ಭಾರತದಲ್ಲಿ ಮುಂದುವರಿದ ಹಸಿವಿನ ಹೋರಾಟ: ಜಾಗತಿಕ ಸ್ಥಾನ, ಅಂಕಿ-ಅಂಶ ತಿಳಿಯಿರಿ
ನವದೆಹಲಿ, ಜುಲೈ 24: ಭಾರತವು ಹಸಿರು ಕ್ರಾಂತಿಯನ್ನು ಪ್ರಾರಂಭಿಸಿ ಐದು ದಶಕಗಳು ಉರುಳಿದರೂ ಸಹ ದೇಶದಲ್ಲಿ ಹಸಿವಿನ ವಿರುದ್ಧದ ಹೋರಾಟ ಇನ್ನೂ ನಿಂತಿಲ್ಲ, ಸಮರ್ಪಕ ಆಹಾರ ಸಿಗದ ಕಾರಣ ಹಸಿವಿನಿಂದ ಮಲಗುವ ಬಡವರು ದೇಶದಲ್ಲಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ.
1951 ರಲ್ಲಿ ವರ್ಷಕ್ಕೆ ನಿವ್ವಳ ಲಭ್ಯತೆಯು ತಲಾ 144 ಕೆಜಿ ಇತ್ತು, ಅದು 1971 ರಲ್ಲಿ ಕೇವಲ 171 ಕೆಜಿಗೆ ಏರಿಕೆ ಆಯಿತು. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು 121 ದೇಶಗಳಲ್ಲಿ 2021 ರಲ್ಲಿ 101 ಕ್ಕೆ ಇತ್ತು, ಅದು 2022 ರಲ್ಲಿ 107 ಕ್ಕೆ ಕುಸಿಯಿತು. ಇದು ಹಸಿರು ಕ್ರಾಂತಿಯ ಹೊರತಾಗಿಯೂ ಭಾರತದಲ್ಲಿ ಹಸಿವಿನಿಂದ ಮಲಗುವವರು ಇದ್ದಾರೆ ಎಂದು ಸಾರಿ ಹೇಳಿತು ಎಂದು ಡಿಎಚ್ ವರದಿ ಮಾಡಿದೆ.

ಭಾರತದ ಒಟ್ಟು ಆಹಾರ ಉತ್ಪಾದನೆಯಲ್ಲಿನ ಹೆಚ್ಚಳವು ಅಪೌಷ್ಟಿಕತೆಯ ಪ್ರಮಾಣಾನುಗುಣವಾದ ಇಳಿಕೆಗೆ ಅನುವಾದಿಸಲ್ಪಟ್ಟಿಲ್ಲ. ಕಳೆದ 2-3 ದಶಕಗಳಲ್ಲಿ, ಆರ್ಥಿಕ ಬೆಳವಣಿಗೆಯ ಹೆಚ್ಚಿನ ದರಗಳು ಇಳಿಮುಖವಾಗುತ್ತಿದೆ. ಬಡತನವು ಜನಸಂಖ್ಯೆಯ ಸುಮಾರು 15 ಪ್ರತಿಶತದಷ್ಟು ಅಪೌಷ್ಠಿಕತೆಯ ಸಂಖ್ಯೆ ಹೆಚ್ಚಳ ಕಾರಣವಾಯಿತು.
ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ (IFPRI) 2018ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ (GHI) ವ ಭಾರತ ದೇಶ 103ನೇ ಸ್ಥಾನ ಪಡೆದುಕೊಂಡಿದೆ. ಅಂದರೆ ವಿಶ್ವದಲ್ಲಿಯೇ ಅಧಿಕ ಅಪೌಷ್ಠಿಕತೆಯಿಂದ ಬಳಲುತ್ತಿರುವವರು ನಮ್ಮ ದೇಶದಲ್ಲಿದ್ದಾರೆ ಎಂಬ ಸೂಚನೆ ಇದಾಗಿದೆ.
ಮಕ್ಕಳಲ್ಲಿ ಅಪೌಷ್ಠಿಕತೆ ಅಧಿಕ
ಭಾರತದಲ್ಲಿ ಅಪೌಷ್ಠಿಕತೆ ಪ್ರಮಾಣ ಐದು ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ಕೇಂದ್ರೀಕೃತವಾಗಿದೆ ಎಂದು ತಿಳಿದು ಬಂದಿದೆ. 2018 ರ ಜಾಗತಿಕ ಪೌಷ್ಠಿಕಾಂಶ ವರದಿ ಪ್ರಕಾರ, 2015 ರಲ್ಲಿ ಐದು ವರ್ಷದೊಳಗಿನ ಎಲ್ಲಾ ಮಕ್ಕಳಲ್ಲಿ ಸುಮಾರು 21 ಪ್ರತಿಶತದಷ್ಟು ಅಪೌಷ್ಠಿಕತೆ ಕಂಡು ಬಂದಿದೆ ಎಂದು ತಿಳಿಸಿದೆ.

ಇನ್ನೂ ಕ್ಯಾಲೋರಿಗಳ ಅತೀಯಾದ ಸೇವನೆಯಿಂದಾಗಿ ವಯಸ್ಕರು, ಹದಿಹರೆಯದವರು ಮತ್ತು ಮಕ್ಕಳಲ್ಲಿ ಸ್ಥೂಲಕಾಯ ಪರಿಣಾಮ ಉಂಟಾಗುತ್ತಿದೆ. ಇದು ಕೊನೆಗೆ ಮಧುಮೇಹ ರೂಪಕ್ಕೆ ತಿರುಗುತ್ತದೆ. ಬಡತನವು ರಾಷ್ಟ್ರಮಟ್ಟಕ್ಕೆ ಹೋಲಿಕೆ ಮಾಡಿದರೆ ಗ್ರಾಮೀಣ ಭಾಗದಲ್ಲಿ ಶೇಕಡಾ 25 ರಷ್ಟಿದ್ದರೆ, ನಗರ ಪ್ರದೇಶಗಳಲ್ಲಿ 14 ಪ್ರತಿಶತದಷ್ಟಿದೆ. ಇದು ಸಹ ಮಕ್ಕಳ ಅಪೌಷ್ಠಿಕತೆಗೆ ಕಾರಣವಾಗಿದೆ.
ಭಾರತ ಕೃಷಿ ಕುಟುಂಬಗಳಲ್ಲಿ ಬಡತನ
ಭಾರತದಲ್ಲಿರುವ ಕೃಷಿ ಕುಟುಂಬಗಳು ಸಹ ಶೇಕಡಾ 50 ರಷ್ಟು ಬಡತನ ಎದುರಿಸುತ್ತಿವೆ. ಕೃಷಿ ಉತ್ಪಾದಕರು ಮತ್ತು ಗ್ರಾಹಕರ ನಡುವಿನ ವ್ಯಾಪಾರದ ನಿಯಮಗಳನ್ನು ಬದಲಾಯಿಸಲು ಮತ್ತು ಕೃಷಿ ವಲಯದಲ್ಲಿ ಸಮರ್ಪಕವಾಗಿ ಹೂಡಿಕೆ ಮಾಡಲು ಸರ್ಕಾರ ವಿಫಲವಾಗಿದೆ. ಬಡತನ, ಅಪೌಷ್ಠಿಕತೆ, ಹಸಿವಿಗೆ ಇದು ಪ್ರಮುಖ ಕಾರಣವಾಗಿದೆ.
ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) ಮತ್ತು ಇಂಡಿಯನ್ ಕೌನ್ಸಿಲ್ ಫಾರ್ ರಿಸರ್ಚ್ ಆನ್ ಇಂಟರ್ನ್ಯಾಷನಲ್ ಎಕನಾಮಿಕ್ ರಿಲೇಶನ್ಸ್ (ICRIER) ಇತ್ತೀಚಿನ ಅಧ್ಯಯನ ನಡೆಸಿದೆ. ಅದರ ಪ್ರಕಾರ ಕಳೆದ 18 ವರ್ಷಗಳಲ್ಲಿ, ಭಾರತವು ನಗರ ಪ್ರದೇಶದ ಗ್ರಾಹಕರಿಗೆ ಆಹಾರದ ಬೆಲೆಗಳನ್ನು ಕಡಿಮೆ ಮಾಡುವ ಮೂಲಕ ಕೃಷಿಯ ಮೇಲೆ ಶೇಕಡಾ 14 ರಷ್ಟು ದರದಲ್ಲಿ ಸೂಚ್ಯವಾಗಿ ಎಂದು ಹೇಳಿದೆ.
ಕೃಷಿಯಲ್ಲಿ ಹೂಡಿಕೆ ಇಳಿಕೆ
1981 ರಿಂದ 2014 ರವರೆಗೆ, ಕೃಷಿ ಮತ್ತು ನೀರಾವರಿಯಲ್ಲಿ ಸಾರ್ವಜನಿಕ (ಕೇಂದ್ರ ಮತ್ತು ರಾಜ್ಯಗಳ) ಹೂಡಿಕೆಯ ಬೆಳವಣಿಗೆಯು ಅನುಕ್ರಮವಾಗಿ ಶೇಕಡಾ 4.6ರಿಂದ ಶೇಕಡಾ 4 ಕ್ಕೆ ಇಳಿಕೆ ಆಗಿದೆ. ಇದು ಅಭಿವೃದ್ಧಿಯ ತುಲನಾತ್ಮಕ ಮಟ್ಟದಲ್ಲಿ ಚೀನಾದ ಹೂಡಿಕೆಗಿಂತಲೂ ಕಡಿಮೆ ಆಗಿದೆ.
1975 ರಲ್ಲಿ ಪ್ರಾರಂಭವಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮತ್ತು 1995 ರಲ್ಲಿ ಪರಿಚಯಿಸಲಾದ ಮಧ್ಯಾಹ್ನದ ಊಟದ ಯೋಜನೆಗಳಂತಹ ಮಕ್ಕಳ ಪೋಷಣೆಯ ಕಾರ್ಯಕ್ರಮಗಳು ಸಾರ್ವಜನಿಕ ವಿತರಣಾ ಯೋಜನೆಯ ಕ್ಯಾಲೋರಿಗಳ ಸಮಸ್ಯೆಯನ್ನು ಸರಿಪಡಿಸಿಲ್ಲ. ಸಬ್ಸಿಡಿ ಅಕ್ಕಿ ಮತ್ತು ಗೋಧಿಯ ಮೇಲಿನ ಅವಲಂಬನೆ ಉಂದುವರಿದಿದೆ. ಪೌಷ್ಠಿಕ ಆಹಾರಗಳ ಲಭ್ಯತೆ ಕಡಿಮೆ ಇದೆ ಎನ್ನಲಾಗಿದೆ.
ಪ್ರಪಂಚದಾದ್ಯಂತದ ಸಂಸದರು ಕೃಷಿ ಆಹಾರ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲು ಬಹುಪಕ್ಷೀಯ ಸಂಸ್ಥೆಯನ್ನು ರಚಿಸಲು ಒಗ್ಗೂಡುತ್ತಿದ್ದಾರೆ. 2018 ರಲ್ಲಿ ಸ್ಪೇನ್‌ನಲ್ಲಿ ನಡೆದ ಹಸಿವು ಮತ್ತು ಅಪೌಷ್ಟಿಕತೆಯ ಕುರಿತಾದ ಮೊದಲ ಶೃಂಗಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಕೋವಿಡ್ ಕಾಲದಲ್ಲೂ ಒಂದಷ್ಟು ಸಮಸ್ಯೆಗಳು ಎದುರಾದವು.
ಇದೇ 2023ರ ಕಳೆದ ಜೂನ್ 16 ರಂದು ಚಿಲಿಯಲ್ಲಿ ನಡೆದ ಎರಡನೇ 'ಹಸಿವು ಮತ್ತು ಅಪೌಷ್ಟಿಕತೆಯ ವಿರುದ್ಧದ ಜಾಗತಿಕ ಸಂಸದೀಯ ಶೃಂಗಸಭೆ'ಯಲ್ಲಿ, 200 ಸಂಸದರು ಮತ್ತು 64 ದೇಶಗಳ ಅರ್ಧ ಡಜನ್‌ಗಿಂತಲೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಆಹಾರ ಲಭ್ಯತೆಯನ್ನು ಸಮರ್ಪಕ ಲಭ್ಯತೆ ಕುರಿತು ಚರ್ಚಿಸಿ ಪ್ರಮುಖ ನೀರ್ಧಾರಗಳನ್ನು ಕೈಗೊಂಡರು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications