ಡಾ. ಸಿಂಗ್ ಗೆ ಜಪಾನ್ ಪ್ರಶಸ್ತಿ ಹಿಂದಿನ ಮರ್ಮವೇನು?
ಜಪಾನ್ ದೇಶವು ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರಿಗೇ ನೀಡಲು ಜಪಾನ್ ಕೈಗೊಂಡ ನಿರ್ಧಾರದ ಹಿಂದೆ ನಿಗೂಢ ಕಾರಣವಿದೆ!
ಪ್ರಧಾನಿ ಶಿಂಜೋ ಅಬೆ ನೇತೃತ್ವದ ಜಪಾನ್ ಸರ್ಕಾರ ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ "The Grand Cordon of the Order of the Paulownia Flowers" ನೀಡಲು ಡಾ. ಮನಮೋಹನ ಸಿಂಗ್ ಹೆಸರನ್ನು ಅಂತಿಮಗೊಳಿಸಿರುವುದು ಎಲ್ಲೆಡೆ ಅಚ್ಚರಿಗೆ ಕಾರಣವಾಗಿದೆ. ಸ್ವತಃ ಮನಮೋಹನ ಸಿಂಗ್ ಕೂಡ ಈ ಪ್ರಶಸ್ತಿಯನ್ನು ನಿರೀಕ್ಷಿಸಿರಲಿಲ್ಲ.

ಈ ಪ್ರಶಸ್ತಿಗೆ ಡಾ. ಮನಮೋಹನ ಸಿಂಗ್ ಅವರ ಹೆಸರು ಸೂಚಿಸಿದ್ದು ಸ್ವತಃ ನರೇಂದ್ರ ಮೋದಿ ಅವರೇ ಎಂದು ನಿತಿಸೆಂಟ್ರಲ್ ವರದಿ ಮಾಡಿದೆ. ಜಪಾನ್ ದೇಶಕ್ಕೆ ಮೋದಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಕುರಿತು ಉಭಯ ದೇಶಗಳ ಪ್ರಧಾನ ಮಂತ್ರಿಗಳು ಚರ್ಚೆ ನಡೆಸಿದ್ದಾರೆ. ಆಗ ಮನಮೋಹನ ಸಿಂಗ್ ಅವರ ಹೆಸರನ್ನು ನರೇಂದ್ರ ಮೋದಿ ಸೂಚಿಸಿದ್ದರು. ಈ ವಿಷಯ ಮುಚ್ಚಿಡಲು ಸರ್ಕಾರದ ಉನ್ನತ ಅಧಿಕಾರಿಯೋರ್ವರ ಮೂಲಕ ವಿಷಯ ಬಹಿರಂಗಗೊಳಿಸಲಾಗಿದೆ. ಏನೇ ಆದರೂ, ಜಪಾನ್ ರಾಯಭಾರ ಕಚೇರಿಯು "ಭಾರತ-ಜಪಾನ್ ಸಂಬಂಧ ವೃದ್ಧಿಯಲ್ಲಿ ಡಾ. ಮನಮೋಹನ ಸಿಂಗ್ ಅವರ 35 ವರ್ಷಗಳ ಕೊಡುಗೆ ಗಮನಿಸಿ ಈ ಪ್ರಶಸ್ತಿ ನೀಡಲಾಗಿದೆ" ಎಂದು ಸಮರ್ಥಿಸಿಕೊಂಡಿದೆ. ಈ ಪ್ರಶಸ್ತಿಯನ್ನು ಇದುವರೆಗೆ 56 ವಿದೇಶೀಯರಿಗೆ ನೀಡಲಾಗಿದ್ದು, ಮನಮೋಹನ ಸಿಂಗ್ 57ನೇ ವ್ಯಕ್ತಿ.
ಮನಮೋಹನ ಪ್ರತಿಕ್ರಿಯೆ: ಡಾ. ಮನಮೋಹನ ಸಿಂಗ್ ಅವರು ಜಪಾನ್ ನೀಡಿದ ಪ್ರಶಸ್ತಿ ಸ್ವೀಕರಿಸಲು ತಕ್ಷಣ ಒಪ್ಪಿಕೊಂಡಿರುವುದು ಅನೇಕರಿಗೆ ಅಚ್ಚರಿ ತಂದಿದೆ. ಪ್ರಶಸ್ತಿ ಕುರಿತು ಪ್ರತಿಕ್ರಿಯೆ ನೀಡಿರುವ ಸಿಂಗ್, "ಜಪಾನ್ ಸರ್ಕಾರ ಹಾಗೂ ಜನತೆ ತೋರಿರುವ ಪ್ರೀತಿಗೆ ಕೃತಜ್ಞನಾಗಿದ್ದೇನೆ. ಏಶಿಯಾ ಅಭಿವೃದ್ಧಿಯಲ್ಲಿ ಭಾರತ-ಜಪಾನ್ ವಿವಿಧ ಅಂಶಗಳನ್ನು ಹಂಚಿಕೊಳ್ಳುತ್ತಿರುವ ಕಾರಣ ಎರಡೂ ದೇಶಗಳ ಮಧ್ಯೆ ವಿಶೇಷ ಸಂಬಂಧ ಏರ್ಪಟ್ಟಿದೆ" ಎಂದು ಡಾ. ಮನಮೋಹನ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಜಪಾನ್ ಪ್ರಶಸ್ತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಮೌನ ವಹಿಸಿರುವುದರಿಂದ ಈ ಸಂದರ್ಭವನ್ನು ಮೋದಿ ಕಾಲೆಳೆಯಲು ಉಪಯೋಗಿಸಿಕೊಂಡಿರುವ ಕಾಂಗ್ರೆಸ್ "ಜಗತ್ತು ಕೆಲಸಗಾರರನ್ನು ಗೌರವಿಸುತ್ತದೆಯೇ ವಿನಃ ವಾಚಾಳಿಗಳನ್ನಲ್ಲ" ಎಂದು ಪರೋಕ್ಷವಾಗಿ ಟೀಕಿಸಿದೆ. [ಪೂರ್ತಿ ಲೇಖನ ಇಲ್ಲಿ ಓದಿ]
-
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ












Click it and Unblock the Notifications