ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಯಲ್ಲಿ ಕುಳಿತು ಅಶ್ಲೀಲ ಚಿತ್ರ ನೋಡೋದು ಅಪರಾಧವೆ?

|
Google Oneindia Kannada News

ನವದೆಹಲಿ, ಜು. 10: ಮನೆಯಲ್ಲಿ ಕುಳಿತು ನಾಲ್ಕು ಗೋಡೆಗಳ ಮಧ್ಯೆ ವಯಸ್ಕ ವ್ಯಕ್ತಿ ಲೈಂಗಿಕ ಚಿತ್ರ ವೀಕ್ಷಿಣೆ ಮಾಡುವುದು ಅಪರಾಧವಾಗುತ್ತದೆಯೇ? ಎಂದು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ.

ವಯಸ್ಕ ವ್ಯಕ್ತಿಯ ಲೈಂಗಿಕ ಚಿತ್ರವನ್ನು ವೀಕ್ಷಿಸಿದರೆ ಅದು ಆತನ ಮೂಲಭೂತ ಹಕ್ಕು. ಸಂಪೂರ್ಣಖಾಸಗಿತನದಲ್ಲಿ ಅಶ್ಲೀಲ ಲೈಂಗಿಕ ಚಿತ್ರ ನೋಡುವುದನ್ನು ತಾನು ತಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.[ಅವಿವಾಹಿತ ತಾಯಿ ತಂದೆಯ ಹೆಸರು ಬಹಿರಂಗಪಡಿಸಬೇಕಿಲ್ಲ]

website

ವಕೀಲ ಕಮಲೇಶ್‌ ವಾಶ್ವಾನಿ ಅವರು ಲೈಂಗಿಕ ವೆಬ್‌ಸೈಟ್‌ಗಳನ್ನು ನಿಷೇಧ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ವೇಳೆ ನ್ಯಾಯಮೂರ್ತಿ ಎಚ್ ಎಲ್ ದತ್ತು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಭಾರತದಲ್ಲಿನ ಅಶ್ಲೀಲ ಲೈಂಗಿಕ ವೆಬ್‌ಸೈಟ್‌ಗಳನ್ನು ತಡೆಯುವುದಕ್ಕೆ ಮಧ್ಯಾವಧಿ ಆದೇಶ ನೀಡುವುದಕ್ಕೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.[ಅಮ್ಮಂದಿರ ಪ್ರಪಂಚ ಚಿಕ್ಕದು, ಪ್ರೀತಿ ಅಳತೆಗೆ ಸಿಗದು]

ಖಾಸಗಿತನದ ಸ್ವಾತಂತ್ರ್ಯವನ್ನು ತಡೆಯುವ ಆದೇಶ ನೀಡಲು ಸಂವಿಧಾನದ ಅನ್ವಯ ಸಾಧ್ಯವಿಲ್ಲ. ಅಲ್ಲದೇ ಖಾಸಗಿತನದ ವೆಬ್ ತಾಣಗಳ ಪಟ್ಟಿಯನ್ನು ಹೇಗೆ ಸಿದ್ಧ ಮಾಡುತ್ತೀರಿ ಎಂದು ಪ್ರಶ್ನಿಸಿದೆ. ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಸಿಕೊಳ್ಳುವ ಕ್ರಮದ ತಡೆ ಕುರಿತಂತೆ ಇತ್ತೀಚೆಗೆ ನ್ಯಾಯಾಲಯ ಸ್ಪಷ್ಟ ಆದೇಶ ಹೊರಡಿಸಿತ್ತು. ಇದನ್ನು ಅಪರಾಧ ಎಂದು ಹೇಳಿತ್ತು.

English summary
The Supreme Court has taken a dim view of the home ministry's lethargy in blocking websites circulating child pornography but raised an important question whether a person committed an offence by browsing adult websites in private within the four walls of his home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X