ಉತ್ತರಾಖಂಡ್‌ನಲ್ಲಿ ಪರಿಸ್ಥಿತಿ ಗಂಭೀರವಾಗಿದೆ: ರಮೇಶ್ ಪೋಖ್ರಿಯಾಲ್

ಉತ್ತರಾಖಂಡ್,ಫೆಬ್ರವರಿ 08: ಉತ್ತರಾಖಂಡ್‌ನಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ.

ಉತ್ತರಾಖಂಡ್‌ನಲ್ಲಿ ಸಂಭವಿಸಿದ ಹಿಮಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿಬಿಪಿ ಮೊದಲನೆಯ ಸುರಂಗದಲ್ಲಿರುವವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೀಗ ಎರಡನೇ ಸುರಂಗದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದ್ದು, ಈ ಸುರಂಗ 3 ಕಿ.ಮೀ ಉದ್ದವಿದೆ ಎಂದು ಮಾಹಿತಿ ನೀಡಿದ್ದಾರೆ. ಮಧ್ಯಾಹ್ನದಷ್ಟೊತ್ತಿಗೆ ಸುರಂಗದಲ್ಲಿರುವವರನ್ನೆಲ್ಲಾ ರಕ್ಷಿಸುವ ಭರವಸೆಯನ್ನು ನೀಡಿದ್ದಾರೆ.

 Its A Very Difficult Situation In Uttarakhand:Ramesh Pokhriyal

ಜೋಶಿಮಠದ ಧೌಲಿ ಗಂಗಾ ನದಿಯ ನೀರಿನ ಮಟ್ಟ ಅಪಾಯಕಾರಿ ಹಂತವನ್ನು ತಲುಪಿದೆ. ಇಷ್ಟು ವರ್ಷದ ದಾಖಲೆಯನ್ನು ಮುರಿದಿದೆ ಎಂದು ಕೇಂದ್ರ ಜಲ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಹಿಮ ಪ್ರವಾಹದಲ್ಲಿ 100ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿದ್ದಾರೆ. ಅಲ್ಪಾವಧಿಯಲ್ಲಿ ನೀರಿನ ತೀವ್ರತೆ ತಿಳಿದುಬಂದಿತ್ತು.ಇದು 2013ರಲ್ಲಿ ಕೇದಾರನಾಥದಲ್ಲಿ ನಡೆದ ಹಿಮಪಾತವನ್ನು ನೆನಪಿಸುತ್ತದೆ. ಬೆಳಗ್ಗೆ 11ರ ಸುಮಾರಿಗೆ ಜೋಶಿಮಠ ನೀರಿನ ಮಟ್ಟ 1388 ಮೀಟರ್‌ನಷ್ಟಿತ್ತು.

2013ರ ಉತ್ತರಾಖಂಡ್ ಪ್ರವಾಹದ ಸಂದರ್ಭದಲ್ಲಿ ನೀರಿನ ಮಟ್ಟ1385.54 ಮೀಟರ್‌ನಷ್ಟಿತ್ತು. ಹಿಮ ಕುಸಿತ ಹಾಗೂ ಪ್ರವಾಹದಿಂದಾಗಿ ಚಿಮೋಲಿ ಹಳ್ಳಿಯಲ್ಲಿ ಭಾನುವಾರ ಅನೇಕ ಭಾನುಗಳು ನಾಶವಾಗಿದ್ದು, ಶ್ರೀನಗರ, ಹರಿದ್ವಾರ ಮತ್ತು ರಿಷಿಕೇಶಿಯಲ್ಲಿ ನೀರಿನ ಮಟ್ಟದಲ್ಲಿ ಹೆಚ್ಚಾಗುವ ಸಾಧ್ಯತೆಯಿರುವುದಾಗಿ ಉತ್ತರಾಖಂಡ ಪೊಲೀಸರು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+