59 ಲಕ್ಷ ಗಡಿ ದಾಟಿದ ಭಾರತದ ಕೊರೊನಾ ವೈರಸ್ ಪ್ರಕರಣ

ನವದೆಹಲಿ, ಸೆಪ್ಟೆಂಬರ್ 26: ದೇಶದ ಕೊರೊನಾ ವೈರಸ್ ಪ್ರಕರಣಗಳು 59 ಲಕ್ಷ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 85,362 ಹೊಸ ಪ್ರಕರಣ ದಾಖಲಾಗಿವೆ. 1089 ಮಂದಿ ಮೃತಪಟ್ಟಿದ್ದಾರೆ. ಇದರಿಂದ ದೇಶದ ಒಟ್ಟು ಕೊರೊನಾ ವೈರಸ್ ಪ್ರಕರಣಗಳು 59,03,933ಕ್ಕೆ ತಲುಪಿದೆ.

ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು 9,60,969ಕ್ಕೆ ತಲುಪಿದೆ. 24 ಗಂಟೆಯಲ್ಲಿ 48,49,585 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಸೆ. 25ರವರೆಗೂ 7,02,69,975 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಶುಕ್ರವಾರ 13,41,535 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಜಗತ್ತಿನಾದ್ಯಂತ ಕೊರೊನಾ ವೈರಸ್ ಸೋಂಕಿನ ಸಂಖ್ಯೆ 32.4 ಮಿಲಿಯನ್‌ಗೆ ದಾಟಿದೆ.

Indias Covid-19 Case Tally Crosses 59 Lakh Mark

ವಿಶ್ವದಲ್ಲಿ ಇರುವರೆಗೂ 9,87,593 ಕೊರೊನಾ ವೈರಸ್ ಸಾವುಗಳು ವರದಿಯಾಗಿದ್ದು, ಒಂದು ಮಿಲಿಯನ್ ಸನಿಹಕ್ಕೆ ಬಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಮೆಟ್ರೋ ನಗರಗಳ ಪೈಕಿ ಬೆಂಗಳೂರಿನಲ್ಲಿ ಅತ್ಯಧಿಕ ಪ್ರಕರಣಗಳು ದಾಖಲಾಗಿವೆ. ದೇಶದ ಒಂಬತ್ತು ಅತಿ ದೊಡ್ಡ ಮೆಟ್ರೊಪಾಲಿಸ್‌ಗಳ ಪೈಕಿ ಅತಿ ಹೆಚ್ಚು ಪ್ರಕರಣ ಮತ್ತು ಸಾವುಗಳು ಪುಣೆಯಲ್ಲಿ ದಾಖಲಾಗಿದ್ದರೂ, ಬೆಂಗಳೂರು ಅದನ್ನು ಹಿಂದಿಕ್ಕುವ ಭೀತಿ ಉಂಟಾಗಿದೆ.

ಜಗತ್ತಿಗೆ ಪರಿಣಾಮಕಾರಿ ಲಸಿಕೆ ದೊರೆತು, ಅದರ ವ್ಯಾಪಕ ಬಳಕೆಯಾಗುವ ವೇಳೆಗೆ ಒಟ್ಟಾರೆ ಸಾವಿನ ಸಂಖ್ಯೆ ಇಪ್ಪತ್ತು ಲಕ್ಷ ದಾಟುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+