ಸಿರಾಜುದ್ದೀನ್ ಬಳಿ ಇತ್ತು 12 ಸಾವಿರ ಪುಟದ ದಾಖಲೆ!

By: ವಿಕಾಸ್ ನಂಜಪ್ಪ
Subscribe to Oneindia Kannada

ಜೈಪುರ, ಡಿಸೆಂಬರ್ 12 : ಐಎಸ್ಐಎಸ್ ಪರವಾಗಿ ಪ್ರಚಾರ ಮಾಡುತ್ತಿದ್ದ ಆರೋಪದ ಮೇಲೆ ಜೈಪುರದಲ್ಲಿ ಬಂಧಿತನಾಗಿರುವ ಮೊಹಮದ್ ಸಿರಾಜುದ್ದೀನ್ ವಿಚಾರಣೆ ಮಹಾರಾಷ್ಟ್ರ, ತೆಲಂಗಾಣದತ್ತ ಮುಖ ಮಾಡುವಂತೆ ಮಾಡಿದೆ. 5 ತಿಂಗಳಿನಿಂದ ಸಿರಾಜುದ್ದೀನ್ ಉಗ್ರ ಸಂಘಟನೆ ಪರವಾಗಿ ಪ್ರಚಾರ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಕರ್ನಾಟಕದ ಕಲಬುರಗಿ ಮೂಲದ ಮೊಹಮದ್ ಸಿರಾಜುದ್ದೀನ್‌ ಅನ್ನು ಗುರುವಾರ ರಾತ್ರಿ ವಿಶೇಷ ಕಾರ್ಯಪಡೆ (ಎಸ್‌ಒಜಿ) ಮತ್ತು ರಾಜಸ್ಥಾನ ಭಯೋತ್ಪಾದಕ ನಿಗ್ರಹ ಪಡೆ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಜೈಪುರದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. [ಐಒಸಿ ಮ್ಯಾನೇಜರ್ ನಿಂದ ಯಾವ ಸುಳಿವು ಸಿಗಲಿದೆ?]

isis

ಭಾರತೀಯ ತೈಲ ನಿಗಮದ (ಐಒಸಿ)ಯಲ್ಲಿ ಮಾರ್ಕೆಟಿಂಗ್ ವಿಭಾಗದ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ಸಿರಾಜುದ್ದೀನ್, ತೆಲಂಗಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಯುವಕರನ್ನು ಸಂಪರ್ಕಿಸಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. []

12 ಸಾವಿರ ಪುಟಗಳ ದಾಖಲೆ : ಮೊಹಮದ್ ಸಿರಾಜುದ್ದೀನ್‌ ಬಂಧಿಸುವಾಗ ಎಟಿಎಸ್ ಅಧಿಕಾರಿಗಳು ಆತನ ಬಳಿ ಇದ್ದ ಸುಮಾರು 12 ಸಾವಿರ ಪುಟಗಳ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಅವುಗಳನ್ನು ಪರಿಶೀಲನೆ ನಡೆಸುತ್ತಿದ್ದು, ನಂತರ ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.

5 ತಿಂಗಳಿನಿಂದ ಪ್ರಚಾರ : ಸಿರಾಜುದ್ದೀನ್ ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು ಒನ್ ಇಂಡಿಯಾ ಜೊತೆ ಮಾತನಾಡಿದ್ದು, ಐಒಸಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಕಳೆದ ಐದು ತಿಂಗಳಿನಿಂದ ಐಎಸ್‌ಐಎಸ್ ಪರವಾಗಿ ಪ್ರಚಾರ ಮಾಡಲು ಆರಂಭಿಸಿದ್ದ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ, ತೆಲಂಗಾಣದ ಸಂಪರ್ಕ : ವಿಚಾರಣೆ ವೇಳೆ ಸಿರಾಜುದ್ದೀನ್ ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿನ ಕೆಲವು ವ್ಯಕ್ತಿಗಳನ್ನು ಸಂಪರ್ಕಿಸಿರುವುದು ಬೆಳಕಿಗೆ ಬಂದಿದೆ. ಉಭಯ ರಾಜ್ಯಗಳಲ್ಲಿ ಕೆಲವು ಯುವಕರನ್ನು ಭೇಟಿ ಮಾಡಿ ಸಂಘಟನೆ ಸೇರುವಂತೆ ಆತ ಪ್ರೇರೆಪಿಸಿದ್ದ.

ಕುಟುಂಬದವರು ಜೈಪುರಕ್ಕೆ : ಸಿರಾಜುದ್ದೀನ್ ಬಂಧನದ ಬಗ್ಗೆ ಮಾಧ್ಯಮಗಳ ಮೂಲಕ ಮಾಹಿತಿ ಪಡೆದ ಆತನ ಕುಟುಂಬದವರಯ ಜೈಪುರಕ್ಕೆ ಬಂದಿದ್ದಾರೆ. ಕಲಬುರಗಿಯಿಂದ ಸಿರಾಜುದ್ದೀನ್ ತಂದೆ ಮತ್ತು ಕೆಲವು ಸಂಬಂಧಿಕರು ಜೈಪುರಕ್ಕೆ ಆಗಮಿಸಿದ್ದಾರೆ. ತಾಯಿ ಮತ್ತು ಸಹೋದರಿ ಕಲಬುರಗಿಯಲ್ಲಿಯೇ ಇದ್ದಾರೆ.

ಸಿರಾಜುದ್ದೀನ್ ಕಲಬುರಗಿ ಮೂಲದವನಾದ ಕಾರಣ ಕರ್ನಾಟಕದ ಪೊಲೀಸರು ಅವರ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಮಹಾರಾಷ್ಟ್ರ ಮತ್ತು ತೆಲಂಗಾಣ ಪೊಲೀಸರಿಗೂ ರಾಜಸ್ಥಾನದ ಎಟಿಎಸ್ ವಿಚಾರಣೆಗೆ ಆಗಮಿಸುವಂತೆ ಕರೆ ನೀಡುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The probe being conducted into the alleged activities of an ISIS sympathiser from Karnataka Sirajuddin has led investigators to Maharashtra and Telangana. There are 12,000 pages of transcripts that the investigators are studying.
Please Wait while comments are loading...