ಭಾರತ ಭೇಟಿ ವೇಳೆ ಇಸ್ರೇಲ್ ಪ್ರಧಾನಿಯಿಂದ ಮೋದಿಗೆ ವಿಶೇಷ ಉಡುಗೊರೆ

Subscribe to Oneindia Kannada

ನವದೆಹಲಿ, ಜನವರಿ 4: ಜನವರಿ 14ರಿಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು 4 ದಿನಗಳ ಭಾರತ ಪ್ರವಾಸ ನಡೆಸಲಿದ್ದಾರೆ. ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಲಿದ್ದಾರೆ.

"ಗಾಲ್ ಮೊಬೈಲ್ ವಾಟರ್ ಡಿಸಾಲಿನೇಷನ್ ಮತ್ತು ಪ್ಯೂರಿಫಿಕೇಶನ್ ಜೀಪ್'ನ್ನು ಅವರು ಮೋದಿಗೆ ಉಡುಗೊರೆಯಾಗಿ ನೀಡಲಿದ್ದಾರೆ.

ಕಳೆದ ಜುಲೈನಲ್ಲಿ ಇಸ್ರೇಲಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಮೆಡಿಟರೇನಿಯನ್ ಸಮುದ್ರದ ದಂಡೆಯಲ್ಲಿ ಈ ಜೀಪ್ ವೀಕ್ಷಿಸಿದ್ದರು. ಜತೆಗೆ ಈ ಜೀಪ್ ನಲ್ಲಿ ಡ್ರೈವ್ ಹೋಗಿ ಮೆಚ್ಚಿಕೊಂಡಿದ್ದರು.

Israel PM's Special Gift For PM Modi On India Visit

ಇದೀಗ ಅದೇ ಜೀಪನ್ನು ಮೋದಿಯವರಿಗೆ ನೇತನ್ಯಾಹು ಉಡುಗೊರೆ ನೀಡಲಿದ್ದಾರೆ. ಮೂಲಗಳ ಪ್ರಕಾರ ಈಗಾಗಲೇ ಜೀಪನ್ನು ಇಸ್ರೇಲಿನಿಂದ ಕಳುಹಿಸಲಾಗಿದ್ದು ಸರಿಯಾದ ಸಮಯಕ್ಕೆ ಭಾರತ ತಲುಪಲಿದೆ.

1,11,000 ಅಮೆರಿಕನ್ ಡಾಲರ್ ಬೆಲೆಬಾಳುವ ಜೀಪ್ ಇದಾಗಿದೆ. ಈ ಜೀಪ್ ಸಮುದ್ರದ ನೀರನ್ನು ಶುದ್ದೀಕರಿಸುವುದಲ್ಲದೆ, ಇತರ ಕೊಳಚೆ ನೀರನ್ನು ಶುದ್ದೀಕರಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ.

ದಿನಕ್ಕೆ 20,000 ಲೀಟರ್ ಸಮುದ್ರದ ನೀರು ಹಾಗೂ 80,000 ಲೀಟರ್ ಕೊಳಚೆ ನೀರನನ್ನು ಶುದ್ಧೀಕರಿಸುವ ಸಾಮರ್ಥ್ಯ ಈ ಜೀಪಿಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Israeli Prime Minister Benjamin Netanyahu will present a 'Gal-Mobile water desalination and purification jeep' to Narendra Modi during his visit to India starting January 14.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ