ವಿಶ್ವ ಯೋಗ ದಿನ; ಜನತೆಗೆ ನರೇಂದ್ರ ಮೋದಿ ಮನವಿ
ನವದೆಹಲಿ, ಜೂನ್ 18 : ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆಯೇ ವಿಶ್ವ ಯೋಗ ದಿನ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಯೋಗ ದಿನದ ಹಿನ್ನಲೆಯಲ್ಲಿ ದೇಶದ ಜನರಿಗೆ ಮನವಿಯೊಂದನ್ನು ಮಾಡಿದ್ದಾರೆ.
Recommended Video
ಗುರುವಾರ ಪ್ರಧಾನಿ ನರೇಂದ್ರ ಮೋದಿ ಅಂತರಾಷ್ಟ್ರೀಯ ಯೋಗ ದಿನದ ಹಿನ್ನಲೆಯಲ್ಲಿ ದೇಶದ ಜನರಿಗೆ ಮನವಿಯೊಂದನ್ನು ಮಾಡಿದ್ದಾರೆ. ಎಲ್ಲರೂ ಮನೆಯಿಂದಲೇ ಯೋಗ ದಿನವನ್ನು ಆಚರಣೆ ಮಾಡೋಣ ಎಂದು ಕರೆ ಕೊಟ್ಟಿದ್ದಾರೆ.

ಯೋಗದ ಮಹತ್ವವನ್ನು ಎಲ್ಲಾ ದೇಶಗಳಿಗೂ ತಿಳಿಸಲು ವಿಶ್ವಸಂಸ್ಥೆ ಪ್ರತೀ ವರ್ಷದ ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಣೆ ಮಾಡಬೇಕು ಎಂದು ಕರೆ ನೀಡಿದೆ. ಈ ದಿನದ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿತ್ತು.
ಕೊರೊನಾ ವೈರಸ್ ಸೋಂಕಿನ ಹಿನ್ನಲೆಯಲ್ಲಿ ಹೆಚ್ಚು ಜನಸಂದಣಿ ಸೇರುವ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಆದ್ದರಿಂದ ಈ ಬಾರಿ ವಿಶ್ವ ಯೋಗ ದಿನದ ಅಂಗವಾಗಿ ಯಾವುದೇ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದಿಲ್ಲ.
ವಿಶ್ವ ಯೋಗ ದಿನದ ಅಂಗವಾಗಿ ಆಯೋಜಿಸಲಾಗುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡು ಜನರ ಜೊತೆ ಸೇರಿ ಯೋಗ ಮಾಡುತ್ತಿದ್ದರು. ಈ ಬಾರಿ ಮನೆಯಿಂದಲೇ ಎಲ್ಲರೂ ಯೋಗ ಮಾಡಬೇಕು ಎಂದು ಕರೆ ನೀಡಿದ್ದಾರೆ.












Click it and Unblock the Notifications