ಜುಲೈ 15ರ ತನಕ ಅಂತರಾಷ್ಟ್ರೀಯ ವಿಮಾನ ಸಂಚಾರ ರದ್ದು
ನವದೆಹಲಿ, ಜೂನ್ 26 : ಅಂತರಾಷ್ಟ್ರೀಯ ವಿಮಾನಗಳ ಸಂಚಾರವನ್ನು ಜುಲೈ 15ರ ತನಕ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಣೆಯಾದ ಬಳಿಕ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
Recommended Video
ಕೇಂದ್ರ ವಿಮಾನಯಾನ ಸಚಿವಾಲಯ ಶುಕ್ರವಾರ ಈ ಕುರಿತು ಆದೇಶ ಹೊರಡಿಸಿದೆ. 30/5/2020ರಂದು ಹೊರಡಿಸಿದ್ದ ಆದೇಶವನ್ನು ಜುಲೈ 15ರ ತನಕ ವಿಸ್ತರಣೆ ಮಾಡಲಾಗಿದೆ ಎಂದು ಹೇಳಿದೆ. ದೇಶಿಯ ವಿಮಾನಗಳ ಸಂಚಾರ ಪ್ರಸ್ತುತ ಸ್ಥಿತಿಯಂತೆ ಇರಲಿದೆ.

ಜುಲೈ 15ರ ತನಕ ಭಾರತದಿಂದ ಬೇರೆ ದೇಶಕ್ಕೆ, ಬೇರೆ ದೇಶದಿಂದ ಭಾರತಕ್ಕೆ ಯಾವುದೇ ಅಂತರಾಷ್ಟ್ರೀಯ ವಾಣಿಜ್ಯ ವಿಮಾನಗಳು ಸಂಚಾರ ನಡೆಸುವುದಿಲ್ಲ. ಸರಕು ಸಾಗಣೆ ವಿಮಾನ, ವಿಶೇಷ ಅನುಮತಿ ಮೇಲೆ ಸಂಚಾರ ನಡೆಸುತ್ತಿರುವ ವಿಮಾನಗಳಿಗೆ ಇದು ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಕೇಂದ್ರ ಸರ್ಕಾರ ಮಾರ್ಚ್‌ನಲ್ಲಿ ಕೊರೊನಾ ವೈರಸ್ ಹರಡದಂತೆ ಲಾಕ್ ಡೌನ್ ಘೋಷಣೆ ಮಾಡಿದಾಗ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಸಂಚಾರ ರದ್ದುಗೊಂಡಿತು. ಈಗ ದೇಶಿಯವ ವಿಮಾನಗಳು ಸಂಚಾರವನ್ನು ನಡೆಸುತ್ತಿವೆ.
ಭಾರತಕ್ಕೆ ಬರುವ ಮತ್ತು ಹೋಗುವ ಅಂತರಾಷ್ಟ್ರೀಯ ವಿಮಾನಗಳನ್ನು ಜುಲೈ ರ ತನಕ ನಿಷೇಧಿಸಲಾಗಿದೆ. ಆದರೆ ವಂದೇ ಭಾರತ್ ಮಿಷನ್ ಅಡಿ ಸಂಚಾರ ನಡೆಸುವ ವಿಮಾನಗಳ ಹಾರಾಟಕ್ಕೆ ಯಾವುದೇ ತೊಂದರೆ ಇರುವುದಿಲ್ಲ ಎಂದು ತಿಳಿಸಲಾಗಿದೆ.












Click it and Unblock the Notifications