ಚೀನಿಯರಿಗಿಂತ ಭಾರತೀಯರು ಸೋಮಾರಿಗಳು: ದಲೈ ಲಾಮಾ

ಭಾರತೀಯರು ಚೀನಿಯರಿಗಿಂತ ಸೋಂಬೇರಿಗಳು. ಆದರೆ ಈ ದೇಶ ಹೆಚ್ಚು ಸ್ಥಿರವಾಗಿದೆ ಮತ್ತು ವಿಧ ಸಂಸ್ಕೃತಿಗಳಿಗೆ ಜೀವಂತ ಉದಾಹರಣೆಯಾಗಿದೆ ಎಂದು ಟಿಬೆಟನ್ ಧರ್ಮಗುರು ಆಧ್ಯಾತ್ಮಿಕ ನಾಯಕರಾದ ದಲೈ ಲಾಮಾ ಗುರುವಾರ ಅಭಿಪ್ರಾಯ ಪಟ್ಟಿದ್ದಾರೆ.

ಭಾರತೀಯ ವಾಣಿಜ್ಯ ಒಕ್ಕೂಟ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾರತ ಹಾಗೂ ಚೀನಾ ಜನರ ಮಧ್ಯೆ ಹೋಲಿಕೆ ಮಾಡಿದರು. ಚೀನಿಯರಿಗೆ ಹೋಲಿಸಿದರೆ ಭಾರತೀಯರು ಸೋಮಾರಿಗಳು ಎಂದು ಅವರು ಹೇಳಿದರು.

ಬಹುಶಃ ಆ ಗುಣಕ್ಕೆ ಇಲ್ಲಿನ ವಾತಾವರಣ ಕಾರಣ. ಆದರೆ ಭಾರತ ಸ್ಥಿರವಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತ ತನ್ನ ಪಾತ್ರ ವಹಿಸಬಹುದು. ವಿವಿಧ ಧರ್ಮಗಳವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವ ಈ ದೇಶದಲ್ಲಿ ಸಹಿಷ್ಣುತೆ ಇದೆ ಎಂದು ಅವರು ಅಭಿಪ್ರಾಯ ಪಟ್ಟರು.

Dalai Lama

ಧಾರ್ಮಿಕ ಸಹಿಷ್ಣುತೆ ಬಹಳ ಮುಖ್ಯ. ಕೆಲ ಬಾರಿ ರಾಜಕಾರಣಿಗಳು ಆ ಧಾರ್ಮಿಕ ಸಾಮರಸ್ಯವನ್ನು ಕದಡಿ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಕಳೆದ ಕೆಲವು ಶತಮಾನಗಳಿಂದ ಹಿಂದೂ, ಬೌದ್ಧರು, ಸಿಖ್ಖರು, ಕ್ರೈಸ್ತರು ಮತ್ತು ಇಸ್ಲಾಮ್ ಸೇರಿದಂತೆ ಇತರ ಧರ್ಮೀಯರು ಇಲ್ಲಿ ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ ಎಂದರು.

ದೋಕ್ಲಾಂ ಸಮಸ್ಯೆ ಬಗ್ಗೆ ಮಾತನಾಡಿದ ಅವರು, ಅವೆಲ್ಲ ಸಣ್ಣ ಸಮಸ್ಯೆ. ಚೀನಾ ಸೇನೆ ಬರಬೇಕು. ಆಗ ಗುಂಡಿನ ಚಕಮಕಿ. ಆ ನಂತರ ಸೇನೆ ವಾಪಸ್ ಕರೆಸಬೇಕು. ಅದು ಸುಲಭವಲ್ಲ. ಹಿಂದಿ-ಚೀನಿ ಭಾಯಿ ಭಾಯಿ ಎಂಬ ಮನೋಭಾವ ಅಗತ್ಯವಿದೆ ಎಂದು ಹೇಳಿದರು.

ಭಾರತೀಯರ ನಗು ಸಾಚಾತನದಿಂದ ಕೂಡಿರುತ್ತದೆ. ಆದರೆ ಚೀನಾ ಅಧಿಕಾರಿಗಳ ನಗು ಕೃತಕವಾಗಿರುತ್ತದೆ ಎಂದು ಲಘು ಹಾಸ್ಯದ ಧಾಟಿಯಲ್ಲಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+