18 ವರ್ಷದ ಮಗನ ಹುಡುಕಾಟಕ್ಕೆ ನಿಂತ ಮಹಾತಾಯಿ

Subscribe to Oneindia Kannada

ಬೆಂಗಳೂರು, ಡಿಸೆಂಬರ್,28: ಪೊಲೀಸರು ಕಾರ್ಯಾಚರಣೆ ನಡೆಸಲು ಆರಂಭಿಸಿ 8 ದಿನಗಳು ಉರುಳಿದೆ. ಆದರೆ ನಾಪತ್ತೆಯಾದ ಹುಡುಗನ ಬಗ್ಗೆ ಇಲ್ಲಿಯವರೆಗೆ ಯಾವ ಮಾಹಿತಿ ಸಿಕ್ಕಿಲ್ಲ. ಜಾರ್ಖಂಡ್ ನ ಧನ್ಬಾದ್ ನ ಇನಸ್ಇಟ್ಯೂಟ್ಆಫ್ ಇಂಡಿಯನ್ ಮಿನೆಸ್ ನ 18 ವರ್ಷದ ವಿದ್ಯಾರ್ಥಿ ಅನುರಾಗ್ ಜಗ್ ಪತ್ ಪತ್ತೆ ಮಾತ್ರ ಸಾಧ್ಯವಾಗಿಲ್ಲ.

ಅನುರಾಗ್ ಕಳೆದ ಶುಕ್ರವಾರ ತನ್ನ ಪಾಲಕರೊಂದಿಗೆ ಮಾತನಾಡಿದ್ದ. ಡಿಸೆಂಬರ್ 18 ರಂದು ರಾತ್ರಿ 9.30ರ ವೇಳೆಗೆ ನಾನು ಮನೆಗೆ ಬರುತ್ತಿದ್ದೇನೆ(ಪುಣೆ) ನಾನೀನ ಹೌರಾತ್ ನಲ್ಲಿ ಆಜಾದ್ ಹಿಂದ್ ಎಕ್ಸ್ ಪ್ರೇಸ್ ರೈಲಿನಲ್ಲಿ ಇದ್ದೇನೆ ಎಂದು ಹೇಳಿದ್ದೆ ಕೊನೆ. ನಂತರ ಆತನ ಪತ್ತೆ ಇಲ್ಲವಾಗಿದೆ.[ಭಾರತದಲ್ಲಿ ಬುಲೆಟ್ ಟ್ರೇನ್, ಯಾಕೆ? ಏತಕ್ಕೆ?]

student

ದಿನ ಕಳೆದರೂ ಅನುರಾಗ್ ಮನೆ ತಲುಪದಿದ್ದಾಗ ಆತಂಕಕ್ಕೆ ಒಳಗಾದ ಅನುರಾಗ್ ತಾಯಿ ಪುಣೆ ಪೊಲೀಸರ ಬಳಿ ತೆರಳಿ ದೂರೊಂದನ್ನು ದಾಖಲಿಸಿದ್ದಾರೆ. ಹುಡುಗನ ತಂದೆ ಗಾಂಧಿನಗರದಲ್ಲಿ ಕೆಲಸ ಮಾಡುತ್ತಿರುವ ಕಾರಣ ತಾಯಿಯೇ ಮುಂದಾಗಿ ಮಗನ ಹುಡುಕಾಟ ಆರಂಭಿಸಿದ್ದಾರೆ.

ಪುಣೆ ಪೊಲೀಸರು ನಾಪತ್ತೆಯಾಗಿರುವ ಮಗನನನ್ನು ಹುಡುಕಲು ಪ್ರಮಾಣಿಕ ಯತ್ನ ಮಾಡುತ್ತಿಲ್ಲ. ಇಲ್ಲಿಯವರೆಗೆ ಯಾವುದೇ ಮಾಹಿತಿ ಕಲೆಹಾಕಿಲ್ಲ ಎಂದು ತಾಯಿ ನೊಂದು ನುಡಿಯುತ್ತಾರೆ.[ಈ ಬಲ್ಬ್ ಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳಿ]

ಯಾರೇ ಹುಡುಗನ ಬಗ್ಗೆ ಮಾಹಿತಿ ಸಿಕ್ಕಿದರೆ ನನ್ನ ಮೊಬೈಲ್ ಸಂಖ್ಯೆಗೆ 919405377036 ಕರೆ ಮಾಡಬಹುದು. ನಾವು ಹೌರಾತ್ ನ ರೈಲ್ವೆ ಪೊಲೀಸರಿಗೂ ಮನವಿ ಮಾಡಿಕೊಂಡಿದ್ದೇವೆ ಎಂದು ಮಗನನ್ನು ಕಾಣದೇ ನೋವಿನಲ್ಲಿರುವ ತಾಯಿ ಹೇಳುತ್ತಾರೆ.

ಸದಾ ಚಟುವಟಿಕೆಯಲ್ಲೇ ಇರುತ್ತಿದ್ದ ಅನುರಾಗ್ ಆಟ-ಪಾಠದಲ್ಲಿ ಸದಾ ಮುಂದು. ಕ್ರೀಡೆಗಳಲ್ಲೂ ಭಾಗವಹಿಸುತ್ತಿದ್ದ 18 ವರ್ಷದ ಮಗನನ್ನು ಹುಡುಕಿಕೊಡಿ ಎಂದು ತಾಯಿ ರೈಲ್ವೆ ಪೊಲೀಸರ ಬಳಿ ಅಳಲು ತೋಡಿಕೊಳ್ಳುತ್ತಿರುವುದು ನಿತ್ಯದ ದೃಶ್ಯವಾಗಿದೆ. ನೀವು ಸಹ ಹುಡುಗನನ್ನು ಕಂಡರೆ ಮಾಹಿತಿ ನೀಡಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After 8 days of investigation by the police department there is still no whereabouts of 18-year-old Anurag Jagtap who was a student of Indian Institute of Mines (ISM), Dhanbad. Anurag last spoke to his parents on Friday, Dec 18 at around 9:30 pm, and informed that he would be boarding Azad Hind Express from Howrah Railway Station to for his home town Pune.
Please Wait while comments are loading...