• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವೈರಸ್: ಮೃತರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು

|

ನವದೆಹಲಿ, ಜೂನ್ 10: ಕೊರೊನಾ ವೈರಸ್ ಎನ್ನುವ ಮಹಾಮಾರಿ ದೇಶಕ್ಕೆ ಹಬ್ಬುತ್ತಿದ್ದಂತೆ ಭಾರತದಲ್ಲಿ ಈ ಸೋಂಕು ಮಹಿಳೆಯರಿಗಿಂತ ಪುರುಷರಲ್ಲೇ ಹೆಚ್ಚು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿತ್ತು.

      June is going to be a menacing month in terms of Corona | Oneindia Kannada

      ಆದರೆ ಈಗ ಮಂದಿರುವ ವರದಿ ಪ್ರಕಾರ ಸೋಂಕಿತರಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚಿದ್ದರೂ ಕೂಡ ಮೃತಪಟ್ಟವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ.

      ಭಾರತದಲ್ಲಿ ಕೊರೊನಾ ಆಕ್ಟೀವ್ ಪ್ರಕರಣಗಳಿಗಿಂತ ಡಿಸ್ಚಾರ್ಜ್ ಆದವರೇ ಹೆಚ್ಚು

      ದೇಶದಲ್ಲಿ ಒಟ್ಟಾರೆ ಕೊವಿಡ್-19 ಸೋಂಕಿತರ ಪೈಕಿ ಪುರುಷರ ಸಂಖ್ಯೆ ಹೆಚ್ಚಿದ್ದರೆ, ಸೋಂಕಿನಿಂದಾಗಿ ಸಾವನ್ನಪ್ಪುತ್ತಿರುವವರ ಪೈಕಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಇದು ಜಾಗತಿಕ ಪ್ರವೃತ್ತಿಗೆ ವಿರುದ್ಧವಾಗಿದೆ ಎಂದು ಅಧ್ಯಯನ ತಿಳಿಸಿದೆ.

      ಸೋಂಕಿತರ ಪೈಕಿ 40-49 ವರ್ಷ ವರ್ಷದ ಶೇ.3.2 ಮಹಿಳೆಯರು ಮೃತಪಟ್ಟರೆ, ಶೇ. 2.1 ರಷ್ಟು ಪುರುಷರು ಕೊರೋನಾ ಬಲಿಯಾಗಿದ್ದಾರೆ. ಅಲ್ಲದೆ ಈ ಸಾಂಕ್ರಾಮಿಕ ಕಾಯಿಲೆಗೆ 5-19 ವರ್ಷ ವರ್ಷದ ಮಹಿಳೆಯರು ಮಾತ್ರ ಬಲಿಯಾಗಿದ್ದಾರೆ ಎಂದು ಅಧ್ಯಯನ ವಿವರಿಸಿದೆ.

      ದೇಶದಲ್ಲಿ ಕೊರೋನಾ ವೈರಸ್ ನಿಂದ ಶೇಕಡಾ 3.3 ರಷ್ಟು ಮಹಿಳೆಯರು ಹಾಗೂ ಶೇ. 2.9 ರಷ್ಟು ಪುರುಷರು ಮೃತಪಟ್ಟಿದ್ದಾರೆ ಎಂಬುದು ದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋತ್, ಜೈಪುರದ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮ್ಯಾನೇಜ್‌ಮೆಂಟ್ ರಿಸರ್ಚ್ ಮತ್ತು ಯುಎಸ್‌ನ ಹಾರ್ವರ್ಡ್ ಯೂನಿವರ್ಸಿಟಿ ನಡೆಸಿದ ಸಂಶೋಧನೆಯಿಂದ ಸ್ಪಷ್ಟವಾಗಿದೆ.

      ಇತರೆ ದೇಶಗಳಲ್ಲಿ ಮಹಾಮಾರಿ ಕೊರೋನಾ ವೈರಸ್ ಗೆ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಬಲಿಯಾಗಿದ್ದಾರೆ. ಆದರೆ ಭಾರತದಲ್ಲಿ ಮಾತ್ರ ಕೊವಿಡ್ -19 ಸಾವಿನ ಪ್ರಮಾಣವೂ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ ಎಂಬುದು ಅಧ್ಯಯನವೊಂದರಿಂದ ಬಹಿರಂಗಗೊಳಿಸಿದೆ.

      English summary
      The biological advantage of greater protection from COVID-19 deaths that women in most other countries have seems to be completely missing for females in India.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X