ಜನವರಿ ಕೊನೆಗೆ ಇಸ್ರೋದಿಂದ ಏಕಕಾಲಕ್ಕೆ 83 ಉಪಗ್ರಹ ಉಡಾವಣೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 28: 2017ರ ಜನವರಿ ಕೊನೆಗೆ ಇಸ್ರೋದಿಂದ ಒಂದೇ ಸಮಯಕ್ಕೆ 83 ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತದೆ. ಈ ಬಗ್ಗೆ ಮಾಹಿತಿ ನೀಡಿರು ಇಸ್ರೋ, ಪಿಎಸ್ ಎಲ್ ವಿ-ಸಿ37 ಉಪಗ್ರಹಗಳನ್ನು ಹೊತ್ತೊಯ್ಯಲಿದೆ. ಜನವರಿ ಉಡಾವಣೆಗೆ ತಯಾರಿ ನಡೆಸಿದ್ದೇವೆ. ಇನ್ನು ದಿನಾಂಕವಷ್ಟೇ ನಿಗದಿಯಾಗಬೇಕು ಎಂದು ಇಸ್ರೋದ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದ್ದಾರೆ.

83 ಉಪಗ್ರಹಗಳ ಪೈಕಿ 80 ಇಸ್ರೇಲ್, ಕಝಕಿಸ್ತಾನ್, ನೆದರ್ ಲ್ಯಾಂಡ್, ಸ್ವಿಟ್ಜರ್ ಲೆಂಡ್ ಮತ್ತು ಅಮೆರಿಕಕ್ಕೆ ಸೇರಿದ್ದು, ಐನೂರಕ್ಕೂ ಹೆಚ್ಚು ಕೆ.ಜಿ. ತೂಕವಿರುತ್ತದೆ. ಇನ್ನು ಮೂರು ಭಾರತೀಯ ಉಪಗ್ರಹಗಳು ಇರುತ್ತವೆ. ಕಾರ್ಟೋಸ್ಯಾಟ್-2, 730 ಕೆ.ಜಿ. ಭಾರವಿರುತ್ತದೆ. ಇನ್ನು ಐಎನ್ ಎಸ್-1, ಐಎನ್ ಎಸ್-1B ಮೂವತ್ತು ಕೆ.ಜಿ. ತೂಕವಿರುತ್ತದೆ.[ರಿಸೋಸ್ಯಾಟ್-2A ಉಡಾವಣೆ, ಕಕ್ಷೆಗೆ ಸೇರಿದ ಉಪಗ್ರಹ]

ISRO to launch record 83 satellites in Jan

ಬಾಹ್ಯಾಕಾಶ ಕಾಯಾಚರಣೆಯಲ್ಲಿ ದಾಖಲೆ ಸೃಷ್ಟಿಸಿರುವ ಇಸ್ರೋ ಕಳೆದ ಜೂನ್ ನಲ್ಲಿ ಇಪ್ಪತ್ತು ಉಪಗ್ರಹಗಳ ಉಡಾವಣೆ ಯಶಸ್ವಿಯಾಗಿ ಮಾಡಿತ್ತು. ಅದರೊಳಗೆ ಕಾರ್ಟೋಸ್ಯಾಟ್-2 ಸಿರೀಸ್ ಸಹ ಸೇರಿತ್ತು. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಪಿಎಸ್ ಎಲ್ ವಿ-ಸಿ34ನಲ್ಲಿ ಏಕಕಾಲಕ್ಕೆ ಎಲ್ಲ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಯಶಸ್ವಿಯಾಗಿತ್ತು.

2008ರಲ್ಲಿ ಇಸ್ರೋದಿಂದ ಏಕಕಾಲಕ್ಕೆ ಹತ್ತು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗಿತ್ತು. ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, 2016 ನಮಗೆ ಉತ್ತಮ ವರ್ಷ. ಮುಂಡಿನ ವರ್ಷ ಕನಿಷ್ಠ ಐದು ಸಂವಹನ ಉಪಗ್ರಹಗಳನ್ನು ಉಡಾವಣೆ ಮಾಡುವ ಗುರಿ ಇಟ್ಟುಕೊಂಡಿದ್ದೇವೆ ಎಂದಿದ್ದಾರೆ.[ಮುಂದಿನ ಮಾರ್ಚ್ ಒಳಗೆ ಸಾರ್ಕ್ ಉಪಗ್ರಹ ಕಕ್ಷೆಗೆ]

ಪ್ರಾಥಮಿಕವಾಗಿ ಜಿಎಸ್ ಎಲ್ ವಿ-II, ಜಿಎಸ್ ಎಲ್ ವಿ-III ಉಡಾವಣೆಗೆ ಪ್ರಯತ್ನಿಸುತ್ತೇವೆ. ವರ್ಷದ ಮೊದಲ ಮೂರು ತಿಂಗಳು ಮೂರು ಉಪಗ್ರಹ ಉಡಾವಣೆಗೆ ಯೋಜನೆ ಮಾಡಿಕೊಂಡಿದ್ದೇವೆ. ಆ ನಂತರ ತಿಂಗಳಿಗೆ ಒಂದರಂತೆ ಉಪಗ್ರಹ ಉಡಾವಣೆ ಮಾಡುವ ಆಲೋಚನೆ ಇದೆ ಎಂದು ಅವರು ಹೇಳಿದ್ದಾರೆ. ಇಸ್ರೋ ತನ್ನ ವಿವಿಧ ಪ್ರಯೋಗಗಳನ್ನು ಚಿತ್ರದುರ್ಗದ ಚಳ್ಳಕೆರೆಯಲ್ಲಿ ನಡೆಸುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Umesh, Bhajarangadala member arrested by Dharmasthala police in an attempt to rape minor girl.
Please Wait while comments are loading...