• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2020ರಲ್ಲಿ ಭಾರತೀಯರು ಶೇಕಡಾ 39ರಷ್ಟು ಹೆಚ್ಚಿನ ಸಮಯವನ್ನು ಮೊಬೈಲ್‌ ಫೋನ್‌ಗಾಗಿ ಕಳೆದಿದ್ದಾರೆ

|

ನವದೆಹಲಿ, ಜನವರಿ 18: ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ವಿಶ್ವದಾದ್ಯಂತ ಜನರು ಹೆಚಿನ್ನ ಸಮಯವನ್ನು ಮನೆಯಲ್ಲಿಯೇ ಕಳೆಯುವಂತಾಗಿತ್ತು. ಕಳೆದರು. ಇದ್ರಿಂದ ಅನಿವಾರ್ಯವಾಗಿ ಟಿವಿ, ಕಂಪ್ಯೂಟರ್, ಲ್ಯಾಪ್‌ಟಾಪ್ ಕಡೆಗೆ ಹೆಚ್ಚಿನ ಸಮಯವನ್ನ ಜನರು ಮೀಸಲಿಟ್ಟರು.

ಕಳೆದ ವರ್ಷ ಅತಿ ಹೆಚ್ಚು ಡೇಟಾ ಬಳಕೆಯ ಜೊತೆಗೆ, ಜಾಗತಿಕವಾಗಿ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ 218 ಬಿಲಿಯನ್ ಹೊಸ ಆ್ಯಪ್ ಡೌನ್‌ಲೋಡ್‌ಗಳು ಆಗಿವೆ. ಇದು 2019 ಕ್ಕೆ ಹೋಲಿಸಿದರೆ ಶೇಕಡಾ 7 ರಷ್ಟು ಹೆಚ್ಚಾಗಿದೆ

ಚೀನಾ-ಭಾರತದಲ್ಲಿ ಅತಿ ಹೆಚ್ಚು ಅಪ್ಲಿಕೇಶನ್ ಡೌನ್‌ಲೋಡ್‌

ಚೀನಾ-ಭಾರತದಲ್ಲಿ ಅತಿ ಹೆಚ್ಚು ಅಪ್ಲಿಕೇಶನ್ ಡೌನ್‌ಲೋಡ್‌

''ಸ್ಟೇಟ್ ಆಫ್ ಮೊಬೈಲ್ 2021'' ವರದಿ ಪ್ರಕಾರ ಚೀನಾದಲ್ಲಿ 96.2 ಬಿಲಿಯನ್‌ ಆ್ಯಪ್ ಡೌನ್‌ಲೋಡ್‌ ಆಗಿದ್ದರೆ, ಭಾರತದಲ್ಲಿ 24.27 ಬಿಲಿಯನ್ ಡೌನ್‌ಲೋಡ್‌ ಆಗಿದೆ.

251 ರೂಗೆ ಸ್ಮಾರ್ಟ್ ಫೋನ್ ಆಯ್ತು, ಈಗ ಡ್ರೈಫ್ರೂಟ್ ಮಾರಾಟದಲ್ಲಿ ಕೋಟ್ಯಂತರ ರೂಪಾಯಿ ವಂಚನೆ251 ರೂಗೆ ಸ್ಮಾರ್ಟ್ ಫೋನ್ ಆಯ್ತು, ಈಗ ಡ್ರೈಫ್ರೂಟ್ ಮಾರಾಟದಲ್ಲಿ ಕೋಟ್ಯಂತರ ರೂಪಾಯಿ ವಂಚನೆ

ಪರಿಣಾಮವಾಗಿ, ಜನರು ಹಿಂದೆಂದಿಗಿಂತಲೂ ಹೆಚ್ಚು ಸಮಯವನ್ನು ಮೊಬೈಲ್ ಫೋನ್‌ ಮುಂದೆ ಕಳೆದಿದ್ದಾರೆ.

ಭಾರತದಲ್ಲಿ ಮೊಬೈಲ್ ಬಳಕೆಯ ಸಮಯ ಶೇಕಡಾ 39ರಷ್ಟು ಏರಿಕೆ

ಭಾರತದಲ್ಲಿ ಮೊಬೈಲ್ ಬಳಕೆಯ ಸಮಯ ಶೇಕಡಾ 39ರಷ್ಟು ಏರಿಕೆ

ಭಾರತದಲ್ಲಿ 2019ರಲ್ಲಿ ದಿನಕ್ಕೆ ಸರಾಸರಿ 3.3 ಗಂಟೆಯಷ್ಟು ಸಮಯವನ್ನು ಜನರು ಮೊಬೈಲ್‌ಗಾಗಿ ಕಳೆದಿದ್ದರು. ಆದರೆ 2020 ರಲ್ಲಿ 4.6 ಗಂಟೆಗಳವರೆಗೆ ಅಥವಾ ಶೇಕಡಾ 39.4 ರಷ್ಟು ಹೆಚ್ಚು ಸಮಯವನ್ನು ವ್ಯಯ ಮಾಡಿದ್ದಾರೆ.

ಪ್ರಪಂಚದಲ್ಲಿ ಅತಿ ಹೆಚ್ಚು ಅಂದ್ರೆ ಇಂಡೋನೇಷ್ಯಾದಲ್ಲಿ ಜನರು 5.2 ಗಂಟೆ ಕಾಲ ದಿನಕ್ಕೆ ಮೊಬೈಲ್ ಮುಂದೆ ಕಳೆದಿದ್ದು, ಜಗತ್ತಿನಲ್ಲೇ ಅಗ್ರಸ್ಥಾನದಲ್ಲಿ ಮುಂದುವರೆದರೆ , ಬ್ರೆಜಿಲ್ ದಿನಕ್ಕೆ 4.8 ಗಂಟೆಯ ಮೂಲಕ ದ್ವಿತೀಯ ಸ್ಥಾನದಲ್ಲಿದೆ. ಮೊದಲ ಬಾರಿಗೆ, ಅಮೆರಿಕನ್ನರು ತಮ್ಮ ಮೊಬೈಲ್ ಮುಂದೆ (4 ಗಂಟೆ) ಹೆಚ್ಚು ಸಮಯವನ್ನು ಕಳೆದಿದ್ದು, ನಂತರದಲ್ಲಿ ಟಿವಿ ಮುಂದೆ ದಿನಕ್ಕೆ 3.7 ಗಂಟೆಗಳ ಕಾಲ ಕಳೆದರು.

ಲಾಕ್‌ಡೌನ್‌ ವೇಳೆ ಹೆಚ್ಚು ಮೀಟಿಂಗ್ ಅಪ್ಲಿಕೇಶನ್‌ಗಳ ಬಳಕೆ

ಲಾಕ್‌ಡೌನ್‌ ವೇಳೆ ಹೆಚ್ಚು ಮೀಟಿಂಗ್ ಅಪ್ಲಿಕೇಶನ್‌ಗಳ ಬಳಕೆ

ಲಾಕ್‌ಡೌನ್‌ ಘೋಷಿಸಿದ ಕೂಡಲೇ, ವಿಶ್ವದ ಹಲವೆಡೆಯಿಂದ ಜನರು ಸಂಪರ್ಕ ಸಾಧಿಸಲು ಜೂಮ್, ವೆಬೆಕ್ಸ್ ಮತ್ತು ಗೂಗಲ್ ಮೀಟ್‌ನಂತಹ ಬಿಜಿನೆಸ್ ಅಪ್ಲಿಕೇಶನ್‌ಗಳನ್ನು ಬಳಸಿದ್ದಾರೆ. ಭಾರತದಲ್ಲಿ 2020ರ ತೃತೀಯ ತ್ರೈಮಾಸಿಕದಲ್ಲಿ ಆಂಡ್ರಾಯ್ಡ್ ಫೋನ್‌ಗಳಲ್ಲಿ ಬಿಜಿನೆಸ್ ಅಪ್ಲಿಕೇಶನ್‌ಗಳಲ್ಲಿನ ಬಳಕೆಯು 3 ಬಿಲಿಯನ್ ಗಂಟೆಗಳ ಸಮಯ ತಲುಪಿದೆ.

Mi 10i ಸ್ಮಾರ್ಟ್‌ಫೋನ್‌ ಬಿಡುಗಡೆ: ಬೆಲೆ, ಫೀಚರ್ಸ್ ಏನು?Mi 10i ಸ್ಮಾರ್ಟ್‌ಫೋನ್‌ ಬಿಡುಗಡೆ: ಬೆಲೆ, ಫೀಚರ್ಸ್ ಏನು?

ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳ ಬಳಕೆಯಲ್ಲಿ ತೀವ್ರ ಏರಿಕೆ

ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳ ಬಳಕೆಯಲ್ಲಿ ತೀವ್ರ ಏರಿಕೆ

ಪ್ರಪಂಚದಾದ್ಯಂತ, 2020 ರಲ್ಲಿ ಹಣಕಾಸು ಅಪ್ಲಿಕೇಶನ್‌ಗಳಲ್ಲಿ ಚೀನಾವನ್ನು ಹೊರತುಪಡಿಸಿ ಶೇಕಡಾ 45 ರಷ್ಟು ಸಮಯದ ಬಳಕೆ ಹೆಚ್ಚಾಗಿದೆ. ಭಾರತದಲ್ಲಿ, ಹಣಕಾಸು ಅಪ್ಲಿಕೇಶನ್‌ಗಳ ಡೌನ್‌ಲೋಡ್‌ನಲ್ಲಿ ಶೇಕಡಾ 25 ರಷ್ಟು ಹೆಚ್ಚಳ ಕಂಡುಬಂದಿದೆ.

ಲಾಕ್‌ಡೌನ್ ವೇಳೆ ವೀಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳ ಬಳಕೆಯಲ್ಲೂ ತೀವ್ರ ಏರಿಕೆ ದಾಖಲಾಗಿದೆ. 2019 ರ ವಿರುದ್ಧವಾಗಿ 2020 ರ ಕೊನೆಯ ತ್ರೈಮಾಸಿಕದಲ್ಲಿ ಭಾರತವು ಪ್ರಸಾರವಾದ ಗಂಟೆಗಳಲ್ಲಿ ಶೇಕಡಾ 33 ರಷ್ಟು ಹೆಚ್ಚಳ ಕಂಡಿದೆ. ಯೂಟ್ಯೂಬ್ ನಂತರ ಎಂಎಕ್ಸ್ ಪ್ಲೇಯರ್ ಮತ್ತು ನೆಟ್‌ಫ್ಲಿಕ್ಸ್‌ ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗಿದೆ.

English summary
The App Annie's 'State of Mobile 2021 Report'. In 2020, there were 218 billion new app downloads across platforms globally, a 7 per cent increase over 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X