2 ವರ್ಷಗಳ ಬಳಿಕ ಅಂತರರಾಷ್ಟ್ರೀಯ ವಿಮಾನಗಳು ಆರಂಭ
ನವದೆಹಲಿ, ಮಾರ್ಚ್ 27; ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸಿದೆ. ದೇಶದಲ್ಲಿನ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಎರಡು ವರ್ಷಗಳ ಬಳಿಕ ಅಂತರರಾಷ್ಟ್ರೀಯ ವಿಮಾನ ಸೇವೆಗಳನ್ನು ಭಾರತ ಭಾನುವಾರ ಆರಂಭಿಸಿದೆ. 2020ರ ಮಾರ್ಚ್‌ನಲ್ಲಿ ಕೋವಿಡ್ ಪರಿಸ್ಥಿತಿ ಕಾರಣ ಅಂತರರಾಷ್ಟ್ರೀಯ ವಿಮಾನ ಸಂಚಾರವನ್ನು ನಿರ್ಬಂಧಿಸಲಾಗಿತ್ತು.
ದೇಶದಲ್ಲಿ ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಎರಡು ವರ್ಷಗಳಿಂದ ರಾಜತಾಂತ್ರಿಕ, ಅಧಿಕೃತ, ವಿಶ್ವಸಂಸ್ಥೆ/ ಅಂತರರಾಷ್ಟ್ರೀಯ ಸಂಸ್ಥೆಗಳು, ಉದ್ಯೋಗ ಮತ್ತು ಯೋಜನೆ ವಿಭಾಗಗಳಿಗೆ ಹೊರತುಪಡಿಸಿ ಉಳಿದ ಎಲ್ಲಾ ವಿದೇಶಿಯರಿಗೆ ನೀಡಲಾಗಿರುವ ಎಲ್ಲಾ ವೀಸಾಗಳನ್ನು ನಿರ್ಬಂಧಿಸಿತ್ತು. ಭಾರತದಿಂದ ವಿದೇಶಕ್ಕೆ ವಿಮಾನಗಳ ಹಾರಾಟ, ವಿದೇಶದಿಂದ ಬರುವ ವಿಮಾನಗಳ ಲ್ಯಾಂಡಿಂಗ್ ಸಹ ನಿರ್ಬಂಧಿಸಲಾಗಿತ್ತು.
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಭಾರತದಿಂದ/ ಭಾರತಕ್ಕೆ ಪ್ರಯಾಣಿಕರ ಅಂತರರಾಷ್ಟ್ರೀಯ ವಿಮಾನ ಪ್ರಯಾಣದ ನಿಷೇಧವನ್ನು ಮುಂದುವರೆಸಲಾಗಿತ್ತು. ಕೋವಿಡ್ 2ನೇ ಅಲೆ ಪೂರ್ಣಗೊಂಡಾಗ ವಿಮಾನ ಸಂಚಾರ ಆರಂಭದ ನಿರೀಕ್ಷೆ ಇತ್ತು. ಆದರೆ ಓಮಿಕ್ರಾನ್ ಭೀತಿ ಕಾರಣ ವಿಮಾನ ಹಾರಾಟ ನಿಷೇಧ ಮುಂದುವರೆದಿತ್ತು. ಈಗ ಅಂತರರಾಷ್ಟ್ರೀಯ ವಿಮಾನ ಸೇವೆಗಳನ್ನು ಆರಂಭಿಸಲಾಗಿದೆ.
Scheduled international flight services have resumed today.This will help India connect to the world. 135 new flights have been inaugurated under Summer Schedule 2022. A flight b/w Gorakhpur-Varanasi has also been inaugurated today:Union Civil Aviation Min Jyotiraditya M. Scindia pic.twitter.com/2r7vgtnpIE
— ANI (@ANI) March 27, 2022
ಭಾರತದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಭಾರೀ ಇಳಿಕೆಯಾಗಿದೆ. ಭಾನುವಾರದ ಹೆಲ್ತ್ ಬುಲೆಟಿನ್ ಪ್ರಕಾರ ದೇಶದಲ್ಲಿ 1,421 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದ ಸಕ್ರಿಯ ಪ್ರಕರಣಗಳು 20,000. ಈಗ ವಿಮಾನ ಸೇವೆ ಮತ್ತೆ ಆರಂಭವಾಗಿರುವ ಕಾರಣ ಜನರಿಗೆ ಅನುಕೂಲವಾಗಲಿದೆ.
ಭಾರತದಲ್ಲಿ ಅಂತರಾಷ್ಟ್ರೀಯ ವಿಮಾನ ಸೇವೆಗೆ ನಿರ್ಬಂಧವಿದ್ದರೂ ಭಾರತ ಸರ್ಕಾರ ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಭಾರತೀಯರನ್ನು ಆಪರೇಷನ್ ದೇವಿ ಶಕ್ತಿ ಮತ್ತು ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಅಪರೇಷನ್ ಗಂಗಾ ಕಾರ್ಯಾಚರಣೆ ಮೂಲಕ ಸ್ವದೇಶಕ್ಕೆ ಯಶಸ್ವಿಯಾಗಿ ಕರೆದುಕೊಂಡು ಬಂದಿದೆ.

ಶೇ 100ರಷ್ಟು ಪ್ರಯಾಣಿಕರು
2020ರ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರ ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ಸೇವೆ ನಿರ್ಬಂಧಿಸಿತ್ತು. ಭಾನುವಾರದಿಂದ ಶೇ 100ರಷ್ಟು ಪ್ರಯಾಣಿಕರು ಅಂತರರಾಷ್ಟ್ರೀಯ ವಿಮಾನಗಳಲ್ಲಿ ಹಾರಾಟ ನಡೆಸಲು ಒಪ್ಪಿಗೆ ನೀಡಲಾಗಿದೆ. ಕೇಂದ್ರ ವಿಮಾನಯಾನ ಖಾತೆ ಸಚಿವಾಲಯದ ಮಾಹಿತಿಯಂತೆ ವಿಮಾನದ ಸಿಬ್ಬಂದಿಗಳು ಪಿಪಿಐ ಕಿಟ್ ಧರಿಸುವುದಿಲ್ಲ.

ಸೀಟು ಖಾಲಿ ಬಿಡುವುದು ಬೇಡ
ವಿಮಾನಯಾನ ಸಂಸ್ಥೆಗಳು ವೈದ್ಯಕೀಯ ತುರ್ತು ಪರಿಸ್ಥಿತಿಗಾಗಿ ಮೂರು ಸೀಟುಗಳನ್ನು ಖಾಲಿ ಬಿಡುವುದು ಬೇಡ ಎಂದು ವಿಮಾನಯಾನ ಸಂಸ್ಥೆಗಳು ಹೇಳಿವೆ. ವಿಮಾನಯಾನ ಸಂಸ್ಥೆಗಳು ಕೆಲವು ಪಿಪಿಇ ಕಿಟ್‌ಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ. ಸೋಂಕಿತರು ಪತ್ತೆಯಾದರೆ ಸಹಾಯಕವಾಗಲಿ ಎಂದು ಸ್ಯಾನಿಟೈಸರ್, ಎನ್-95 ಮಾಸ್ಕ್ ಸೇರಿದಂತೆ ಸುರಕ್ಷತಾ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು. ಮಾಸ್ಕ್ ಧರಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ.

ಎಲ್ಲಾ ವೀಸಾಗಳನ್ನು ನೀಡಲಾಗುತ್ತದೆ
ಸರ್ಕಾರ ಭಾನುವಾರದಿಂದ ಇಂದಿನಿಂದ ಎಲ್ಲಾ ಮಾದರಿಯ ಪ್ರವಾಸಿ ವೀಸಾಗಳನ್ನು ನೀಡಲಾಗುತ್ತದೆ. 5 ವರ್ಷಗಳಿಗೆ ನೀಡಲಾಗಿರುವ ಪ್ರವಾಸಿ ವೀಸಾ ಇಂದಿನಿಂದಲೇ ಜಾರಿಗೆ ಬರಲಿದೆ. 2020ರ ಜುಲೈನಲ್ಲಿ ಸರ್ಕಾರ ಬಯೋ ಬಬಲ್ ಒಪ್ಪಂದದಂತೆ ವಿಮಾನ ಸೇವೆಗಳನ್ನು ನೀಡುತ್ತಿತ್ತು. ಅಂತರಾಷ್ಟ್ರೀಯ ವಿಮಾನ ಸೇವೆ ಆರಂಭದಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಹಕಾರಿಯಾಗಲಿದೆ. ಅಂತರಾಷ್ಟ್ರೀಯ ವಿಮಾನ ಸೇವೆ ಕಳೆದ ತಿಂಗಳೇ ಆರಂಭವಾಗಬೇಕಿತ್ತು. ಆದರೆ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ತಡವಾಗಿದೆ.

ವಿಮಾನ ಪ್ರಯಾಣಿಕರು ಹೆಚ್ಚಳ
ಕೋವಿಡ್ ಪರಿಸ್ಥಿತಿ ಬಳಿಕ ದೇಶಿಯ ವಿಮಾನಗಳ ಬಳಕೆ ಹೆಚ್ಚಾಗುತ್ತಿದೆ. ಕೇಂದ್ರ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಲೋಕಸಭೆಗೆ ನೀಡಿದ ಮಾಹಿತಿಯಂತೆ ದಿನವೊಂದಕ್ಕೆ 3 ಲಕ್ಷದ 83 ಸಾವಿರ ಜನರು ದಿನ ವಿಮಾನ ಬಳಕೆ ಮಾಡುತ್ತಿದ್ದಾರೆ.
ಅಂತರಾಷ್ಟ್ರೀಯ ವಿಮಾನ ಸೇವೆ ಆರಂಭವಾದರೂ ದುಬಾರಿ ಇಂಧನ ದರಗಳು ವಿಮಾನಯಾನ ಸಂಸ್ಥೆಗಳ ಚಿಂತೆಗೆ ಕಾರಣವಾಗಿವೆ. ಇಂಧನ ದರದ ಏರಿಕೆಯಿಂದಾಗಿ ಉದ್ಯಮವು ಭಾರಿ ನಷ್ಟ ಎದುರಿಸುತ್ತಿದೆ. 2020ರಲ್ಲಿ ಕೋವಿಡ್ ಪರಿಸ್ಥಿತಿ ಮೊದಲು ಇಂಧನ ದರ ಪ್ರತಿ ಲೀಟರ್‌ಗೆ 21 ಸಾವಿರ ರೂ. ಇತ್ತು. ಈಗ ಅದು 93 ಸಾವಿರ ರೂ.ಗಳಿಗೆ ಏರಿಕೆಯಾಗಿದೆ.












Click it and Unblock the Notifications