2018ಕ್ಕೆ ಮಹಾಮಸ್ತಕಾಭಿಷೇಕ, ಗಿನ್ನೆಸ್ ದಾಖಲೆಗೆ ಸೋನಾಕ್ಷಿ ಸಿನ್ಹಾ

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್,10: ಐವತ್ತೆಂಟು ಅಡಿ ಎತ್ತರದ ಹಾಸನದ ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರನಿಗೆ 2018ರ ಫೆಬ್ರವರಿ ಮೊದಲ ವಾರದಲ್ಲಿ ಮಹಾಮಸ್ತಕಾಭೀಷೇಕ ನಡೆಯಲಿದೆ. ಈ ಮಹಾವಿಜೃಂಭಣೆಯ ವೈಭವದ ಜವಾಬ್ದಾರಿಯನ್ನು ಎಸ್ ಡಿಜೆಎಮ್ ಐ ಸಮಿತಿ ವಹಿಸಿಕೊಂಡಿದೆ.

ಶ್ರವಣಬೆಳಗೊಳದಲ್ಲಿ ನಡೆಯುವ ಮಸ್ತಕಾಭೀಷೇಕಕ್ಕೆ ಸುಮಾರು 500ಕೋಟಿ ರೂ ವೆಚ್ಚವಾಗುವ ಸಂಭವವಿದ್ದು, ಇದರ ವೆಚ್ಚವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಭರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ.ಮಸ್ತಕಾಭಿಷೇಕಕ್ಕೆ ಸುಮಾರು 35 ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ.

ಪ್ರವಾಸಿಗರ ವಸತಿಗಾಗಿ 500 ಎಕರೆ ಪ್ರದೇಶದಲ್ಲಿ ತಾತ್ಕಾಲಿಕ ಟೆಂಟ್ ನಿರ್ಮಾಣ ಮಾಡಲಾಗುವುದು. 30 ಎಕರೆ ಪ್ರದೇಶದಲ್ಲಿ 5 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಲಾಗುವುದು. ಅಲ್ಲದೇ ರಕ್ಷಣೆಗಾಗಿ 4,500 ಪೊಲೀಸರನ್ನು ನಿಯೋಜನೆ ಮಾಡಲಾಗುವುದು ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ನೇತೃತ್ವದ ಸಭೆ ಮಾಹಿತಿ ನೀಡಿದೆ.[ಆತ್ಮಶುದ್ಧಿ, ತ್ಯಾಗದ ದ್ಯೋತಕ ಜೈನರ ಪರ್ಯೂಷಣ ಪರ್ವ]

ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಜೈನ ಧರ್ಮದ ಹಲವಾರು ಮುನಿಗಳು ಜಗತ್ಪ್ರಸಿದ್ದ ಮಹಾ ವೈಭವಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದ್ದಾರೆ.

ಈ ಸುದ್ದಿಯ ಜೊತೆಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ನಡೆಸುತ್ತಿರುವ ವಿಶ್ವ ಸಾಂಸ್ಕೃತಿಕ ಉತ್ಸವದ ಸಿದ್ಧತೆ, ಆಂಧ್ರಪ್ರದೇಶದ ಸತೀಶ್ ಧವನ್ ಕೇಂದ್ರದಿಂದ ಉಡಾವಣೆಗೊಳ್ಳಲು ಸಿದ್ದವಾಗಿರುವ ಐಆರ್ಎನ್ ಎಸ್ಎಸ್ ಸರಣಿಯ ಆರನೇ ಉಪಗ್ರಹ, ಹೀಗೆ ಅನೇಕ ಸುದ್ದಿಗಳು ಇಲ್ಲಿವೆ

2018ಕ್ಕೆ ಮಸ್ತಕಾಭಿಷೇಕ

2018ಕ್ಕೆ ಮಸ್ತಕಾಭಿಷೇಕ

ಪ್ರತಿ 12 ವರ್ಷಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕವು 2018ರಲ್ಲಿ ನಡೆಯಲಿದೆ. ಮೂಡಬಿದಿರೆ, ಕಾರ್ಕಳ, ರಾಜಸ್ಥಾನ, ಹೀಗೆ ನಾನಾ ಭಾಗಗಳಿಂದ ಆಗಮಿಸುವ ಲಕ್ಷಾಂತರ ಭಕ್ತರ ರಕ್ಷಣೆಗಾಗಿ 18 ಕೋಟಿ ವ್ಯಯಿಸಲಾಗುವುದು.

ಗಿನ್ನೆಸ್ ದಾಖಲೆಗೆ ಸೋನಾಕ್ಷಿ ಸಿನ್ಹಾ

ಗಿನ್ನೆಸ್ ದಾಖಲೆಗೆ ಸೋನಾಕ್ಷಿ ಸಿನ್ಹಾ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಟ್ಟ ಏಕಕಾಲದಲ್ಲಿ ಉಗುರುಗಳಿಗೆ ಬಣ್ಣ ಹಚ್ಚಿಕೊಳ್ಳುವ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಗಿನ್ನೆಸ್ ದಾಖಲೆ ಪುಸ್ತಕ ಸೇರಿದ್ದಾರೆ.

ಮುದ್ದಾದ ಮೂರು ಸಿಂಹದ ಮರಿ

ಮುದ್ದಾದ ಮೂರು ಸಿಂಹದ ಮರಿ

ಸಾಲ್ಟ್ ಲೇಕ್ ಸಿಟಿಯ ಹೋಗ್ಲೆ ಮೃಗಾಲಯದಲ್ಲಿ ಸಿಂಹವು ಫೆಬ್ರವರಿ 24ರಂದು ಮೂರು ಮುದ್ದಾದ ಮರಿಗಳಿಗೆ ಜನ್ಮ ನೀಡಿವೆ.

ಆರನೇ ಉಪಗ್ರಹ ಉಡಾವಣೆಗೆ ಸಿದ್ದವಾದ ಸತೀಶ್ ಧವನ್ ಕೇಂದ್ರ

ಆರನೇ ಉಪಗ್ರಹ ಉಡಾವಣೆಗೆ ಸಿದ್ದವಾದ ಸತೀಶ್ ಧವನ್ ಕೇಂದ್ರ

ಐಆರ್ಎನ್ ಎಸ್ಎಸ್ ಸರಣಿಯ ಆರನೇ ಉಪಗ್ರಹ ಆಂಧ್ರಪ್ರದೇಶದ ಸತೀಶ್ ಧವನ್ ಉಪಗ್ರಹ ಕೇಂದ್ರದಿಂ ಉಡಾವಣೆಗೊಳ್ಳಲು ಸಿದ್ದವಾಗಿದೆ. ಪಿಎಸ್ಎಲ್ ವಿ ಸಿ32 ಪಥದರ್ಶಕ 1,425 ಕೆಜಿ ತೂಕದ ಉಪಗ್ರಹವನ್ನು ಹೊತ್ತೊಯ್ಯಲಿದೆ.

ಕಿಲಕಿಲನೆ ನಕ್ಕ ನಾಯಕರು

ಕಿಲಕಿಲನೆ ನಕ್ಕ ನಾಯಕರು

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ನವದೆಹಲಿಯಲ್ಲಿ ನಡೆದ ಕೈಗಾರಿಕಾ ಸಂರಕ್ಷಣಾ ದಳದ 47ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿ ಒಬ್ಬೊಬ್ಬರು ಮಾತನಾಡುತ್ತಾ ನಗೆ ಬೀರಿದ್ದು ಹೀಗೆ

ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ಸಕಲ ಸಿದ್ದತೆ

ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ಸಕಲ ಸಿದ್ದತೆ

ಮಾರ್ಚ್ 11ರಿಂದ 13ರವರೆಗೆ ನವದೆಹಲಿಯ ಯಮುನಾ ನದಿ ತೀರದಲ್ಲಿ ನಡೆಯಲಿರುವ ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ಸಕಲ ಸಿದ್ದತೆಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರಿಗೆ ದಂಡ ವಿಧಿಸಲಾಗಿದೆ. [ದಂಡ ಕಟ್ಟಲು ನಕಾರ, ಜೈಲಿಗೆ ಹೋಗಲು ಸಿದ್ಧ: ಶ್ರೀಶ್ರೀ ರವಿಶಂಕರ್]

ಪೊಲೀಸ್ ಪೇದೆ ದೌರ್ಜನ್ಯ

ಪೊಲೀಸ್ ಪೇದೆ ದೌರ್ಜನ್ಯ

ಉತ್ತರ ಪ್ರದೇಶದ ಲಕ್ನೋದಲ್ಲಿ ಪ್ರತಿಭಟನೆ ಕೈಗೊಂಡ ಕಂಪ್ಯೂಟರ್ ಶಿಕ್ಷಕರ ಮೇಲೆ ಲಾಠಿ ಚಾರ್ಜ್ ಮಾಡುತ್ತಿರುವ ಪೊಲೀಸ್ ಪೇದೆಯ ದೌರ್ಜನ್ಯ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Workers make arrangements for the three-day World Peace Festival organised by spiritual guru Sri Sri Ravi Shankar in New Delhi, Indian Space Research Organisation's sixth navigation satellite IRNSS-1F, on-board PSLV-C32 lifts off from the spaceport of Sriharikota in Andhra Pradesh
Please Wait while comments are loading...