• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

J&K: ಪಂಚತಾರ್ನಿ ಕಡೆಯಿಂದ ಅಮರನಾಥ ಯಾತ್ರೆ ಪುನರಾರಂಭ

|
Google Oneindia Kannada News

ಅಮರನಾಥ ಜುಲೈ 11: ಮೇಘಸ್ಫೋಟದ ಘಟನೆಯಿಂದಾಗಿ ಭಾಗಶಃ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಸೋಮವಾರ ಬೆಳಗ್ಗೆ ಪಂಚತಾರ್ಣಿ ಕಡೆಯಿಂದ ಪುನರಾರಂಭಗೊಂಡಿದೆ ಎಂದು ಅಮರನಾಥ ಪುಣ್ಯಕ್ಷೇತ್ರ ಮಂಡಳಿ ಮಾಹಿತಿ ನೀಡಿದೆ. ವರದಿಗಳ ಪ್ರಕಾರ, ಯಾತ್ರೆ ಬೆಳಿಗ್ಗೆ 5 ಗಂಟೆಗೆ ಪುನರಾರಂಭಗೊಳ್ಳಬೇಕಿತ್ತು. ಆದರೆ ನಿರಂತರ ಮಳೆಯಿಂದಾಗಿ ಸ್ಥಗಿತಗೊಂಡಿದೆ. ಆದರೆ, ಈಗ ಪಂಚತರ್ಣಿಯಿಂದ ಪುನರಾರಂಭಗೊಂಡಿದೆ. ಯಾತ್ರೆಯು ಜಮ್ಮುವಿನಲ್ಲಿ ಸ್ಥಗಿತಗೊಂಡಿತ್ತು, ಆದರೆ ಯಾತ್ರಿಕರ ಹೊಸ ಬ್ಯಾಚ್ ಇಂದು ಬಾಲ್ಟಾಲ್ ಬೇಸ್ ಕ್ಯಾಂಪ್‌ನಿಂದ ನಿರ್ಗಮಿಸಿದೆ. ಎರಡೂ ಕಡೆಯಿಂದ ಬಾಲ್ಟಾಲ್ ಮತ್ತು ನುನ್ವಾನ್ ಚಾಪರ್ಗಳು ಲಭ್ಯವಿವೆ.

"ನಮಗೆ ಭಗವಂತನ ಆಶೀರ್ವಾದವಿದೆ. ಆತನ ಕೃಪೆಯಿಂದ ನಾವು ಶಕ್ತಿವಂತರಾಗಿದ್ದಾವೆ. ಬಾಬಾನ ದರ್ಶನವಿಲ್ಲದೆ ಹಿಂತಿರುಗುವುದಿಲ್ಲ. ನಾವು ಬಾಬಾ ಭೋಲೆನಾಥನಲ್ಲಿ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದೇವೆ. ಬಾಬಾರ ದರ್ಶನಕ್ಕಾಗಿ ಕಾಯುತ್ತಿದ್ದೇವೆ. ಯಾತ್ರೆಯು ಪುನರಾರಂಭಗೊಂಡಿರುವುದು ನಮಗೆ ಸಂತೋಷವಾಗಿದೆ. CRPF ಮತ್ತು ಇತರ ಸಿಬ್ಬಂದಿ ನಮಗೆ ತೆರಳಲು ಮಾರ್ಗದರ್ಶನ ನೀಡಿದ್ದಾರೆ. ಸುರಕ್ಷಿತವಾಗಿ ಮುನ್ನಡೆಯುತ್ತೇವೆ" ಎಂದು ಯಾತ್ರಿಕರೊಬ್ಬರು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.

ಹಠಾತ್ ಪ್ರವಾಹಕ್ಕೆ ಹದಿನಾರು ಜನ ಬಲಿ

ಹಠಾತ್ ಪ್ರವಾಹಕ್ಕೆ ಹದಿನಾರು ಜನ ಬಲಿ

ಶುಕ್ರವಾರದಂದು ಅಮರನಾಥ ಗುಹೆಯ ದೇಗುಲದ ಬಳಿ ಮೇಘಸ್ಫೋಟ ಸಂಭವಿಸಿ ಅನೇಕ ಸಾವು ನೋವು ಸಂಭವಿಸಿವೆ. ಹಠಾತ್ ಪ್ರವಾಹಕ್ಕೆ ಹದಿನಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಮೂರು ಡಜನ್ ಜನರು ಕಾಣೆಯಾಗಿದ್ದಾರೆ.


ಇಂದು ಮತ್ತೆ IAF Mi-17 V5 ಮತ್ತು Cheetal ಹೆಲಿಕಾಪ್ಟರ್‌ಗಳ ಮೂಲಕ 34 ಗಾಯಗೊಂಡ ಯಾತ್ರಾರ್ಥಿಗಳನ್ನು ಸ್ಥಳಾಂತರಿಸಲಾಯಿತು. ಐಎಎಫ್ ಹೆಲಿಕಾಪ್ಟರ್‌ಗಳು 20 ಎನ್‌ಡಿಆರ್‌ಎಫ್ ಸಿಬ್ಬಂದಿ ಜೊತೆಗೆ ಆರು ತಂಡಗಳನ್ನು ಶಿಲಾಖಂಡರಾಶಿಗಳ ಅಡಿಯಲ್ಲಿ ಸಿಲುಕಿರುವ ನಾಪತ್ತೆಯಾದ ವ್ಯಕ್ತಿಗಳನ್ನು ಹುಡುಕಲು ಏರ್‌ಲಿಫ್ಟ್ ಮಾಡಲಾಗಿದೆ.

ಬದುಕುಳಿದವರ ಪತ್ತೆಗೆ ಕಾರ್ಯಚರಣೆ

ಬದುಕುಳಿದವರ ಪತ್ತೆಗೆ ಕಾರ್ಯಚರಣೆ

ಶುಕ್ರವಾರದಂದು ಅಮರನಾಥದ ಪವಿತ್ರ ದೇಗುಲದ ಸಮೀಪವಿರುವ ಪ್ರದೇಶದಲ್ಲಿ ಮೇಘಸ್ಫೋಟದ ನಂತರ ಹಾಕಲಾದ ಅವಶೇಷಗಳ ಅಡಿಯಲ್ಲಿ ಬದುಕುಳಿದವರನ್ನು ಪತ್ತೆಹಚ್ಚಲು ಭಾರತೀಯ ಸೇನೆಯು ಭಾನುವಾರ ತಂಡಗಳನ್ನು ನೇಮಿಸಲಾಗಿದೆ. "ಕ್ಸೇವರ್ 4000 ರಾಡಾರ್ ಅನ್ನು ಅಳವಡಿಸಲಾಗಿದೆ ಮತ್ತು ಅವಶೇಷಗಳ ಅಡಿಯಲ್ಲಿ ಬದುಕುಳಿದವರನ್ನು ಹುಡುಕಲು ಮಧ್ಯಾಹ್ನದಿಂದ ಅಮರನಾಥದಲ್ಲಿ ಕಾರ್ಯನಿರ್ವಹಿಸುತ್ತಿದೆ" ಎಂದು ಭಾರತೀಯ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಮನೋಜ್ ಸಿನ್ಹಾ ಅವರು ಭಾನುವಾರ ಪಹಲ್ಗಾಮ್‌ನಲ್ಲಿರುವ ಬೇಸ್ ಕ್ಯಾಂಪ್‌ಗೆ ಭೇಟಿ ನೀಡಿ ಯಾತ್ರಾರ್ಥಿಗಳನ್ನು ಭೇಟಿ ಮಾಡಿದರು.

ಯಾತ್ರೆ ಪೂರ್ಣಗೊಳಿಸುವವರೆಗೂ ಹಿಂದಿರುಗಲು ನಿರಾಕರಣೆ

ಯಾತ್ರೆ ಪೂರ್ಣಗೊಳಿಸುವವರೆಗೂ ಹಿಂದಿರುಗಲು ನಿರಾಕರಣೆ

ಅಮರನಾಥ ಗುಹೆ ದೇಗುಲದಿಂದ ಸುಮಾರು 2 ಕಿಮೀ ದೂರದಲ್ಲಿ ಶುಕ್ರವಾರ (ಜುಲೈ 8) ಸಂಜೆ 5:30 ರ ಸುಮಾರಿಗೆ ಮೇಘಸ್ಫೋಟ ಸಂಭವಿಸಿದೆ. ತಕ್ಷಣ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ, ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾದರು. ಪವಿತ್ರ ಗುಹೆಯ ಬಳಿ ಭಾರಿ ನೀರಿನ ಹರಿವಿನಿಂದ ಮೂರು ಲಾಂಗರ್ ಕೊಚ್ಚಿಹೋಗಿವೆ. ಹಲವಾರು ಜನ ಕಾಣೆಯಾಗಿದ್ದಾರೆ. ಹಠಾತ್ ಪ್ರವಾಹದಿಂದ ಯಾತ್ರೆ ಸ್ಥಗಿತಗೊಳಿಸಲಾಗಿತ್ತು. ಇಂದೂ ಕೂಡ ಮಳೆಯಾಗುತ್ತಿದೆ. ಆದರೆ ಯಾತ್ರೆ ಪೂರ್ಣಗೊಳ್ಳುವವರೆಗೂ ಹಿಂದಿರುಗುವುದಿಲ್ಲ ಎಂದು ಯಾತ್ರಾರ್ಥಿಗಳು ಇಂದು ಮತ್ತೆ ಯಾತ್ರೆಯನ್ನು ಆರಂಭವಿಸಿದ್ದಾರೆ.

ಈವರೆಗೆ ಲಕ್ಷ ಯಾತ್ರಿಕರ ದರ್ಶನ

ಈವರೆಗೆ ಲಕ್ಷ ಯಾತ್ರಿಕರ ದರ್ಶನ

ರಾಮಬಾನ್ ಜಿಲ್ಲೆಯ ಆರು ಸ್ಥಳಗಳಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ನಂತರ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ವಾಹನಗಳು ಸಂಚರಿಸದಂತೆ ಸ್ಥಗಿತಗೊಳಿಸಲಾಗಿದೆ. ಮೆಹಾರ್, ಕೆಫೆಟೇರಿಯಾ ಮೋಡ್, ಚಂಬಾ, ಅನೋಖಿಫಾಲ್, ಕೆಲಮೋಡ್ ಮತ್ತು ಪಂಟಿಯಾಲ್ ಹೆದ್ದಾರಿಗಳನ್ನು ಮುಚ್ಚಲಾಗಿತ್ತು. ಸದ್ಯ ರಸ್ತೆ ಮಾರ್ಗವನ್ನು ಸುಲಭಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಜೂನ್ 30ರಂದು ಶುರುವಾಗಿರುವ ಅಮರನಾಥ ಯಾತ್ರೆ ಆಗಸ್ಟ್ 11ರಂದು ಮುಕ್ತಾಯಗೊಳ್ಳಲಿದೆ. ಅಮರನಾಥ ಯಾತ್ರೆಯಲ್ಲಿ ಇದುವರೆಗೂ ಒಂದು ಲಕ್ಷ ಯಾತ್ರಿಕರು ಭಾಗವಹಿಸಿ ದರ್ಶನ ಪಡೆದಿದ್ದಾರೆ.

Recommended Video

   ಬಿಜೆಪಿ ನಾಯಕನ ಮನೆ ಮುಂದೆ ಇದ್ದ ಚೀಲದಲ್ಲಿ ಇಷ್ಟೊಂದು ದುಡ್ಡು ಎಲ್ಲಿಂದ ಬಂತು? | *Politics | OneIndia Kannada
   English summary
   Amarnath Shrine Board has informed that the Amarnath Yatra, which was partially suspended due to the cloudburst incident, has resumed from the Panchtarni side on Monday morning.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X