ಜನ್ ಧನ್ ಖಾತೆಯಲ್ಲಿ ಲಕ್ಷಗಟ್ಟಲೆ ಹಣ, ಆದಾಯ ತೆರಿಗೆ ಚಾಟಿ!

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಡಿಸೆಂಬರ್ 3: ಜನ್ ಧನ್ ಖಾತೆಯಲ್ಲಿ ಆದಾಯ ತೆರಿಗೆ ಇಲಾಖೆಗೆ ಭಾರಿ ಮೊತ್ತವೇ ಕಂಡುಬರುತ್ತಿದೆ. ಲೆಕ್ಕಕ್ಕೆ ನೀಡದ 1.64 ಕೋಟಿ ಪತ್ತೆಯಾಗಿದೆ. ಕೋಲ್ಕತ್ತಾ, ಮಿಡ್ನಾಪುರ್, ಅರಾ (ಬಿಹಾರ), ಕೊಚ್ಚಿ ಹಾಗೂ ವಾರಣಾಸಿಯಲ್ಲಿ ಅಂಥ ಅನುಮಾನಾಸ್ಪದ ವ್ಯವಹಾರಗಳು ಜನ್ ಧನ್ ಖಾತೆಯಲ್ಲಿ ಕಂಡುಬಂದಿವೆ.

ಅಂತಹ ಒಂದು ಖಾತೆಯಲ್ಲಿ ಬಿಹಾರದಲ್ಲಿ 40 ಲಕ್ಷ ರುಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಲೆಕ್ಕ ನೀಡದ ಅಂದಾಜು 1.64 ಕೋಟಿ ರುಪಾಯಿಯನ್ನು ಎಂದಿಗೂ ಆದಾಯ ತೆರಿಗೆಯನ್ನೇ ಪಾವತಿಸದ, ತೆರಿಗೆ ಆದಾಯ ಮಿತಿಗಿಂತ ಕೆಳಗಿರುವವರು ಜಮೆ ಮಾಡಿದ್ದಾರೆ.[6 ಕೋಟಿ ಜನಧನ್ ಖಾತೆ ಮೇಲೆ ಗುಪ್ತಚರ ಇಲಾಖೆ ಹದ್ದಿನಕಣ್ಣು!]

IT department finds Rs 1.64 crore undisclosed amount in Jan Dhan

ಇಂಥ ಖಾತೆಗಳನ್ನು ಕೋಲ್ಕತ್ತಾ, ಮಿಡ್ನಾಪುರ್, ಅರಾ (ಬಿಹಾರ), ಕೊಚ್ಚಿ ವಾರಣಾಸಿಯಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಮೊತ್ತಕ್ಕೆ ನಿಯಮಾನುಸಾರ ತೆರಿಗೆ ಹಾಕಲಾಗುವುದು. ಮತ್ತು ವಿಚಾರಣೆ ನಂತರ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್ 23ರವರೆಗಿನ ಮಾಹಿತಿ ಆಧರಿಸಿ ಹೇಳುವುದಾದರೆ ಜನ್ ಧನ್ ಖಾತೆಯಲ್ಲಿ ಅಪಾರ ಪ್ರಮಾಣದ ಹಣವನ್ನು ಜಮೆ ಮಾಡಲಾಗಿತ್ತು. ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ನೋಟು ರದ್ದು ಘೋಷಣೆ ಮಾಡಿದ ತಕ್ಷಣ 21 ಸಾವಿರ ಕೋಟಿ ರುಪಾಯಿ ಜನ್ ಧನ್ ಖಾತೆಗಳಲ್ಲಿ ಜಮೆಯಾಗಿತ್ತು.[ಜನ್ ಧನ್ ಅಕೌಂಟಿಗೆ ಬಿತ್ತು ಕೋಟಿ ಕೋಟಿ, ರಾಜ್ಯಕ್ಕೆ 2ನೇ ಸ್ಥಾನ!]

ನವೆಂಬರ್ 9ರಿಂದ ಆಚೆಗೆ ಜನ್ ಧನ್ ಖಾತೆಗೆ ಹಾಕಿದ ಮೊತ್ತ 66,636 ಕೋಟಿ. ನವೆಂಬರ್ 9ರ ನಂತರ ದೇಶದಾದ್ಯಂತ ಇರುವ 25.5 ಕೋಟಿ ಜನ್ ಧನ್ ಖಾತೆಗೆ 45,636.61 ಕೋಟಿ ರುಪಾಯಿ ಜಮೆ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The income tax department has detected undisclosed amounts of Rs 1.64 crore in Jan Dhan accounts. During a country wide investigation that was conducted by the IT department suspicious activity in the banks at Kolkata, Midnapore, Ara (Bihar), Kochi and Varanasi were found.
Please Wait while comments are loading...