Mangilal: 3 ಮನೆ, 3 ಆಟೋ, ಕಾರು ಕೋಟ್ಯಾಂತರ ರೂ. ಇದ್ದರೂ ಭಿಕ್ಷೆ ನಿಲ್ಲಿಸದ ಶ್ರೀಮಂತ ಮಂಗಿಲಾಲ್
ಇಂದೋರ್: ಎಷ್ಟೇ ಹಣ, ಶ್ರೀಮಂತಿಕೆ ಬಂದರೂ ಮಾಡುವ ಕಾಯಕದ ಮೇಲೆ ಗೌರವ ಇರಬೇಕು. ಅಟ್ಟಕ್ಕೇರಿಸಿದರೂ ಏರಿಸಿದ ವೃತ್ತಿ ಕೈ ಬಿಡಬಾರದು ಎಂಬ ಮಾತಿದೆ. ಅದರಂತೆ ಇಲ್ಲೊಬ್ಬರು ಶ್ರೀಮಂತ ಭಿಕ್ಷುಕ ತನ್ನ ಬಳಿ ಹಣ, ಮನೆ, ಕಾರು, ಆಟೋಗಳಿದ್ದರು ಸಹಿತ ಭಿಕ್ಷಾಟನೆ ಮುಂದುವರಿಸಿದ್ದಾರೆ. ರಾಜ್ಯ ಸರ್ಕಾರ ಭಿಕ್ಷಾಟನೆ ನಿರ್ಮೂಲನೆ ಅಭಿಯಾನದಲ್ಲಿ ಪತ್ತೆಯಾದ ಈ ಶ್ರೀಮಂತ ಭಿಕ್ಷುಕನ ಆಸ್ತಿ ನೋಡಿದ ಅಧಿಕಾರಿಗಳು ಒಂದು ಕ್ಷಣ ಬೆರಗಾಗಿದ್ದಾರೆ.
ಮಧ್ಯಪ್ರದೇಶ ರಾಜ್ಯದಲ್ಲಿ ಇತ್ತೀಚೆಗೆ 'ಇಂದೋರ್ ಭಿಕ್ಷುಕ ನಿರ್ಮೂಲನಾ ಅಭಿಯಾನ' ಆರಂಭಿಸಲಾಗಿದೆ. ಈ ವೇಳೆ ಸರ್ಕಾರವು ಭಿಕ್ಷಾಟನೆ ಮೂಲಕವೇ ಕೋಟ್ಯಂತರ ಮೌಲ್ಯದ ಸಂಪತ್ತನ್ನು ಸಂಗ್ರಹಿಸಿದ ಭಿಕ್ಷುಕ ಮಂಗಿಲಾಲ್ ಅವರನ್ನು ಪತ್ತೆ ಮಾಡಿ ಮಾಡಿದೆ. ಭಿಕ್ಷೆ ಬೇಡಿ ಜೀವನ ತುಂಬಿಕೊಳ್ಳುವುದು ಕಷ್ಟ ಅನ್ನುವವರ ಮಧ್ಯ ಈ ಭಿಕ್ಷುಕ ಮಂಗಿಲಾಲ್ ಇಂದೋರ್ ಕೆಲವೆಡೆ ಒಟ್ಟು ಮೂರು ಸ್ವಂತ ಮನೆಗಳನ್ನು ಹೊಂದಿದ್ದಾರೆ. ಮಾತ್ರವಲ್ಲದೇ ಹಣ ಅಗತ್ಯವಿರುವವರಿಗೆ ಬಡ್ಡಿ ರೂಪದಲ್ಲಿ ಸಾಲ ಸೌಲಭ್ಯ ಸಹ ಒದಗಿಸುತ್ತಿದ್ದಾರೆ ಎಂಬುದು ಅಭಿಯಾನದ ಅಧಿಕಾರಿಗಳಿಗೆ ಸಿಕ್ಕ ಮಾಹಿತಿಯಾಗಿದೆ.

ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ತಂಡವು ಅಭಿಯಾನ ಆರಂಭಿಸಿತ್ತು. ಭಿಕ್ಷುಕರನ್ನು ಗುರುತಿಸುವ ಕೆಲಸ ಮಾಡಿತ್ತು. ಈ ವೇಳೆ ಮಂಗಿಲಾಲ್ ಅವರು ಗಮನ ಸೆಳೆದ ಭಿಕ್ಷುಕರಾಗಿದ್ದಾರೆ. ಇವರು ರಾಜ್ಯ ಸರ್ಕಾರ ಮತ್ತು ರೆಡ್‌ಕ್ರಾಸ್‌ನ ಸಂಯೋಜನೆಯಲ್ಲಿ ಜಾರಿಗೆ ತಂದ ಉಪಕ್ರಮ ಫಲಾನುಭವಿ ಸಹ ಆಗಿದ್ದಾರೆ. ಅವರಿಗೆ ಯೋಜನೆಯಡಿ ಒನ್ ಬಿಎಚ್‌ಕೆ ಮನೆ ನೀಡಲಾಗಿತ್ತು. ಹೀಗಿದ್ದರು ಅವರು ಭಿಕ್ಷಾಟನೆಯನ್ನು ನಿಲ್ಲಿಸಿರಲಿಲ್ಲ. ಇಂದೋರ್‌ನ ಬೀದಿಗಳಲ್ಲಿ ನಿಯಮಿತವಾಗಿ ಓಡಾಡುತ್ತಾ ಭಿಕ್ಷೆ ಬೇಡುತ್ತಿದ್ದರು.
ಕಾರು, ಆಟೋಗಳಿವೆ: ಬಡ್ಡಿಗೆ ಹಣ ನೀಡುವ ಭಿಕ್ಷುಕ
ಅಧಿಕಾರಿಗಳು ಪತ್ತೆ ಮಾಡಿದ ಮಾಹಿತಿ ಪ್ರಕಾರ, ಈ ಮಂಗಿಲಾಲ್ ಅವರು ಮೂರು ಆಟೋಗಳನ್ನು ಹೊಂದಿದ್ದಾರೆ. ಅವುಗಲನ್ನು ಬಾಡಿಗೆಗೆ ಬಿಡುತ್ತಾರೆ. ಒಂದು ಮಾರುತಿ ಸುಜುಕಿ ಡಿಜೈರ್ ಕಾರು ಅವರ ಬಳಿ ಇದೆ. ಅದನ್ನು ಸಹ ಬಾಡಿಗೆ ಹಾಗೂ ಇತರ ಉದ್ದೇಶಗಳಿಗೆ ನೀಡಿ ಹಣ ಗಳಿಸುತ್ತಾರೆ. ಇಂದೋರ್ ನಗರದ ಭಗತ್ ಸಿಂಗ್ ನಗರ, ಶಿವನಗರ ಮತ್ತು ಆಳ್ವಾಸ್‌ನಲ್ಲಿರುವ ಮೂರು ಅಂತಸ್ತಿನ ಕಟ್ಟಡವನ್ನು ಅವರು ಹೊಂದಿದ್ದಾರೆ ಎಂಬುದು ಅಧಿಕೃತ ಮಾಹಿತಿಯಾಗಿದೆ. ಮೂರು ಮನೆ, ಆಟೋ, ಕಾರುಗಳ ಬಾಡಿಗೆ ಪಡೆಯುವ ಈ ಮಂಗಿಲಾಲ್ ಅವರು ಭಿಕ್ಷೆ ಎತ್ತಿಯೇ ಜೀವನ ನಡೆಸುತ್ತಾರೆ.
ನಿತ್ಯ 400-500 ರೂ. ಬಡ್ಡಿ ಸಂಗ್ರಹ
ಕಾರುಗಳು ಮತ್ತು ಆಟೋಗಳನ್ನು ಬಾಡಿಗೆಯಿಂದ ಹಣ ಪಡೆಯುವ ಜೊತೆಗೆ ಇಂದೋರ್‌ನ ಸರಾಫಾ ಬಜಾರ್ ಪ್ರದೇಶದಲ್ಲಿ ಹಲವು ಜನರಿಗೆ ಮಂಗಿಲಾಲ್ ಅವರು ಬಡ್ಡಿ ದರದಲ್ಲಿ ಹಣ ನೀಡುತ್ತಾರೆ. ಬಡ್ಡಿ ವಸೂಲಿಗೆಂದೆ ಆಗಾಗ ಸರಾಫಾಗೆ ಭೇಟಿ ನೀಡುತ್ತಾರೆ. ನಿತ್ಯವು ಅಲ್ಲಿನ ಜನರಿಗೆ ಸುಮಾರು 400 ರಿಂದ 500 ರೂಪಾಯಿವರೆಗೆ ಹಣ ಸಂಗ್ರಹಿಸುತ್ತಾರೆ. ಇಲ್ಲಿಗೆ ಬಂದು ಹೋಗುವ ಕಾರಣಕ್ಕೆ ಅವರು ಈ ಪ್ರದೇಶಕ್ಕೆ ಚಿರಪರಿಚಿತರಾಗಿದ್ದಾರೆ.
ಇದೆಲ್ಲ ಒಂದು ಕಡೆಯಾದರೆ ಭಿಕ್ಷೆ ಬೇಡುವುದು ಅಪರಾಧ ನಿಯಮ ಮೀರಿ ಭಿಕ್ಷೆ ಬೇಡುವ ಕಾರಣಕ್ಕೆ ಅನೇಕ ಮಂದಿ ಅವರ ವಿರುದ್ಧ ಸರ್ಕಾರಕ್ಕೆ ದೂರು ಸಹ ನೀಡಿದ್ದಾರೆ. ಇದರ ಪರಿಣಾಮವಾಗಿಯೇ ಭಿಕ್ಷಾಟನೆ ನಿರ್ಮೂಲನೆಗೆ ತೆರಳೀದ್ದ ವೇಳೆ ರಾಝ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ತಂಡದವರ ಕಣ್ಣಿಗೆ ಮಂಗಿಲಾಲ್ ಬಿದ್ದಿದ್ದಾರೆ. ಬಳಿಕ ಅವರ ಶ್ರೀಮಂತಿಕೆ ವಿಚಾರ ಜಗತ್ತಿಗೆ ಬಹಿರಂಗವಾಗಿದೆ.
ಸರ್ಕಾರ ಈ ಅಭಿಯಾನದಡಿ ತನ್ನ ಕಠಿಣ ಕ್ರಮಗಳನ್ನು ಮುಂದುವರಿಸಲಿದೆ. ಭಿಕ್ಷಾಟನೆಯನ್ನು ಉತ್ತೇಜಿಸುವ ಅಥವಾ ತೊಡಗಿಸಿಕೊಳ್ಳುವ ಜನರು ಸರ್ಕಾರ ಕೈಗೊಳ್ಳುವ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಕಾರ್ಯಕ್ರಮ ಅಧಿಕಾರಿ ರಾಜೀಶ್ ಸಿನ್ಹಾ ಪ್ರತಿಕ್ರಿಯಿಸಿದರು.












Click it and Unblock the Notifications