'ಮಾಮ್‌' ಕಳಿಸಿದ ಮಂಗಳನ ಅಂಗಳದ ಚಿತ್ರಗಳು

ಬೆಂಗಳೂರು, ಸೆ. 25 : ಮಂಗಳನನ್ನು ತಲುಪಿರುವ 'ಮಾಮ್‌' ಈಗಾಗಲೇ ಕೆಲಸ ಆರಂಭಿಸಿದ್ದು ಅನೇಕ ಫೋಟೊಗಳನ್ನು ರವಾನಿಸಿದೆ. ಕೆಂಪು ಗ್ರಹದ ವಾತಾವರಣ ಅಧ್ಯಯನ ನಡೆಸುತ್ತಿರುವ ರೋಬೊಟಿಕ್ ಉಪಹ್ರಗ ಮಂಗಳನ ಮೇಲ್ಮೈ ಚಿತ್ರಗಳನ್ನು ರವಾನಿಸಿದೆ.

ಉಪಗ್ರಹದಿಂದ ನಾವು ಒಟ್ಟು ಐದು ಫೋಟೊಗಳನ್ನು ಪಡೆದುಕೊಂಡಿದ್ದು ಸಂಶೋಧನೆ ನಡೆಸಲಾಗುತ್ತಿದೆ. ಕೆಲ ಉತ್ತಮ ಚಿತ್ರಗಳನ್ನು ಮಾಧ್ಯಮದವರ ಮುಂದೆ ಬಹಿಡುಗಡೆ ಮಾಡುವ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ತೋರಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ. ಅಲ್ಲದೇ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಇಸ್ರೋ ಅಧಿಕೃತವಾಗಿ ಬರೆದುಕೊಂಡಿದೆ.(ದಿನಪತ್ರಿಕೆಗಳ ಮುಖಪುಟದಲ್ಲಿ 'ಮಂಗಳಯಾನ')

ಮಂಗಳನಲ್ಲಿಗೆ ಯಶಸ್ವಿಯಾಗಿ ಉಪಗ್ರಹ ಕಳಸಿದ ಏಷ್ಯಾದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆ ಪಡೆದುಕೊಂಡ ಭಾರತ ಅಮೇರಿಕ ರಷ್ಯಾ ಮತ್ತು ಯುರೋಪಿನ ದೇಶಗಳ ಸಾಲಿಗೆ ಸೇರಿದೆ. ಸೆ.24 ರಂದು ಕಳುಹಿಸಿದ ಉಪಗ್ರಹ ತಕ್ಷಣ ಕೆಲಸ ಆರಂಭಿಸಿದ್ದು ಅದು ಕಳಿಹಿಸಿರುವ ಫೋಟೋಗಳು...

ಟ್ವೀಟ್‌ ಮಾಡಿದ ಇಸ್ರೋ

ಮಂಗಳಯಾನ ಯಶಸ್ಸಿನ ಕುರಿತು ಟ್ವೀಟ್‌ ಮಾಡಿದ ಭಾರತೀಯ ಬಾಹ್ಯಾಕಾಶ ಸಂಸ್ಥೆ.

ಕೆಂಪು-ಕಪ್ಪು ಮಿಶ್ರಿತ ಮಂಗಳ ಗ್ರಹ

ಕೆಂಪು-ಕಪ್ಪು ಮಿಶ್ರಿತ ಮಂಗಳ ಗ್ರಹ

ಉಪಗ್ರಹ ಕಾರ್ಯನಿರತವಾಗಿದ್ದು ವಿಜ್ಞಾನಿಗಳಿಗೆ ಕಳುಹಿಸಿರುವ ಕೆಂಪು-ಕಪ್ಪು ಮಿಶ್ರಿತ ಮಂಗಳ ಗ್ರಹದ ಚಿತ್ರ.

ಈಗ ನೀವು ಮಂಗಳನಲ್ಲಿದ್ದೀರಿ

ಈಗ ನೀವು ಮಂಗಳನಲ್ಲಿದ್ದೀರಿ

ಇಸ್ರೋ ವಿಜ್ಞಾನಿಗಳ ಸತತ ಪರಿಶ್ರರಮದ ಕತೆ ಹೇಳುವ ಫೋಟೊ.

ಮಂಗಳನ ಸಮೀಪಕ್ಕೆ ತೆರಳಿದ ಮಾಮ್‌

ಮಂಗಳನ ಸಮೀಪಕ್ಕೆ ತೆರಳಿದ ಮಾಮ್‌

ಕೆಂಪು ಗ್ರಹದ ವಾತಾವರಣ ಅಧ್ಯಯನ ಮಾಡಲು ನಿರತವಾಗಿರುವ ಮಾಮ್‌.

ಮೊದಲ ಚಿತ್ರ ನೋಡಿದವರು ಪ್ರಧಾನ ಮಂತ್ರಿ

ಮೊದಲ ಚಿತ್ರ ನೋಡಿದವರು ಪ್ರಧಾನ ಮಂತ್ರಿ

ಮಾಮ್‌ ಕಳಿಸಿದ ಅತ್ಯುತ್ತಮ ಚಿತ್ರಗಳನ್ನು ಮೊದಲಿಗೆ ಪ್ರಧಾನಿ ನರೇಂದ್ರ ಮೋದಿಗೆ ತೋರಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+