ಭಾರತದ ಶ್ರೀಮಂತ ಮತ್ತು ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿಗಳ ಪಟ್ಟಿ ಇಲ್ಲಿದೆ
ನವದೆಹಲಿ, ಏಪ್ರಿಲ್, 13: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಇದರ ಬೆನ್ನಲ್ಲೇ ಇದೀಗ ದೇಶದಲ್ಲಿರುವ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹಾಗಾದರೆ ಅತೀ ಹೆಚ್ಚು ಮತ್ತ ಅತೀ ಕಡಿಮೆ ಆಸ್ತಿಯನ್ನು ಹೊಂದಿರುವ ಮುಖ್ಯಮಂತ್ರಿಗಳ ಪಟ್ಟಿ ಮತ್ತು ಅವರ ಆಸ್ತಿ ಎಷ್ಟು ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್)ನ ಪ್ರಕಾರ ದೇಶದ 30 ರಾಜ್ಯಗಳ ಹಾಲಿ ಮುಖ್ಯಮಂತ್ರಿಗಳಲ್ಲಿ 29 ಜನ ಕೋಟ್ಯಾಧಿಪತಿಗಳಾಗಿದ್ದು, ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ ಅವರು ಒಟ್ಟು 510 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ. ಈ ಮೂಲಕ ಜಗನ್ ಅತಿ ಹೆಚ್ಚು ಆಸ್ತಿ ಹೊಂದಿದ್ದು, ಅವರು ಮೊದಲನೇ ಸ್ಥಾನದಲ್ಲಿದ್ದಾರೆ.

ಇನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸುಮಾರು 15 ಲಕ್ಷ ರೂಪಾಯಿಗಳಷ್ಟು ಅತೀ ಕಡಿಮೆ ಆಸ್ತಿ ಹೊಂದಿದ್ದಾರೆ ಎಂದು ಎಡಿಆರ್ ತಿಳಿಸಿದೆ. ಎಲ್ಲಾ 30 ಪ್ರಸ್ತುತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಸ್ವಯಂ ಪ್ರಮಾಣ ವಚನ ಮತದಾನದ ಅಫಿಡವಿಟ್‌ಗಳನ್ನು ವಿಶ್ಲೇಷಿಸಿದ ನಂತರ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
28 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ ಮತ್ತು ಪುದುಚೇರಿ ಸಹ ಮುಖ್ಯಮಂತ್ರಿಗಳನ್ನು ಹೊಂದಿವೆ. ಆದರೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಪ್ರಸ್ತುತ ಮುಖ್ಯಮಂತ್ರಿಯನ್ನು ಹೊಂದಿಲ್ಲ. 30 ಸಿಎಂಗಳ ಪೈಕಿ 29 ಜನ (ಶೇಕಡಾ 97) ಕೋಟ್ಯಾಧಿಪತಿಗಳಾಗಿದ್ದು, ಪ್ರತಿಯೊಬ್ಬರದ್ದು ಸರಾಸರಿ ಆಸ್ತಿ 33.96 ಕೋಟಿ ರೂಪಾಯಿ ಇದೆ ಎಂದು ಎಡಿಆರ್ ತಿಳಿಸಿದೆ.
ಎಡಿಆರ್ ವರದಿಯ ಪ್ರಕಾರ, 30 ಸಿಎಂಗಳ ಪೈಕಿ 13 (ಶೇಕಾಡ 43) ಜನ ಕೊಲೆ, ಕೊಲೆ ಯತ್ನ, ಅಪಹರಣ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಗಂಭೀರ ಕ್ರಿಮಿನಲ್ ಪ್ರಕರಣಗಳು ಜಾಮೀನು ರಹಿತ ಅಪರಾಧಗಳಾಗಿದ್ದು, ಇದಕ್ಕೆ ಐದು ವರ್ಷಗಳಿಗೂ ಹೆಚ್ಚು ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ.
ಅತೀ ಹೆಚ್ಚು ಆಸ್ತಿ ಹೊಂದಿರುವ ಮುಖ್ಯಂತ್ರಿಗಳು
ರಾಜ್ಯ ಮುಖ್ಯಮಂತ್ರಿ ಆಸ್ತಿ
ಆಂಧ್ರಪ್ರದೇಶ ಜಗನ್ ಮೋಹನ್ ರೆಡ್ಡಿ 510 ಕೋಟಿ ರೂಪಾಯಿಗಿಂತ ಹೆಚ್ಚು
ಅರುಣಾಂಚಲ್ ಪ್ರದೇಶ ಪೇಮಾ ಖಂಡು 163 ಕೋಟಿ ರೂಪಾಯಿ
ಒಡಿಶಾ ನವೀನ್ ಪಟ್ನಾಯಕ್ 63 ಕೋಟಿ ರೂಪಾಯಿಗಿಂತ ಹೆಚ್ಚು
ಕನಿಷ್ಠ ಆಸ್ತಿ ಹೊಂದಿರುವ ಮುಖ್ಯಮಂತ್ರಿಳು
ರಾಜ್ಯ ಮುಖ್ಯಮಂತ್ರಿ ಆಸ್ತಿ
ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ 15 ಲಕ್ಷ ರೂಪಾಯಿಗೂ ಹೆಚ್ಚು
ಕೇರಳ ಪಿಣರಾಯಿ ವಿಜಯನ್ 1 ಕೋಟಿ ರೂಪಾಯಿಗೂ ಹೆಚ್ಚು
ಹರಿಯಾಣ ಮನೋಹರ್ ಲಾಲ್ 1 ಕೋಟಿಗೂ ಹೆಚ್ಚು
ಬಿಹಾರ ನಿತೀಶ್ ಕುಮಾರ್ 3 ಕೋಟಿ ರೂಪಾಯಿ
ದೆಹಲಿ ಅರವಿಂದ್ ಕೇಜ್ರಿವಾಲ್ 3 ಕೋಟಿ ರೂಪಾಯಿ ಆಸ್ತಿ
ಎಲ್ಲಾ ಮುಖ್ಯಮಂತ್ರಿಗಳ ಆಸ್ತಿಯ ವಿವರ ಇಲ್ಲಿದೆ
ಮುಖ್ಯಮಂತ್ರಿ ರಾಜ್ಯ ಆಸ್ತಿ
ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶ ₹510 ಕೋಟಿಗೂ ಹೆಚ್ಚು
ಪೆಮಾ ಖಂಡು ಅರುಣಾಚಲ ಪ್ರದೇಶ ₹163 ಕೋಟಿಗೂ ಹೆಚ್ಚು
ನವೀನ್ ಪಟ್ನಾಯಕ್ ಒಡಿಶಾ ₹63 ಕೋಟಿಗೂ ಹೆಚ್ಚು
ನೈಪು ರಿಯೊ ನಾಗಾಲ್ಯಾಂಡ್ ₹46 ಕೋಟಿಗೂ ಹೆಚ್ಚು
ಎನ್. ರಂಗಸಾಮಿ ಪುದುಚೇರಿ ₹38 ಕೋಟಿಗೂ ಹೆಚ್ಚು
ಕೆ.ಚಂದ್ರಶೇಖರ್ ರಾವ್ ತೆಲಂಗಾಣ ₹23 ಕೋಟಿಗೂ ಹೆಚ್ಚು
ಭೂಪೇಶ್ ಬಾಘೇಲ್ ಛತ್ತೀಸ್‌ಗಢ ₹23 ಕೋಟಿಗೂ ಹೆಚ್ಚು
ಹಿಮಂತ ಬಿಸ್ವಾ ಶರ್ಮಾ ಅಸ್ಸಾಂ ₹17 ಕೋಟಿಗೂ ಹೆಚ್ಚು
ಕಾನ್ರಾಡ್ ಸಂಗ್ಮಾ ಮೇಘಾಲಯ ₹15 ಕೋಟಿಗೂ ಹೆಚ್ಚು
ಮಾಣಿಕ್ ಸಹಾ ತ್ರಿಪುರ ₹13 ಕೋಟಿಗೂ ಹೆಚ್ಚು
ಏಕನಾಥ್ ಶಿಂಧೆ ಮಹಾರಾಷ್ಟ್ರ ₹11 ಕೋಟಿಗೂ ಹೆಚ್ಚು
ಪ್ರಮೋದ್ ಸಾವಂತ್ ಗೋವಾ ₹9 ಕೋಟಿಗೂ ಹೆಚ್ಚು
ಬಸವರಾಜ ಬೊಮ್ಮಾಯಿ ಕರ್ನಾಟಕ ₹8 ಕೋಟಿಗೂ ಹೆಚ್ಚು
ಎಂ.ಕೆ. ಸ್ಟಾಲಿನ್ ತಮಿಳುನಾಡು ₹8 ಕೋಟಿಗೂ ಹೆಚ್ಚು
ಹೇಮಂತ್ ಸೊರೇನ್ ಜಾರ್ಖಂಡ್ ₹8 ಕೋಟಿಗೂ ಹೆಚ್ಚು
ಭೂಪೇಂದ್ರ ಪಟೇಲ್ ಗುಜರಾತ್ ₹8 ಕೋಟಿಗೂ ಹೆಚ್ಚು
ಸುಖವಿಂದರ್ ಸಿಂಗ್ ಹಿಮಾಚಲ ಪ್ರದೇಶ ₹7 ಕೋಟಿಗೂ ಹೆಚ್ಚು
ಶಿವರಾಜ್ ಸಿಂಗ್ ಚೌಹಾಣ್ ಮಧ್ಯಪ್ರದೇಶ ₹7 ಕೋಟಿಗೂ ಹೆಚ್ಚು
ಅಶೋಕ್ ಗೆಹ್ಲೋಟ್ ರಾಜಸ್ಥಾನ ₹6 ಕೋಟಿಗೂ ಹೆಚ್ಚು
ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡ್ ₹4 ಕೋಟಿಗೂ ಹೆಚ್ಚು
ಪ್ರೇಮ್ ಸಿಂಗ್ ತಮಾಂಗ್ ಸಿಕ್ಕಿಂ ₹3 ಕೋಟಿಗೂ ಹೆಚ್ಚು
ಝೋರಮತಂಗ ಮಿಜೋರಾಂ ₹3 ಕೋಟಿಗೂ ಹೆಚ್ಚು
ಅರವಿಂದ್ ಕೇಜ್ರಿವಾಲ್ ದೆಹಲಿ ₹3 ಕೋಟಿಗೂ ಹೆಚ್ಚು
ನಿತೀಶ್ ಕುಮಾರ್ ಬಿಹಾರ ₹3 ಕೋಟಿಗೂ ಹೆಚ್ಚು
ಭಗವಂತ್ ಮಾನ್ ಪಂಜಾಬ್ ₹1 ಕೋಟಿಗೂ ಹೆಚ್ಚು
ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ₹1 ಕೋಟಿಗೂ ಹೆಚ್ಚು
ಎನ್.ಬಿರೇನ್ ಸಿಂಗ್ ಮಣಿಪುರ ₹1 ಕೋಟಿಗೂ ಹೆಚ್ಚು
ಮನೋಹರ್ ಲಾಲ್ ಖಟ್ಟರ್ ಹರಿಯಾಣ ₹1 ಕೋಟಿಗೂ ಹೆಚ್ಚು
ಪಿಣರಾಯಿ ವಿಜಯನ್ ಕೇರಳ ₹1 ಕೋಟಿಗೂ ಹೆಚ್ಚು
ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ₹15 ಲಕ್ಷಕ್ಕೂ ಹೆಚ್ಚು












Click it and Unblock the Notifications