ಒಡಿಶಾದಲ್ಲಿ ಶಂಕಿತ ಐಎಸ್ಐ ಏಜೆಂಟ್ ಬಂಧನ
ನವದೆಹಲಿ, ಜ. 24: ಸಂಶಯಾಸ್ಪದ ವರ್ತನೆ ತೋರಿದ ಓರ್ವ ಛಾಯಾಗ್ರಾಹಕನನ್ನು ಒಡಿಶಾದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತ ಐಎಸ್ಐ ಪರವಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಸಂದೇಹಿಸಿದ್ದಾರೆ.
ಈಶ್ವರ ಚಂದ್ರ ಬೆಹೆರಾ (35) ಬಂಧಿತ ಆರೋಪಿ. ಈತ ಹಲವು ಪ್ರಮುಖ ವಿಷಯಗಳನ್ನು ಸಂಗ್ರಹಿಸುತ್ತಿದ್ದ ಎಂದು ಸಂದೇಹಿಸಿರುವ ಪೊಲೀಸರು 8 ತಿಂಗಳಿಂದ ಈತನನ್ನು ಗಮನಿಸುತ್ತಿದ್ದರು. [ಉಗ್ರರಿಗೆ ಪಾಕ್ ಸ್ವರ್ಗ]

ಬಂಧಿತ ಬೆಹೆರಾ ಐಟಿಆರ್‌ನಲ್ಲಿ ತಾತ್ಕಾಲಿಕ ಒಪ್ಪಂದದ ಮೇಲೆ ಫೋಟೊಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ. ಆತ ಕೋಲ್ಕೊತಾದಲ್ಲಿರುವ ಐಎಸ್ಐ ಏಜೆಂಟ್ ಓರ್ವನ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ. [ಉಗ್ರರು ಎನ್ ಕೌಂಟರ್ ಗೆ ಬಲಿ]
ಈತ ಐಟಿಆರ್ ಕುರಿತ ಚಿತ್ರಗಳು ಹಾಗೂ ಮಾಹಿತಿಗಳನ್ನು ಕೋಲ್ಕೊತಾದಲ್ಲಿರುವ ಐಎಸ್ಐ ಏಜೆಂಟನಿಗೆ 50,000 ರು.ಗಳಿಗೆ ನಿರಂತರವಾಗಿ ಮಾರುತ್ತಿದ್ದ. ಅಲ್ಲದೆ, ತನ್ನ ಕ್ಯಾಮರಾ ದುರಸ್ತಿಗೆಂದು ಹಲವು ಬಾರಿ ಕೋಲ್ಕೊತ್ತಾಗೆ ಭೇಟಿ ನೀಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆತನಿಂದ ಪೊಲೀಸರು ಒಂದು ಲ್ಯಾಪ್‌ಟಾಪ್, ಕ್ಯಾಮರಾ, ಹಾರ್ಡ್ ಡಿಸ್ಕ್ ಮತ್ತು ಎರಡು ಸೆಲ್ ಫೋನ್ ವಶಪಡಿಸಿಕೊಂಡಿದ್ದಾರೆ. [ಭಟ್ಕಳದಲ್ಲಿ ಉಗ್ರರು ಹುಟ್ಟಿದ್ದು ಹೇಗೆ?]
ಬಂಧಿತ ಈಶ್ವರ ಬೆಹೆರಾನನ್ನು ಶೀಘ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಿ ತನಿಖೆಗಾಗಿ ವಶಕ್ಕೆ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ. [ದಾವೂದ್ ಇಬ್ರಾಹಿಂ ಪಲಾಯನ]












Click it and Unblock the Notifications