ಟೊಮ್ಯಾಟೋ ಕಾಯಲು ಭದ್ರತಾ ಸಿಬ್ಬಂದಿ

Posted By:
Subscribe to Oneindia Kannada

ಇಂದೋರ್, ಜುಲೈ 23: ಟೊಮ್ಯಾಟೊ ಬೆಲೆ ಗಗನಕ್ಕೇರಿದ್ದು, ಮಾರುಕಟ್ಟೆಯಲ್ಲಿ ಒಂದು ಕೆ.ಜಿಗೆ ನೂರರ ಗಡಿ ದಾಟಿದೆ. ಜತೆಗೆ ಅಂಗಡಿಕಾರರಿಗೆ ಕಳ್ಳರ ಭೀತಿ ಎದುರಾಗಿದೆ. ಅಲ್ಪಾಯುಷಿ ಟೊಮ್ಯಾಟೋಗೆ ಈಗ ಎಲ್ಲಿಲ್ಲದ ಬೆಲೆ ಬಂದಿದೆ.

ಮುಂಬೈನ ದಾಹಿಸರ್ ಮಾರ್ಕೆಟ್ ನಲ್ಲಿ 900 ಕೆ.ಜಿ ಟೊಮೆಟೊಗಳನ್ನು ಕಳ್ಳರು ಕದ್ದ ಸುದ್ದಿ ಹಬ್ಬಿದ ಬೆನ್ನಲ್ಲೇ ಮಧ್ಯಪ್ರದೇಶದ ಇಂದೋರ್ ನಲ್ಲಿ ಭಾರಿ ಆತಂಕ ಶುರುವಾಗಿದೆ. ಜುಲೈ 20ರಂದು ಮುಂಬೈನ ದಾಹಿಸರ್ ಮಾರ್ಕೆಟ್‌ನಲ್ಲಿ 900 ಕೆ.ಜಿ ಟೊಮ್ಯಾಟೋ ಕದ್ದವರ ಸುಳಿವು ಇನ್ನೂ ಸಿಕ್ಕಿಲ್ಲ.

Indore: Vendors deploy armed guards to protect tomatoes!

ಈ ನಡುವೆ ಇಂದೋರ್ ನಲ್ಲಿ ಆತಂಕಕ್ಕೊಳಗಾಗಿರುವ ವ್ಯಾಪಾರಿಗಳು ಟೊಮೆಟೊಗೆ ಬಂದೂಕುಧಾರಿಯ ಭದ್ರತೆ ನೀಡಿದ್ದಾರೆ. ಮಾರ್ಕೆಟ್ ಗೆ ಟೊಮೆಟೊ ಟ್ರಕ್ ಗಳು ಬರುತ್ತಿದಂತೆ ಭದ್ರತಾ ಸಿಬ್ಬಂದಿ, ಟೊಮೆಟೊವನ್ನು ಗನ್ ಗಳನ್ನು ಹಿಡಿದುಕೊಂಡು ಭದ್ರತೆ ನೀಡುತ್ತಿದ್ದಾರೆ.

ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬೆಂಗಾಲ ಹಾಗೂ ಒಡಿಶಾ ರಾಜ್ಯಗಳು ದೇಶದಲ್ಲಿ ಹೆಚ್ಚು ಟೊಮ್ಯಾಟೊ ಉತ್ಪಾದಿಸುವ ರಾಜ್ಯಗಳಾಗಿವೆ.

ಸರಿಯಾದ ಪೂರೈಕೆ ಇಲ್ಲದ ಕಾರಣ, ಮಾರುಕಟ್ಟೆಯಲ್ಲಿ ದಿಢೀರ್ ಆಗಿ ಬೆಲೆ ವ್ಯತ್ಯಾಸ ಕಂಡು ಬಂದಿದೆ. ಇನ್ನು ಹರ್ಯಾಣ, ಪಂಜಾಬ್ ಸೇರಿದಂತೆ ಹಲವೆಡೆ ಅಕಾಲಿಕ ಮಳೆಗೆ ಟೊಮ್ಯಾಟೊ ಬೆಳೆ ಹಾಳಾಗಿದೆ. ಉತ್ತರ ಭಾರತದಲ್ಲಿ ಕಳೆದ ತಿಂಗಳು ಬಿಸಿಲಿಗೂ ಟೊಮ್ಯಾಟೊ ಬಾಡಿ ಹೋಗಿದೆ.

Tomato Prices Are Ruling To Rs.100 Per KG | Oneindia Kannada

ಈರುಳ್ಳಿಗೆ ಹೋಲಿಸಿದರೆ ಟೊಮ್ಯಾಟೊಗೆ ಆಯಸ್ಸು ಕಮ್ಮಿ. ಚಟ್ನಿ, ಸಾರು, ಜಾಮ್, ಗೊಜ್ಜು ಹೀಗೆ ಮಾರುಕಟ್ಟೆಯಿಂದ ತಂದ ದಿನವೇ ಬಳಸುವುದು ಮಾಮೂಲಿ. ಹೀಗಾಗಿ ಕಳೆದ ವಾರದ ಟೊಮ್ಯಾಟೊ ಯಾರು ಇಟ್ಟುಕೊಳ್ಳುವುದಿಲ್ಲ. ಹೀಗಾಗಿ ಮಾರಾಟಗಾರರು ಹಾಗೂ ಗ್ರಾಹಕರಿಬ್ಬರಿಗೂ ಆತಂಕ ಸಹಜವಾಗಿದೆ.(ಎಎನ್ಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
With tomato prices' skyrocketing, it has become important in the whole sale vegetable market of Madhya Pradesh's Indore city, to guard the vegetable.
Please Wait while comments are loading...