Tirupati Tirumala: ತಿರುಮಲ ಭಕ್ತಾದಿಗಳಿಗೆ ಟಿಟಿಡಿಯಿಂದ ಗುಡ್ ನ್ಯೂಸ್, ಇನ್ಮುಂದೆ ಸುಲಭವಾಗಿ ಲಭ್ಯವಾಗಲಿದೆ ದೇವಸ್ಥಾನದ ಮಾಹಿತಿ
ತಿರುಮಲಕ್ಕೆ ಹೋಗುವ ಭಕ್ತಾದಿಗಳಿಗೆ ಅನುಕೂಲವಾಗಲು ಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಸ್ಥಳೀಯ ದೇವಾಲಯಗಳು ಮತ್ತು ಸಂಯೋಜಿತ ದೇವಾಲಯಗಳ ಮಾಹಿತಿಯನ್ನು ಭಕ್ತರಿಗೆ ಲಭ್ಯವಾಗುವಂತೆ ಮಾಡಲು ಟಿಟಿಡಿ ಯೋಚಿಸಿದೆ.
ಈ ಹಿನ್ನೆಲೆಯಲ್ಲಿ ದೇವಸ್ಥಾನದ ಎಲ್ಲಾ ವಿವರಗಳು ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಆಗಬೇಕು ಎಂದು ಟಿಟಿಡಿ ಇಒ ಧರ್ಮಾ ರೆಡ್ಡಿ ತಿಳಿಸಿದ್ದಾರೆ. ಅಂದರೆ ದೇವಸ್ಥಾನದಲ್ಲಿ ನಡೆಯುವ ಪೂಜೆ, ವಿಶೇಷ ದಿನಗಳ ಬಗ್ಗೆ ಮಾಹಿತಿಯನ್ನು ಭಕ್ತರಿಗೆ ಒದಗಿಸಲು ಇದು ಅನುಕೂಲಕರವಾಗಿದೆ. ತಿರುಮಲಕ್ಕೆ ಹೋಗುವ ಭಕ್ತರಿಗೆ ಪ್ರಮುಖ ಸೂಚನೆಯನ್ನು ನೀಡಲು ಇದು ಸಹಾಯವಾಗಲಿದೆ.

ಜೊತೆಗೆ ಟಿಟಿಡಿ ಸ್ಥಳೀಯ ದೇವಾಲಯಗಳು ಮತ್ತು ತಿರುಪತಿ ಹಾಗೂ ಇತರ ಪ್ರದೇಶಗಳಲ್ಲಿನ ಸಂಯೋಜಿತ ದೇವಾಲಯಗಳಿಗೆ ವ್ಯಾಪಕ ಪ್ರಚಾರ ನೀಡುವ ಸಲುವಾಗಿ ಎಲ್ಲಾ ವಿವರಗಳೊಂದಿಗೆ ವೆಬ್‌ಸೈಟ್ ಅನ್ನು ನವೀಕರಿಸುವಂತೆ ಟಿಟಿಡಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಮಂಗಳವಾರ ತಿರುಪತಿಯ ಟಿಟಿಡಿ ಆಡಳಿತ ಭವನದಲ್ಲಿ ಇಒ ಸ್ಥಳೀಯ ದೇವಸ್ಥಾನಗಳ ಪರಿಶೀಲನೆ ನಡೆಸಿದರು.
ಟಿಟಿಡಿಯಲ್ಲಿ 60 ಕ್ಕೂ ಹೆಚ್ಚು ಸ್ಥಳೀಯ ದೇವಾಲಯಗಳು ಮತ್ತು ಸಂಯೋಜಿತ ದೇವಾಲಯಗಳಿವೆ. ಇವುಗಳಿಗೆ ಸಂಬಂಧಿಸಿದ ಸ್ಥಳ, ಸೇವೆಗಳು, ದರ್ಶನ ಸಮಯ ಮತ್ತು ಇತರ ಸೌಲಭ್ಯಗಳ ಬಗ್ಗೆ ವೆಬ್‌ಸೈಟ್ ಮೂಲಕ ಭಕ್ತರಿಗೆ ತಿಳಿಸಲು ಟಿಟಿಡಿ ತಿಳಿಸಿದೆ.
ಈ ಹಿಂದೆ ಕರಪತ್ರಗಳು ಹಾಗೂ ಪ್ರಚಾರ ಸಾಮಗ್ರಿಗಳನ್ನು ಭಕ್ತರಿಗೆ ವಿವಿಧ ರೀತಿಯಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮದತ್ತ ಒಲವು ತೋರುತ್ತಿರುವ ಹಿನ್ನೆಲೆಯಲ್ಲಿ ವೆಬ್ ಸೈಟ್ ಆಧುನೀಕರಣಗೊಳಿಸಲು ಸೂಚಿಸಲಾಗಿದೆ. ಎಸ್‌ವಿಬಿಸಿ ಮೂಲಕ ದೇವಾಲಯದ ವಿಶಿಷ್ಟತೆಗೆ ಸಂಬಂಧಿಸಿದ ಕಿರು ವಿಡಿಯೋ ತುಣುಕುಗಳನ್ನು ಮಾಡಿ ವಿವಿಧ ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಲು ತಿಳಿಸಲಾಯಿತು. ಆ ಮೂಲಕ ದೇವಸ್ಥಾನಗಳ ಬಗ್ಗೆ ಹೆಚ್ಚು ಜನರಿಗೆ ತಿಳಿಯುತ್ತದೆ ಎಂಬುದು ಉದ್ದೇಶವಾಗಿದೆ.
ಶ್ರೀವಾರಿ ದೇವಸ್ಥಾನದಲ್ಲಿ ಅಧ್ಯಯನ ಉತ್ಸವಗಳು ಪ್ರಾರಂಭ
ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ 25 ದಿನಗಳ ಅಧ್ಯಯನ ಮಹೋತ್ಸವ ಮಂಗಳವಾರ ಆರಂಭವಾಯಿತು. ಇದರ ಅಂಗವಾಗಿ ಸಂಜೆ 7.30ರಿಂದ 8.30ರವರೆಗೆ ರಂಗನಾಯಕುಲ ಮಂಟಪದಲ್ಲಿ ಅಧ್ಯಾಯನೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಧನುರ್ಮಾಸದ ವೈಕುಂಠ ಏಕಾದಶಿಯ 11 ದಿನಗಳ ಮೊದಲು ಶ್ರೀವಾರಿಯ ಸನ್ನಿಧಿಯಲ್ಲಿ ಅಧ್ಯಯನ ಮಹೋತ್ಸವ ನಡೆಸುವುದು ವಾಡಿಕೆ ಇದೆ.
ಅದ್ಧೂರಿಯಾಗಿ ನೆರವೇರಿದ ಕಪಿಲೇಶ್ವರ ದೇವಸ್ಥಾನದಲ್ಲಿ ಹೋಮ ಮಹೋತ್ಸವ
ಕಾರ್ತಿಕ ಮಾಸದ ನಿಮಿತ್ತ ತಿರುಪತಿಯ ಕಪಿಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಒಂದು ತಿಂಗಳ ಹೋಮ ಮಹೋತ್ಸವ ಮಂಗಳವಾರ ಅದ್ಧೂರಿಯಾಗಿ ನೆರವೇರಿತು. ಬೆಳಗ್ಗೆಚಂಡಿಕೇಶ್ವರ ಸ್ವಾಮಿಯ ಹೋಮ ನಡೆಯಿತು. ಬಳಿಕ ಮಹಾಪೂರ್ಣಾಹುತಿ, ಕಲಶ ಉದ್ವಾಸನೆ, ಮಹಾಶಾಂತಿ ಅಭಿಷೇಕ, ಕಲಶಾಭಿಷೇಕ, ತ್ರಿಶೂಲಸ್ನಾನ, ಅಂಕುರ ವಿಸರ್ಜನ ಕಾರ್ಯಕ್ರಮ ಜರುಗಿತು. ಸಂಜೆ ಲಕ್ಷದೀಪಪಾರಾಧನೆ ನಂತರ ಪಂಚಮೂರ್ತಿಗಳನ್ನು ನಗರದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications