• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವಳಿಲ್ಲದ ಜಗತ್ತು ಅನೂಹ್ಯ..! ಮಹಿಳಾ ದಿನದ ಶುಭಾಶಯಗಳು

|

ಅವಳನ್ನು ಅದೆಷ್ಟು ಗೋಳು ಹಾಕಿಕೊಂಡರೂ ಸರಿಯೇ, ಮನೆಯಲ್ಲಿ ಅವಳಿರಬೇಕು. ವಟ ವಟ ಅಂತ ಅವಳು ಪೂರ್ಣವಿರಾಮವಿಲ್ಲದೆ ಹಲುಬುತ್ತಲೇ ಇರಬೇಕು, ಗೆಜ್ಜೆಯನ್ನು ಝಲ್ ಎನ್ನಿಸುತ್ತ ಇಡೀ ಮನೆತುಂಬ ಪಾದರಸದಂತೆ ಓಡಾಡಬೇಕು... ಮನೆ ತುಂಬ ಜೀವನೋಲ್ಲಾಸವೆಂಬ ಹೂವಿನ ಪರಿಮಳವನ್ನೆಲ್ಲ ಪಸರಿಸಬೇಕು...!

ಅವಳಿಲ್ಲದ ಮನೆ, ಮನ ಎರಡೂ ಭಣ ಭಣ. ಹೌದು, ಪ್ರತಿಯೊಬ್ಬ ವ್ಯಕ್ತಿಯ ಬದುಕೂ ಪರಿಪೂರ್ಣವಾಗುವುದು ಆಕೆ ಬಲಗಾಲಿಟ್ಟು ಮನೆಯೊಳಗೆ ಬಂದಾಗಲೇ. ಅಂಥ 'ಅವಳ' ದಿನ ಇಂದು. ಅಂತಾರಾಷ್ಟ್ರೀಯ ಮಹಿಳಾ ದಿನದಂದು ಪ್ರತಿ ಮಹಿಳೆಯೂ ತನ್ನ ಬದುಕಿನಲ್ಲಿ ವಹಿಸಿದ ಅನರ್ಘ್ಯ ಪಾತ್ರವನ್ನು ಟ್ವಿಟ್ಟಿಗರು ನೆನಪಿಸಿಕೊಂಡಿದ್ದಾರೆ.

ಕ್ಯಾನ್ಸರ್ ಎಂಬ ಯಮನಿಗೆ ಸೆಡ್ಡು ಹೊಡೆದ ಗಟ್ಟಿಗಿತ್ತಿ ಶಿವಮೊಗ್ಗದ ಶ್ರುತಿ

ಆ ಕಾರಣಕ್ಕಾಗಿಯೇ #HappyWomensDay2020 #InternationalWomensDay ಈ ಎರಡೂ ಹ್ಯಾಶ್ ಟ್ಯಾಗ್ ಗಳೂ ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್ ಆಗಿವೆ.

ಮಗಳಾಗಿ, ತಂಗಿಯಾಗಿ, ಅಕ್ಕನಾಗಿ, ಸ್ನೇಹಿತೆಯಾಗಿ, ಅಮ್ಮನಾಗಿ, ಸೊಸೆಯಾಗಿ, ಅತ್ತೆಯಾಗಿ, ಅಜ್ಜಿಯಾಗಿ... ತನ್ನ ಬದುಕನ್ನೆಲ್ಲ ಕುಟುಂಬದ ನೆಮ್ಮದಿಗಾಗಿಯೇ ಸವೆಸಿಬಿಡುವ ಆಕೆಗೆ ಎಷ್ಟು ಋಣಿಯಾದರೂ ಕಡಿಮೆಯೇ. ಆ ಎಲ್ಲ ಮಹಿಳೆಯರಿಗೂ ಮಹಿಳಾ ದಿನದ ಹಾರ್ದಿಕ ಶುಭಾಶಯಗಳು.

ನರೇಂದ್ರ ಮೋದಿ

"ಅಂತಾರಾಷ್ಟ್ರೀಯ ಮಹಿಳಾದಿನದಂದು, ನಮ್ಮ ಅದಮ್ಯ ಉತ್ಸಾಹದ ನಾರೀ ಶಕ್ತಿಗೆ ನಮ್ಮ ಸೆಲ್ಯೂಟ್. ಮಹಿಳಾ ಸಬಲೀಕರಣಕ್ಕಾಗಿ ನಾವು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎನ್ನಲು ಹೆಮ್ಮೆಯಾಗುತ್ತದೆ. ಎಲ್ಲಕ್ಷೇತ್ರಗಳಲ್ಲೂ ಮಹಿಳೆಯರು ಮಾಡಿರುವ ಸಾಧನೆಗೆ ಭಾರತ ಹೆಮ್ಮೆ ಪಡುತ್ತದೆ"- ನರೇಂದ್ರ ಮೋದಿ, ಪ್ರಧಾನಿ

ಅವರನ್ನು ಗೌರವಿಸೋಣ

"ಮಹಿಳೆಯರು ಈ ಸಮಾಜದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಅವರು ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸಮನಾಗಿ ನಿಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ನಾವು ಒಪ್ಪಿಕೊಳ್ಳದಿದ್ದರೆ, ಅಥವಾ ಒಪ್ಪಿಕೊಂಡು ಅವರಿಗೆ ಗೌರವಿಸದಿದ್ದರೆ ಅದು ನಮ್ಮ ಸಣ್ಣತನವಾಗುತ್ತದೆ" ಎಂದು ವಿಕ್ರಮ್ ರೆಡ್ಡಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಅವಳೆಂದರೆ ಎಲ್ಲವೂ... ಅವಳಿಲ್ಲದ ಬದುಕು ಅನೂಹ್ಯ!

ಎಲ್ಲಾ ಪಾತ್ರವನ್ನೂ ನಿರ್ವಹಿಸೋದು ಸುಲಭವಲ್ಲ!

ಅಮ್ಮ, ತಂಗಿ, ಪತ್ನಿ, ಗೆಳತಿ ಎಲ್ಲಾ ಪತ್ರವನ್ನೂ ಏಕಕಾಲಕ್ಕೇ ವಹಿಸುವುದು ಸುಲಭವಲ್ಲ. ಅದು ಮಹಿಳೆಗೆ ಮಾತ್ರ ಸಾಧ್ಯ. ಮಹಿಳಾ ದಿನದ ಶುಭಾಶಯಗಳು ಎಂದಿದ್ದಾರೆ ವಾರಿಸೈ ಮೊಹಮ್ಮದ್.

ನೀವು ಶಕ್ತಿಯ ಮೂಲ!

ಮಹಿಳೆ...

ನೀನು ಮುದ್ದಿನ ಮಗಳು, ಒಳ್ಳೆಯ ತಂಗಿ, ಪ್ರೀತಿಯ ಪತ್ನಿ, ನೀನು ಅಕ್ಕರೆಯ ಅಮ್ಮ, ನೀವು ಶಕ್ತಿಯ ಮೂಲ ಎಂದಿದ್ದಾರೆ ವಂದನಾ ರಾಥೋರ್.

ಮಹಿಳಾ ದಿನಾಚರಣೆ ವಿಶೇಷ ಲೇಖನ: ವರ್ಷಕ್ಕೊಮ್ಮೆ ಅವಳ ದಿವಸ!

ನೀವು ಪುರುಷರಿಗಿಂತ ಮೇಲಿದ್ದೀರಿ!

"ಪ್ರೀತಿಯ ಮಹಿಳೆಯರೇ, ಸಮಾನತೆಗಾಗಿ ಪುರುಷರೊಂದಿಗೆ ಹೋರಾಡಬೇಡಿ. ಏಕೆಂದರೆ ನೀವು ಅವರಿಗಿಂತ ಮೇಲಿದ್ದೀರಿ!" ಎಂದಿದ್ದಾರೆ ವಿಪಿನ್ ವರ್ಮಾ.

ಅವರಿಲ್ಲದೆ ಬದುಕು ಅಸಾಧ್ಯ!

ಈ ಜಗತ್ತನ್ನು ಮುನ್ನಡೆಸುತ್ತಿರುವ ಶಕ್ತಿಯನ್ನು ಕೊಂಡಾಡುವುದಕ್ಕೆ ಇದು ಸಮಯ. ಅವರಿಲ್ಲದೆ ನಮ್ಮ ಅಸ್ತಿತ್ವ ಅಸಾಧ್ಯ ಎಂದಿದ್ದಾರೆ ರೋಹಿತ್ ರವೀಂದ್ರ ಸಖಾರ್ಪೇಕರ್.

English summary
World is celebrating international women's day today. Many are dedicating this day to the woman who has an incredible role in their life. Here are twitter reactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X