• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಕ್ಷಿಣ ಚೀನಾ ಸಮುದ್ರಕ್ಕೆ ಲಗ್ಗೆಯಿಟ್ಟ ಭಾರತೀಯ ಯುದ್ಧನೌಕೆ

|

ನವದೆಹಲಿ, ಆಗಸ್ಟ್.30: ಭಾರತ-ಚೀನಾ ಗಡಿಯ ಗಾಲ್ವಾನ್ ಪೂರ್ವ ಭಾಗದಲ್ಲಿ ಸಂಘರ್ಷ ನಡೆದು 2 ತಿಂಗಳಿನಲ್ಲಿ ಭಾರತೀಯ ನೌಕಾಪಡೆ ಫೀಲ್ಡ್ ಗೆ ಇಳಿದಿದೆ. ದೇಶದ ನೌಕಾಸೇನೆಯಲ್ಲಿ ಇರುವ ಒಂದು ಯುದ್ಧನೌಕೆಯನ್ನು ದಕ್ಷಿಣ ಚೀನಾ ಸಮುದ್ರಕ್ಕೆ ರವಾನಿಸಲಾಗಿದೆ.

ಗಡಿಯಲ್ಲಿ ಚೀನಾದ ರಸ್ತೆ: ಭಾರತದ ಆತಂಕಕ್ಕೆ ಕಾರಣವೇನು?

ದಕ್ಷಿಣ ಚೀನಾದ ಸಮುದ್ರ ಪ್ರದೇಶದಲ್ಲಿ ನಾವು ಭಾರತೀಯ ಯುದ್ಧನೌಕೆಯನ್ನು ನಿಯೋಜನೆ ಮಾಡಿದೆವು. ಆದರೆ ಇದಕ್ಕೆ ಚೀನಾ ತೀವ್ರವಾಗಿ ವಿರೋಧ ವ್ಯಕ್ತಪಡಿಸಿತು ಎಂದು ಭಾರತೀಯ ಉನ್ನತ ಅಧಿಕಾರಿಗಳು ಇಂಡಿಯಾ ಟುಡೆಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಲಡಾಖ್ ನಲ್ಲಿ ಭಾರತೀಯ ಸೇನೆಗಾಗಿ ಗೌಪ್ಯ ರಸ್ತೆ ಮಾರ್ಗ!

ಅಮೆರಿಕಾದ ನೌಕೆಗಳು ಕೂಡಾ ದಕ್ಷಿಣ ಚೀನಾದ ಮತ್ತೊಂದು ತೀರದಲ್ಲಿ ನಿಯೋಜಿಸಲ್ಪಟ್ಟಿವೆ. ಈ ಅಮೆರಿಕಾದ ಯುದ್ಧನೌಕೆಗಳ ಜೊತೆಗೆ ಸಂಪರ್ಕ ಸಾಧಿಸುವ ಉದ್ದೇಶದಿಂದ ಭಾರತೀಯ ಯುದ್ಧನೌಕೆಯನ್ನು ನಿಯೋಜಿಸಲಾಗಿದೆ. ಇದು ಚೀನಾದ ನಿದ್ದೆಗೆಡುವಂತೆ ಮಾಡಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ವಿವಾದಿತ ಪ್ರದೇಶದಲ್ಲಿ ಯುದ್ಧನೌಕೆ ಬಗ್ಗೆ ದೂರು:

ಭಾರತೀಯ ನೌಕಾಪಡೆಯು ಯುದ್ಧನೌಕೆಯನ್ನು ನಿಯೋಜಿಸಿಸಿರುವುದು ಚೀನಾದ ಕಣ್ಣು ಕೆಂಪಾಗಿಸಿದೆ. ಭಾರತ ಮತ್ತು ಚೀನಾ ನಡುವೆ ಒಂದು ಸುತ್ತಿನ ರಾಜತಾಂತ್ರಿಕ ಮಾತುಕತೆ ನಡೆಸಲಾಗಿದ್ದು, ವಿವಾದಿತ ಪ್ರದೇಶದಲ್ಲಿ ಯುದ್ಧನೌಕೆ ನಿಯೋಜಿಸಲಾಗಿದೆ ಎಂದು ಚೀನಾ ಆರೋಪಿಸುತ್ತಿದೆ. ದಕ್ಷಿಣ ಚೀನಾದ ಪ್ರದೇಶವು ಚೀನಾದ ಪಾಲಿಗೆ ಬಹುಮುಖ್ಯವಾಗಿದ್ದು, ಈ ಪ್ರದೇಶದಲ್ಲಿ ಅನ್ಯರಾಜ್ಯಗಳ ನೌಕೆಗಳನ್ನು ನಿಯೋಜಿಸುವುದಕ್ಕೆ ಒಪ್ಪಲು ಸಾಧ್ಯವಿಲ್ಲ ಎಂದು ಚೀನಾ ಹೇಳುತ್ತಿದೆ.

ಲಡಾಖ್ ನಲ್ಲಿ ಚೀನಾ ತೋರುತ್ತಿರುವ ಹಗೆತನವನ್ನು ನಿಯಂತ್ರಿಸುವುದಕ್ಕೆ ಭಾರತವು ಈ ಕ್ರಮವನ್ನು ತೆಗೆದುಕೊಂಡಿದೆ. ದಕ್ಷಿಣ ಚೀನಾ ಪ್ರದೇಶದಲ್ಲಿ ಯುದ್ಧನೌಕೆ ನಿಯೋಸುವುದರಿಂದ ಚೀನಾದ ಮೊಂಡುತನಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದು ಭಾರತೀಯ ಮೂಲದಳಿಂದ ತಿಳಿದು ಬಂದಿದೆ.

English summary
Indian Warships Deployed In South China Sea After Galwan Clash. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X