ಮಂಗಳವಾರ ಮಧ್ಯರಾತ್ರಿ ಜಮ್ಮು-ಕಾಶ್ಮೀರದ ಗಡಿಭಾಗದಲ್ಲಿ ಭಾರತದ ಕಡೆಗೆ ಪುನಃ ಗುಂಡಿನ ದಾಳಿ ನಡೆಸಿದೆ.

ಭಾರತೀಯ ಸೇನಾ ವಲಯಗಳನ್ನು ಗುರಿಯಾಗಿಸಿ ಈ ದಾಳಿ ನಡೆದಿದ್ದ ಭಾರತೀಯ ಸೇನೆ ಇದಕ್ಕೆ ದಿಟ್ಟ ಉತ್ತರ ಕೊಡುವಲ್ಲಿ ನಿರತವಾಗಿದೆ. ಮಂಗಳವಾರ ಮಧ್ಯರಾತ್ರಿಯಿಂದ ನಡೆದ ಈ ದಾಳಿಯು ಬುಧವಾರ ಬೆಳಗ್ಗೆವರೆಗೂ ಮುಂದುವರಿದಿತ್ತು.

J&K: Pakistan violates ceasefire again in Balkot, India retaliates

ಮಧ್ಯರಾತ್ರಿ ಬಾಲಾಕೋಟ್ ಸೆಕ್ಟರ್ ನಲ್ಲಿ ಈ ಗುಂಡಿನ ದಾಳಿ ಆರಂಭವಾಯಿತು. ಆನಂತರ, ನೌಶಾರಾ ಸೆಕ್ಟರ್ ನಲ್ಲೂ ಇದೇ ರೀತಿಯ ಗುಂಡಿನ ದಾಳಿ ನಡೆಸಲಾಯಿತು.

ಭಾನುವಾರವೂ ಇದೇ ರೀತಿ ದಾಳಿ ನಡೆಸಿದ್ದ ಪಾಕಿಸ್ತಾನ ಸೇನೆ, 82 ಎಂಎಂ ಹಾಗೂ 120 ಎಂಎಂ ಗಾತ್ರದ ತೋಪುಗಳನ್ನು ಭಾರತದ ಕಡೆಗೆ ಗುರಿಯಾಗಿಸಿ ಪ್ರಯೋಗಿಸಿತ್ತು. ಗಡಿ ಭದ್ರತಾ ರೇಖೆಯ (ಎಲ್ ಒಸಿ) ಬಳಿಯ ಚಿಟಿ ಬಾಕ್ರಿ ಹಾಗೂ ರಜೌರಿಯಲ್ಲಿ ಈ ದಾಳಿ ನಡೆಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pakistani Army continued its provocations as it initiated ceasefire violation in Balakot sector here in Jammu and Kashmir on Tuesday night and intermittent firing continued.
Please Wait while comments are loading...